ಚಾಮುಂಡಿ ಬೆಟ್ಟಕ್ಕೆ ಮೊದಲ ಬಾರಿಗೆ ಹೋಗ್ತಾ ಇರೋದು.
ಸರಿ, ನಮ್ಮ ಏರಿಯಾದಿಂದ ನಗರ ಬಸ್ ನಿಲ್ದಾಣಕ್ಕೆ ಹೋದೆವು. ಅಲ್ಲಿಂದ ಇನ್ನೊಂದು ಬಸ್ ಹಿಡಿದು ಚಾಮುಂಡಿ ಬೆಟ್ಟಕ್ಕೆ ಹೋಗಬೇಕಾಗಿತ್ತು.
ನಗರ ಬಸ್ ನಿಲ್ದಾಣದಲ್ಲಿದ್ದ ಒಬ್ಬ ವ್ಯಕ್ತಿಯನ್ನು ಹೀಗೆ ಕೇಳಿದೆ:
ನಾನು: "ಸಾರ್, ಇಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ಬಸ್ ಎಲ್ಲಿ ನಿಲ್ತಾವೆ ? ".
ಆ ವ್ಯಕ್ತಿ: " ಓ ಅಲ್ಲಿ ಒಂದು ಬಸ್ ಕಾಣಿಸ್ತಾ ಇದೆಯಲ್ಲ, ಅಲ್ಲೇ ಬಸ್ ನಿಲ್ಲೋದು. ಅಲ್ಲಿ ಯಾವದೋ ಬಸ್ಸ ನಿಂತ ಹಾಗಿದೆ ನೋಡು. ಆ ಬಸ್ ಹೋದರು ಹೋಗಬಹುದು, ಹೋಗಿ ನೋಡಿ.." ಎಂದು ದೂರದಲ್ಲಿದ್ದ ಒಂದು ಬಸ್ ತೋರಿಸುತ್ತಾ ಹೇಳಿದ.
ನಾವು ಸ್ನೇಹಿತರೆಲ್ಲ ಸೇರಿ ಆ ಬಸ್ಸಿನತ್ತ ಓಡಿ ಹೋಗಿ, ಆ ಬಸ್ ಒಳಹೊಕ್ಕು, ಆ ಬಸ್ಸಿನಲ್ಲಿದ್ದ ಒಬ್ಬ ವ್ಯಕ್ತಿಯನ್ನು ಕೇಳಿದೆ:
ನಾನು: " ಸಾರ್, ಈ ಬಸ್ಸು ಎಲ್ಲಿಗೆ ಹೋಗುತ್ತೆ..? "
ಆ ವ್ಯಕ್ತಿ: "ಹದಿನಾರು"
ನಾನು: "ಹದಿನಾರು..?.. ಬಸ್ ನಂಬರ್ ಅಲ್ಲ ಸ್ವಾಮಿ.., ಬಸ್ ಎಲ್ಲಿಗೆ ಹೋಗುತ್ತೆ..?"
ಆ ವ್ಯಕ್ತಿ: "ಅಯ್ಯೋ, ಹದಿನಾರು ಸ್ವಾಮಿ"
ನಾನು: "ಅಲ್ಲ ರೀ, ನಾನು ಕೇಳ್ತಾ ಇರೋದು, ಈ ಬಸ್ಸು ಎಲ್ಲಿಗೆ ಹೋಗುತ್ತೆ ..?"
ಆ ವ್ಯಕ್ತಿ ಮತ್ತದೇ ರಾಗದಲ್ಲಿ "ಹದಿನಾರು" ಎಂದ.
ನನಗೆ ತೆಲೆಬಿಸಿಯಾಯ್ತು.
ಸರಿ, ಬಸ್ಸಿನ ಫಲಕದಲ್ಲಿ ಏನು ಹಾಕಿದರೆ ನೋಡಲು ಬಸ್ಸಿನಿಂದ ಇಳಿದು, ಫಲಕ ನೋಡಿದೆ.
ಆಗ ಗೊತ್ತಾಯ್ತ.. ಆ ಬಸ್ಸು ಹೋಗುತ್ತಿದ್ದ ಸ್ಥಳದ ಹೆಸರೇ "ಹದಿನಾರು". ಬಸ್ಸಿನ ನಂಬರ್ ಬೇರೆಯೇ ಇತ್ತು.
