Friday, June 26, 2009

ನೀರು ಚಲ್ಲಬೇಡಿ

"ಏನಪ್ಪಾ ಶಿವು, ನಮಗೆ ಬುದ್ದಿ ಹೇಳೋ ಲೆವೆಲ್'ಗೆ ಬಂದ್ಬಿಟ್ಯ ?"
"ಅಯ್ಯೋ, ಕ್ಷಮಿಷಿ ಮಹಾಸ್ವಾಮಿ. ನಾನು ಅಸ್ಟೊಂದು ದೊಡ್ಡ ವ್ಯಕ್ತಿ ಅಲ್ಲ. ನನ್ನ ಲೇಖನಕ್ಕೆ ಶೀರ್ಷಿಕೆ ಅದೇ ಸರಿ ಅನಿಸ್ತು, ಅದಕ್ಕೆ ಹಾಕಿದೆ. ಅಸ್ಟೆ."
ಸರಿ, ನೇರವಾಗಿ ನಡೆದ ಘಟನೆಗೆ ಬರ್ತೀನಿ.

ನಮ್ಮ ಊರಿಂದ ೩೫ ಕಿಲೋಮೀಟರು ದೂರದಲ್ಲಿ ಒಂದು ಬೆಟ್ಟ ಇದೆ. ಆ ಬೆಟ್ಟದಲ್ಲಿ ಒಂದು ದೇವಸ್ಥಾನವಿದೆ. ಆ ದೇವಸ್ಥಾನಕ್ಕೆ ಶ್ರಾವಣ ಸೋಮವಾರಗಳಲ್ಲಿ ಬಹಳ ಜನ ಹೋಗ್ತಾರೆ. ಆ ದಿನ ರಾತ್ರಿ ಅಲ್ಲೇ ಇದ್ದು, ಮರುದಿನ ಬೆಳಿಗ್ಗೆ ಹಿಂದಿರುಗುತ್ತಾರೆ.
ಒಂದು ಶ್ರಾವಣ ಸೋಮುವಾರ ನಾನು, ನನ್ನ ತಮ್ಮ ಹಾಗು ನನ್ನ ಸ್ನೇಹಿತರು ಸೇರಿ ಹೋಗಿದ್ವಿ.
ಸಾಯಂಕಾಲದ ವೇಳೆಗೆ ದೇವರ ದರ್ಶನ ಆಯ್ತು.
ರಾತ್ರಿ ಚನ್ನಾಗಿ ಒಂದು ಹೋಟೆಲಿನಲ್ಲಿ ಊಟ ಮಾಡಿ, ದೇವಸ್ತಾನದ ಆವರಣದಲ್ಲಿದ್ದ ದೊಡ್ಡ ಸಭಾಂಗಣಕ್ಕೆ ಹೋದೆವು. ದೇವಸ್ತಾನಕ್ಕೆ ಬರುವ ಭಕ್ತರು ರಾತ್ರಿ ಅಲ್ಲೇ ಮಲಗೋದು. ಸಭಾಂಗಣ ಕಿಕ್ಕಿರಿದು ತುಂಬಿತ್ತು. ಹೇಗೋ ನಾವು ಅಲ್ಲಿ ಮಲಗಲು ಜಾಗ ಮಾಡಿಕೊಂಡೆವು.
ಅಲ್ಲೇ ಕೂತು, ಸ್ವಲ್ಪ ಹೊತ್ತು ಸ್ನೇಹಿತರೆಲ್ಲ ಸೇರಿ ಹರಟೆ ಮಾತುಗಳನ್ನಾಡಿ, ಅಲ್ಲೇ ಮಲಗಲು ಸಿದ್ದರಾದೆವು.
ಆಸ್ಟರಲ್ಲಿ ನನ್ನೊಬ್ಬ ಗೆಳೆಯ "ಲೋ, ನೀರು ಚಲ್ಲಿ ಬಂದು ಮಲಗೋಣ, ಯಾರಾದ್ರೂ ನೀರು ಚಲ್ಲೋಕೆ ಬರ್ತಿರಾ ?" ಅಂತ ಕೇಳಿದ.
ಅಲ್ಲೇ ಪಕ್ಕದಲ್ಲಿ ಚಿಕ್ಕ ಮಗುವಿನ ಜೊತೆಗಿದ್ದ ಮಹಿಳೆಗೆ ಅದು ಕೇಳಿಸಿತು, ಆಗ ಆ ಮಹಿಳೆ ಹೇಳಿದ್ಲು:
"ಅಣ್ಣ, ನೀರು ಚೆಲ್ಲಬೇಡಿ, ದಯವಿಟ್ಟು ಇಲ್ಲಿ ಕೊಡಿ.
ಮಗುಗೆ ಬಾಯಾರಿಕೆಯಾಗಿದೆ. ನೀರು ಕುಡಿಸಲು ಆಸ್ಟು ದೂರ ಹೋಗ್ಬೇಕು,
ನೀರು ಚೆಲ್ಲಿ ಯಾಕೆ ವೇಸ್ಟ್ ಮಾಡ್ತಿರ ?, ಇಲ್ಲಿ ಕೊಡಿ,
ಮಗುಗೆ ಕುಡಿಸ್ತೀನಿ"

