Tuesday, November 17, 2009

ಪ್ರತಿಕ್ರಿಯೆ

ನಾವು ಯಾವುದೇ ಒಂದು ಕೆಲಸಕ್ಕೆ ಕೈಹಾಕಿ ಯಶಸ್ವಿಯಾಗಲಿ/ಸೋಲಾಗಲಿ ಅನುಭವಿಸಿದಾಗ, ನಮ್ಮ ಹಿತೈಷಿಗಳ ಶುಭಾಶಯಗಳು/ಸಮಾಧಾನದ ನುಡಿಗಳು ನಮ್ಮಲ್ಲಿ ಏನೋ ಒಂದು ಹೊಸ ಚೇತನವನ್ನು ಮೂಡಿಸುತ್ತವೆ. ನಮ್ಮನ್ನು ಹುರಿದುಂಬಿಸುತ್ತವೆ.
ಹೀಗೆ, ನಮ್ಮ ಲೇಖನಗಳನ್ನು ಯಾರಾದರು ಓದಿ, ಅವನ್ನು ಮೆಚ್ಚಿಕೊಂಡು ಪ್ರತಿಕ್ರಿಯಿಸಿದಾಗ ತುಂಬಾ ಕುಶಿಯಗುತ್ತೆ.
ಕೆಲವೊಮ್ಮೆ ಕೆಲವೊಂದು ಪ್ರತಿಕ್ರಿಯೆಗಳು ಆಶ್ಚರ್ಯವನ್ನು ಮೂಡಿಸುತ್ತವೆ.
ನಾನು ಕೆಲವು ತಿಂಗಳುಗಳ ಹಿಂದೆ ಹದಿನಾರು ಎನ್ನುವ ಲೇಖನವನ್ನು ಬರೆದಿದ್ದೆ. ಆ ಲೇಖನ ಓದಿರದಿದ್ದರೆ, ಅದನ್ನು ಮೊದಲು ಓದಿ, ನಂತರ ಈ ಲೇಖನವನ್ನು ಮುಂದುವರೆಸಿ. ಇಲ್ಲದಿದ್ದರೆ ಈ ಲೇಖನಕ್ಕೆ ಸ್ವಲ್ಪ ಸ್ವಾರಸ್ಯವಿರುವುದಿಲ್ಲ.
ನನ್ನ ಆ ಲೇಖನಕ್ಕೆ ಕ್ಷಣ ಚಿಂತನೆ: ಚಿಂತನಾಲಹರಿ... ಬ್ಲಾಗಿನ ಚಂದ್ರಶೇಖರ ಅವರು ಒಂದು ಪ್ರತಿಕ್ರಿಯೆಯನ್ನು ಬರೆದಿದ್ದರು.
ಅವರ ಪ್ರತಿಕ್ರಿಯೆ ಹೀಗಿತ್ತು ನೋಡಿ.......

`ಹದಿನಾರು' ಊರಿನ ಹೆಸರು ಕೇಳಿ ಅಚ್ಚರಿಯಾಯಿತು.
ನಾವು ಹಂಪಿಗೆ ಸುಮಾರು ವರ್ಷಗಳ ಹಿಂದೆ ಹೋಗಿದ್ದೆವು. ನಾನು ಬೆಂಗಳೂರು ಬಿಟ್ಟು ಶಿವಮೊಗ್ಗೆವರೆಗೆ ಮಾತ್ರ ಹೋಗಿದ್ದೆ. ಇದೇ ಮೊದಲ ಬಾರಿ ಹಂಪಿ, ಬಳ್ಳಾರಿ ಕಡೆ ಹೋಗಿದ್ದು. ಅಲ್ಲಿ ಒಂದು ಊರ ಹೆಸರು `ಕುಡಿತಿನಿ' ಅಂತಿತ್ತು. ಈ ಊರಿನ ಹೆಸರನ್ನು ನಮಗೆ ನಾವೇ ಹೇಳಿಕೊಂಡರೆ ಹೇಗೆ? ಅನ್ನಿಸಿತ್ತು.
ಸಸ್ನೇಹಗಳೊಂದಿಗೆ,

ಅವರ ಪ್ರತಿಕ್ರಿಯೆಯಲ್ಲಿ ಬರೆದ `ಕುಡಿತಿನಿ' ಎನ್ನುವ ಊರಿನ ಹೆಸರು ತುಂಬಾ ವಿಚಿತ್ರವಾಗಿದೆ ಅಲ್ವಾ...?
ಅದನ್ನು ಕೇಳಿ ನಿಮಗೆ ನಗು ಬಂದಿರಬೇಕು ಅಲ್ವಾ.... ?
ನಗುವ ಮುಂಚೆ ನಾನು ಹೇಳುವುದನ್ನೊಮ್ಮೆ ಕೇಳಿ...
ಇದು ನನ್ನ ಸ್ವಂತ ಊರಿನ ಹೆಸರು... ನಾನು ಹುಟ್ಟಿ ಬೆಳದ ಊರು. ಈಗಲೂ ಅದು ನನ್ನೂರು. :)
ಈಗ ನೀವು ನಗಬಹುದು... ಹ್ಹಾ ಹ್ಹಾ ಹ್ಹಾ...