ನಾವೆಲ್ಲರೂ ಗಹಗಹಿಸಿ ನಕ್ಕೆವು.
ನಮ್ಮ ಕೆಲವು ಊರುಗಳ ಹೆಸರುಗಳು ಹೀಗೆ ಅಲ್ಲವೇ..?
ಉದಾಹರಣೆಗೆ:
ಸೋಮುವಾರಪೇಟೆ, ಶನಿವಾರಸಂತೆ...

ಹದಿನಾರು ಎಂಬ ಹೆಸರಿನ ಊರಿದೆಯೆಂದು ನನಗೆ ಗೊತ್ತಿರಲಿಲ್ಲ. ಎಂಥೆಂತಾ ಹೆಸರುಗಳಲ್ವಾ?
ReplyDeleteಶಿವಪ್ರಕಾಶ,
ReplyDeleteಹದಿನಾರನೆಯ ದಿನಾಂಕದಂದೇ, ನೀವು ‘ಹದಿನಾರು’ ಎನ್ನುವ ಊರಿನ ಬಗೆಗೆ ಬರೆದದ್ದು
ಎಂಥಾ ಕಾಕತಾಳೀಯ!
ಅರೆರೆ...ಹದಿನಾರು ಅಂತ ಊರ ಹೆಸರೇ...ವ್ಯಕ್ತಿಯ ಮಾತು ಕೇಳಿ ನಗು ಬಂತು...ಅದನ್ನೇ ಸಿಹಿ ಹದಿನಾರು[sweet sixteen]ಅಂತ ಬದಲಿಸಿದರೇ ಇನ್ನೂ ಮಜವಲ್ವಾ..!
ReplyDeleteಶಿವು....
ReplyDeleteಸಕತ್ ಆಗಿದೆ...
ಸಿಕ್ಕಾಪಟ್ಟೆ ನಗು ಬಂತು.....
ಅಭಿನಂದನೆಗಳು...
ಶಿವು ಹದಿನಾರು ಊರಹೆಸರು ಪ್ರಾಸವೂ ಕೂಡುತ್ತದೆ....
ReplyDeleteಹದಿನಾರು ಅಂತ ಊರ ಹೆಸರಾ?? ಪುಣ್ಯಕ್ಕೆ ಒಂಬತ್ತು ಅಂತ ಇಟ್ಟಿಲ್ಲ :-)...
ReplyDeletehahaha super!!!!
ReplyDelete`ಹದಿನಾರು' ಊರಿನ ಹೆಸರು ಕೇಳಿ ಅಚ್ಚರಿಯಾಯಿತು.
ReplyDeleteನಾವು ಹಂಪಿಗೆ ಸುಮಾರು ವರ್ಷಗಳ ಹಿಂದೆ ಹೋಗಿದ್ದೆವು. ನಾನು ಬೆಂಗಳೂರು ಬಿಟ್ಟು ಶಿವಮೊಗ್ಗೆವರೆಗೆ ಮಾತ್ರ ಹೋಗಿದ್ದೆ. ಇದೇ ಮೊದಲ ಬಾರಿ ಹಂಪಿ, ಬಳ್ಳಾರಿ ಕಡೆ ಹೋಗಿದ್ದು. ಅಲ್ಲಿ ಒಂದು ಊರ ಹೆಸರು `ಕುಡಿತಿನಿ' ಅಂತಿತ್ತು. ಈ ಊರಿನ ಹೆಸರನ್ನು ನಮಗೆ ನಾವೇ ಹೇಳಿಕೊಂಡರೆ ಹೇಗೆ? ಅನ್ನಿಸಿತ್ತು.
ಸಸ್ನೇಹಗಳೊಂದಿಗೆ,
ಹದಿನಾರು ಎಂಬ ಊರ?
ReplyDeleteಎಂತೆಂತ ಹೆಸರು ಇದೆ ಮರೈರೆ!
'ಹದಿನಾರು' ಊರಿನ ಹೆಸರಾ? ನಿಮ್ಮ ಅನುಭವ ನಗು ತರಿಸಿತು!