ಆಗ ನನ್ನ ಸ್ನೇಹಿತರಿಗೆಲ್ಲ ಸಿಕ್ಕಾಪಟ್ಟೆ ನಗು ಬರುತ್ತಿದ್ದರೂ ತಡೆದುಕೊಂಡು, ಹೀಗೆ ಹೇಳಿದರು.. "ಅಕ್ಕ, ಈ ನೀರು ಕೆಟ್ಟು ಹೊಗಿದವೇ. ಇವು ಕೊಡಿಯಲು ಯೋಗ್ಯವಲ್ಲ."

ಅಂದಹಾಗೆ... ಮೂತ್ರ ವಿಸರ್ಜನೆಗೆ ನಮ್ಮ ಭಾಷೆಯಲ್ಲಿ "ನೀರು ಚಲ್ಲೋದು", "ಟ್ಯಾಂಕ್ ಕಾಲಿ ಮಾಡೋದು" ಅಥವಾ "ಹಾಡು ಹಾಡೋದು" ಅಂತ ಹೇಳ್ತಿವಿ.
ಸಾರ್ವಜನಿಕ ಸ್ಥಳಗಳಲ್ಲಿ ಬಾಯ್ಬಿಟ್ಟು ಹೇಳಲು ನಾಚಿಕೆ ಆಗುತ್ತೆ ಆಲ್ವಾ...?
Share/Save/Bookmark

32 comments:

 1. ಶಿವಪ್ರಕಾಶ್ ಅವರೇ,
  ನೀವು ನಮ್ಮನ್ನೆಲ್ಲಾ ಎಷ್ಟು ನಗಿಸುತ್ತೀರಾ ಎಂದರೆ, ನಿಮಗೆ "ವಿದೂಷಕ" ಎಂಬ ಬಿರುದನ್ನು ಕೊಟ್ಟರೆ ತಪ್ಪಾಗಲಾರದು!

  ReplyDelete
 2. ಅದನ್ನು ಹೀಗೂ ಹೇಳಬಹುದಾ...

  ReplyDelete
 3. ಶಿವಪ್ರಕಾಶ್,

  ಹಾ..ಹಾ...ಹಾ.......ಒಟ್ಟು ಏನೆಲ್ಲಾ 'ಹೊಸ ಭಾಷೆ' ಕಳಿಸ್ತಾ ಇದ್ದೀರಿ ಅಂದ್ರೆ.... :)
  ಸಧ್ಯ ಆ ಮಹಿಳೆ ಜಾಗದಲ್ಲಿ ನಾನಿರಲಿಲ್ಲವಲ್ಲ!!!!

  ReplyDelete
 4. ಹ್ಹಾ...ಹ್ಹಾ...!!

  ಸಕತ್ತಾಗಿದೆ...!!