ನಮ್ಮ ಊರಿನ ಹೆಸರನ್ನು ಒಬ್ಬೊಬ್ಬರು ಒಂದೊಂದು ರೀತಿಯಾಗಿ ಕರಿಯುತ್ತಾರೆ.
ಒಬ್ಬರು 'ಕುಡತಿನಿ', ಇನ್ನೊಬ್ಬರು 'ಕುಡಿತಿನಿ', ಹಾಗೆ ಇನ್ನೂ ಕೆಲವರು 'ಕುಡ್ತಿನಿ' ಎನ್ನುತ್ತಾರೆ.
ಯಾವುದೇ ರೀತಿಯಲ್ಲಿ, ನಮ್ಮ ಊರಿನ ಹೆಸರನ್ನು ಕರೆದರೂ ನಿಮಗೆ ತಮಾಷೆಯಾಗಿಯೇ ಕಾಣಿಸುತ್ತದೆ.
Share/Save/Bookmark

12 comments:

 1. ಹೌದು, ಕೆಲವು ಊರಿಗೆ ಅದರದೇ ಇತಿಹಾಸವಿದೆ,
  ಅದನ್ನು ಓದಿ ಅರ್ಥೈಸಿಕೊಂಡರೆ ನಗು ಬರದು
  ನಿಮ್ಮ ಬರಹ ಒಪ್ಪುವಂಥದ್ದೇ

  ReplyDelete
 2. ಹ ಹಾ ಹಾ ....... ಮಂಗಳೂರಿನಲ್ಲಿ ಕೆಲವೊಂದು ಊರಿನ ಹೆಸರನ್ನ ನಗಬೇಕೋ, ಬೇಡವೋ ಎಂದೇ ಅರ್ಥ ಆಗಲ್ಲ..... ಅದರ ಬಗ್ಗೆ ಯಾವಾಗಲಾದರೂ ಬರೀತೇನೆ....

  ReplyDelete
 3. ಕುಡಿತಿನಿ, ಹಾ ಹಾ, ಸಕತ್ ವಿಚಿತ್ರ ವಾಗಿ ಇದೆ... ಇದೆ ರೀತಿ ನಾನು ಚಿಕ್ಕವರಿದ್ದಾಗ ನೋಡಿದ ಒಂದು ಹಾಸ್ಯ ನೆನಪಾಗುತ್ತೆ.. ಕುಣಿಗಲ್ ಊರಿನಿಂದ , ತುಮಕೂರಿಗೆ ಹೋಗಬೇಕಾದರೆ "ಬಕ್ತರ ಹಳ್ಳಿ" ಎಂಬ ಊರು ಸಿಗುತ್ತೆ.. ಊರಿನ ಮುಂದೆ ಕಲ್ಲಿನಲ್ಲಿ ಈ ಊರಿನ ಹೆಸರು ಬರೆದಿದ್ದರು, ಆದರೆ ಯಾರೋ ಕಿಡಿಗೇಡಿಗಳು, "ಬಕ್ತರ" ಎಂಬ ಹೆಸರನ್ನು ಬಕರ ಎಂದು ತಿದ್ದಿದ್ದರು,,ಪಾಪ ಅಂದಿನಿಂದ ಆ ಹಳ್ಳಿ "ಬಕರ ಹಳ್ಳಿ" ಅಂತಲೇ ಪ್ರಸಿದ್ದಿ ಆಗಿತ್ತು

  ReplyDelete
 4. ಇಂಥಹ ಎಲ್ಲ ಊರಿನ ಒಂದು ಸಣ್ಣ ಲಿಸ್ಟ್ ಮಾಡಿದ್ರೆ ಫುಲ್ ಡೇ ನಗಾಡ್ತಾ ಇರಬಹುದೇನೋ...
  ನಿಮ್ಮವ,
  ರಾಘು.

  ReplyDelete
 5. ಹಹಹ್ಹಹ್ಹಹಾ....ಕುಡಿತಿನಿ....
  ಸಕ್ಕತಾಗಿದೆ ಹೆಸರು....ಹೆಸರು ಹಾಗೆ ಇದ್ದ ಮೇಲೆ ಎಷ್ಟು ಕುಡಿಯಬಹುದು ಜನ ಅಲ್ಲಿ.....

  ReplyDelete
 6. ಚೆನ್ನಾಗಿದೆ ಹೆಸರು ಪುರಾಣ :)

  ReplyDelete
 7. Please write some in english or hindi...it will be so kind of you shiva....