ReplyDeleteಅದು ಬಹುಶಃ 'ಹದಿನೂರು' ಇರ್ಬೇಕು.. ಜನರ ಬಾಯಲ್ಲಿ 'ಹದಿನಾರು' ಆಗಿರ್ಬಹುದು.. :)
ReplyDeleteಮಲ್ಲಿಕಾರ್ಜುನ.ಡಿ.ಜಿ. ಅವರೇ,
ReplyDeleteನಿಜ ರೀ. ನಮ್ಮಲ್ಲಿ ಕೆಲವು ವಿಚಿತ್ರ ಊರುಗಳ ಹೆಸರುಗಳಿವೆ.
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
===========
sunaath ಅವರೇ,
ನನಗೂ ನೀವು ಹೇಳಿದ ಮೇಲೆ ಆಶ್ಚರ್ಯವಾಯಿತು. ನಿಜಕ್ಕೂ ಇದು ಕಾಕತಾಳೀಯ.
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
===========
shivu ಅವರೇ,
ಅವತ್ತು ನಾವು ಸ್ನೇಹಿತರೆಲ್ಲ ಸೇರಿ ತುಂಬಾ ನಕ್ಕೆವು.
ನೀವು ಹೇಳಿದ ಹಾಗೆ ಸಿಹಿ ಹದಿನಾರು ಅಂತ ಬದಲಾಯಿಸಿದರೆ ಹುಡುಗಿಯರು ತಮ್ಮ ಊರ ಹೆಸರು ಹೇಳಲು ತುಂಬಾ ಸಂಕೋಚ ಪಡ್ತಾರೆ.
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
===========
ಪ್ರಕಾಶ್ ಅವರೇ,
ಲೇಖನ ಓದಿ, ನಕ್ಕು, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
===========
umesh desai ಅವರೇ,
"ಹದಿನಾರು ಊರಹೆಸರು ಪ್ರಾಸವೂ ಕೂಡುತ್ತದೆ"
ಕ್ಷಮಿಷಿ, ನನಗೆ ನಿಮ್ಮ ಪ್ರತಿಕ್ರಿಯೆ ಅರ್ಥವಾಗಲಿಲ್ಲ :( ...
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
===========
ರವಿಕಾಂತ ಗೋರೆ ಅವರೇ,
ಒಂಬತ್ತು ಅಂತ ಊರು ಇದ್ದರೂ ಇರಬಹುದು. :P
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
===========
ಮನಸು ಅವರೇ,
ಲೇಖನ ಓದಿ, ನಕ್ಕು, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
===========
ಕ್ಷಣ... ಚಿಂತನೆ... ಅವರೇ,
ನಿಮ್ಮ ಪ್ರತಿಕ್ರಿಯೆ ನೋಡಿ ನನಗೆ ಆಶ್ಚರ್ಯವಾಯಿತು.
ನೀವು ಹೇಳಿದ "ಕುಡಿತಿನಿ" ನನ್ನ ಊರಿನ ಹೆಸರು.
ನಾನು ಹುಟ್ಟಿ ಬೆಳೆದ ಊರು ಅದು. ಈಗಲೂ ಅದು ನನ್ನ ಊರು.
ನಮ್ಮ ಮನೆ ಅಲ್ಲೇ ಇರೋದು. ಕೆಲಸ ಮಾಡುತ್ತಿರುವದು ಬೆಂಗಳೂರಿನಲ್ಲಿ ಅಸ್ಟೆ.
ನನಗೆ ನಿಮ್ಮ ಪ್ರತಿಕ್ರಿಯೆ ನೋಡಿ ತುಂಬಾ ಕುಶಿಯಾಯ್ತು.
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
===========
ಬಾಲು ಅವರೇ,
ನಿಜ. ನಮ್ಮಲ್ಲಿ ಇನ್ನು ವಿಚಿತ್ರ ಊರುಗಳ ಹೆಸರುಗಳಿವೆ.
ಅಂತ ಹೆಸರುಗಳನ್ನೆಲ್ಲ ಒಂದು ಕಡೆ ಸೇರಿಸಿದರೆ ಒಂದು ದೊಡ್ಡ ಪಟ್ಟಿ ಆಗುತ್ತದೆ.
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
===========
ರೂpaश्री ಅವರೇ,
ಹೌದು ರೀ. ನಮ್ಮಲ್ಲಿ ಇನ್ನು ವಿಚಿತ್ರ ಊರುಗಳ ಹೆಸರುಗಳಿವೆ.
ಲೇಖನ ಓದಿ, ನಕ್ಕು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
===========
ಉಮೇಶ ಬಾಳಿಕಾಯಿ ಅವರೇ,
ಹೌದು ರೀ.. ನನಗೂ ಹಾಗೆ ಅನಿಸುತ್ತಿದೆ.
ನನ್ನ ಊರಿನ ಹೆಸರು "ಕುಂತಳ್ ನಗರ" ಅಂತ ಇತ್ತತ್ತೆ,
ಆದರೆ ಅದು ಇವತ್ತು ಕುಡಿತಿನಿ ಆಗಿದೆ. ಅದಕ್ಕೆ ಒಂದು ದೊಡ್ಡ ಕಥೆ ಇದೆ.
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
naanu sULe baavi a0te e0ba hesaru kELidde. Adare I hesaru Igale kELiddu.
ReplyDeletenimmi0daagi hosa hesaru tiLiduko0De :-) :-)
ಹಾಯ್ ಶಿವು...
ReplyDeleteಇನ್ನೂ ಇಂತಹ ಹೆಸರು ನಮ್ಮ ಕರುನಾಡಿನಲ್ಲಿ ಸಾಕಷ್ಟು ಸಿಗುತ್ತವೆ..
ಉತ್ತರ ಕನ್ನಡದಲ್ಲಿ
"ಮಂಕಿ" ಅಂತಾ ಒಂದು ಊರು ಇದೆ..
ಅದೂ ಅಲ್ಲದೇ ಈ ಕುರಿತು ನನ್ನಲ್ಲಿ ಸಾಕಷ್ಟು ವಿಷಯಾನೂ ಇದೆ..
ಸ್ವಲ್ಪ ದಿನಗಳಲ್ಲಿ ನನ್ನ ಬ್ಲಾಗಿನಲ್ಲಿ ಈ ಬಗ್ಗೆ ಬರೀತೀನಿ...
ಇಂತಿ ನಿಮ್ಮ ಪ್ರೀತಿಯ,
ಶಿವಶಂಕರ ವಿಷ್ಣು ಯಳವತ್ತಿ.
www.shivagadag.blogspot.com
ರೂಪ ಅವರೇ,
ReplyDeleteಹೌದು ರೀ. ನಮ್ಮಲ್ಲಿ ಬಹಳ ವಿಚಿತ್ರ ಊರುಗಳ ಹೆಸರುಗಳಿವೆ.
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
===========
ಶಿವಶಂಕರ್ ಅವರೇ,
ಹೌದು ಶಿವ. ನೀನು ಹೇಳಿದ್ದು ನಿಜ.
ಇನ್ನು ವಿಚಿತ್ರ ವಿಚಿತ್ರ ಹೆಸರುಗಳಿವೆ.
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
hahahahaha...super agi ide...
ReplyDeleteRaaghu...
ರಘು ಅವರೇ,
ReplyDeleteಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
evrything thing is ok but i have cunfused u have told me only hadinaru antha oor idhe antha helidya adre a oor hadinar bage yenu helila ..........................
ReplyDeleteರೂಪ ಅವರೇ,
ReplyDeleteಹದಿನಾರು ಎನ್ನುವ ಊರು ಮೈಸೂರಿನ ಹತ್ತಿರದಲ್ಲೇ ಇದೆ.
ನಾನು ಅಲ್ಲಿಗೆ ಹೋಗಿಲ್ಲ.
ಗೂಗಲ್ ನಲ್ಲಿ ಹುಡುಕಿದೆ. ಅಲ್ಪ ಸ್ವಲ್ಪ ಮಾಹಿತಿ ಕೂಡ ಸಿಕ್ತು.
ನೀವೇ ಗೂಗಲ್ ನಲ್ಲಿ ಚೆಕ್ ಮಾಡಿ.
ಧನ್ಯವಾದಗಳು...