  ReplyDelete
 8. ಹಹಹ ಕುಡಿತೀನಿ... ನಾನಲ್ಲ ಹಹಹ ಚೆನ್ನಾಗಿದೆ ಊರ ಹೆಸರು.

  ReplyDelete
 9. :) ನಿಜ. ಕೆಲ ಊರುಗಳ ಹೆಸರುಗಳು ಹಾಗೇನೆ.

  ಕಡೆಕಾರು, ಬಸ್ರೂರು ನನಗೆ ಸಧ್ಯಕ್ಕೆ ನೆನಪಾಗುವಂಥ ಊರುಗಳು.

  ReplyDelete
 10. ನಿಜಕ್ಕೂ ಚೆನ್ನಾಗಿದೆ ನಿಮ್ಮ ಊರ ಹೆಸರು :) :)

  ReplyDelete
 11. shivavarae,

  nivu nimma oorina dodavaranna keli aaesuru yaak banthuanthaa kelilva

  ReplyDelete
 12. ಗುರುಮೂರ್ತಿ ಅವರೇ,
  ನಿಜ ಮಾತು ಸರ್.
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
  ========

  ದಿನಕರ ಮೊಗೇರ ಅವರೇ,
  ನಿಜ ಸರ್. ವಿಚಿತ್ರ ವಿಚಿತ್ರ ಹೆಸರುಗಳಿವೆ ನಮ್ಮಲ್ಲಿ.
  ಲಿಸ್ಟ್ ಮಾಡಿದ್ರೆ, ಒಂದು ಪುಸ್ತಕ ಬರಿಯಬಹುದು ಅನ್ಸುತ್ತೆ... :P
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
  ========

  ಗುರು ಅವರೇ,
  ನೀವು ಹೇಳಿದ 'ಭಕ್ತರ ಹಳ್ಳಿ', 'ಬಕರ ಹಳ್ಳಿ' ಆಗಿದ್ದು ಕೇಳಿ ನಗು ಬಂತು.
  ಹೀಗೆ ನಮ್ಮೂರ ಹೆಸರು ಕೂಡ ಬದಲಾಗಿ ಹೋಗಿದೆ.
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
  ========

  ರಘು ಅವರೇ,
  ನಿಜ ರೀ. ಇದನ್ನೆಲ್ಲಾ ಲಿಸ್ಟ್ ಮಾಡಿ ಒಂದು ಪುಸ್ತಕ ಬರೆದರೆ, ಒಂದು ದಿನ ಫುಲ್ ನಗಬಹುದು...
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
  ========

  ಮಹೇಶ್ ಅವರೇ,
  ನಮ್ಮೂರು ಹೆಸರು ಚನ್ನಾಗಿದೆ ಅಲ್ವಾ...
  ಅಂದಹಾಗೆ, ನಮ್ಮೂರಲ್ಲಿ ಜನ ಫುಲ್ ಕುಡಿತಾರೆ ರೀ... i mean ವಾಟರ್ ನ..
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
  ========

  ಆನಂದ ಅವರೇ,
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
  ========

  Anonymous (Manisha),
  I will try to write a English blog in future.
  thanks a lot for your support and trusted on my writing..
  ========

  ಮನಸು ಅವರೇ,
  ಕುಡಿತಿನಿ ಅಂತಲ್ಲ ಹೇಳಬಾರದು ರೀ.. ಹ್ಹಾ ಹ್ಹಾ ಹ್ಹಾ.
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
  ========

  ಚಕೋರ ಅವರೇ,
  ಕಡೆಕಾರು, ಬಸ್ರೂರು.....ಹೀಗೆ ಎಲ್ಲವನ್ನು ಲಿಸ್ಟ್ ಮಾಡಿ ಒಂದು ಪುಸ್ತಕ ಬರೆದರೆ, ಒಂದು ದಿನ ಫುಲ್ ನಗಬಹುದು...
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
  ========

  ಸುಮ ಅವರೇ,
  ಲೇಖನ ಓದಿ, ನಮ್ಮ ಊರಿನ ಹೆಸರು ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು... :)
  ========

  Anonymous ಅವರೇ,
  ನಾನು ಕೇಳಿದೀನಿ.. ಅವರು ಹೇಳುತ್ತಾರೆ, ಮುಂಚೆ ಅದು "ಕುಂತಳ್ ನಗರ' ಅಂತ ಇತ್ತಂತೆ. ಜನರ ಬಾಯಲ್ಲಿ ಅದು ಬದಲಾಗಿ ಬದಲಾಗಿ ಅದು 'ಕುಡಿತಿನಿ' ಆಯ್ತು ಅಂತಾರೆ.
  ಇದರ ಬಗ್ಗೆ ಇನ್ನಸ್ಟು ಮಾಹಿತಿ ಹುಡುಕಾಡಿ ಹೇಳುತ್ತೇನೆ.
  ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

  ReplyDelete