  ReplyDelete
 5. ಹಾಹಾ! ಚೆನ್ನಾಗಿದೆ ಭಾಷಾಪ್ರಯೋಗ!
  By the way, ತಾವು ಚೆಲ್ಲಿದ ನೀರನ್ನು ತಾವೇ ಕುಡಿಯುವ ಒಬ್ಬ ಪ್ರಧಾನಮಂತ್ರಿಗಳು ಭಾರತವನ್ನು ಆಳಿ ಹೋದರು. ಅವರೇ ಮೊರಾರಜಿ ದೇಸಾಯಿ!

  ReplyDelete
 6. Please wait...

  ಹಾಡು ಹೇಳಿ ಬರ್ತೀನಿ.. ಆಮೇಲೆ ಕಾಮೆಂಟ್ ಮಾಡ್ತೀನಿ..

  ಹ್ಹ... ಹ್ಹ.. ಹ್ಹ ಹ್ಹ ಹ್ಹ

  ReplyDelete
 7. ಶಿವಪ್ರಕಾಶ ನಮ್ಮ ಊರಕಡೆ "ಸೀಟಿ" ಹೊಡೆಯುವುದು ಅಂತೇವಿ...ಮಜಾ ಬಂತು ನಿಮ್ಮ ಲೇಖನಾ ಓದಿ...

  ReplyDelete
 8. abba !! :-) :-) Bayaka0ra kilaaDigaLu. :-)

  ReplyDelete
 9. Shiva,

  I have come after along time, i know...

  I read this post of yours, in which you talk about the water usage.

  I didnt understand that line....i mean i did not get the context and its meaning...
  And why we cant use it such places.. ?

  Please explain and let me know

  ReplyDelete
 10. Its not-so easy for me to read kannada...so it always takes time for me to read one.

  Especially the ones , that are longer.

  One thing i liked about your blog, is you write it in simple kannada, which as a matter of fact i am able to understand easily..

  keep going this way..

  See you around shiva

  Cheers

  ReplyDelete
 11. hahaha enu mahan gatanegalu ive nimma battalikeyalli hahaha!!! good joke!!

  ReplyDelete
 12. ಶಿವೂ ಸರ್,

  ಸಕತ್ತಾಗಿದೆ, ನಗು ಬರ್ತಾ ಇದೆ

  ReplyDelete
 13. SSK ಅವರೇ,
  ಅಯ್ಯೋ, ಅಸ್ಟೊಂದು ಹೊಗಳಬೇಡಿ.. ನನಗೆ ನಾಚಿಕೆ ಆಗುತ್ತೆ :)
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
  ==============

  ಶಿವು ಅವರೇ,
  ಅದನ್ನು ಇನ್ನು ಬಹಳ ರೀತಿಯಲ್ಲಿ ಹೇಳಬಹುದು. ನಾನು ಹೇಳಿದ್ದು ಬರಿ ಸ್ಯಾಂಪಲ್ ಅಸ್ಟೆ.
  ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
  ==============

  Sumana ಅವರೇ,
  ಇದು ತುಂಬಾ ಚಾಲ್ತಿಯಲ್ಲಿರುವ ಭಾಷೆ ಕಣ್ರೀ... :)
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
  ==============

  ಪ್ರಕಾಶ್ ಅವರೇ,
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
  ==============

  sunaath ಅವರೇ,
  ಮೊರಾರಜಿ ದೇಸಾಯಿಯವರು ಹಾಗಿದ್ರಾ ?... ನಂಬೋಕೆ ಆಗ್ತಿಲ್ಲ.
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
  ==============

  ಶಿವಶಂಕರ್ ಅವರೇ,
  ಬೇಗ ಬಂದು ಕಾಮೆಂಟ್ ಬರೀರಿ..
  ಬಹಳ ಹೊತ್ತಿನಿಂದ ನಿಮ್ಮ ಕಾಮೆಂಟ್ ಗಾಗಿ ಕಾಯ್ತಾ ಇದೀನಿ.. :P
  ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
  ==============

  umesh desai ಅವರೇ,
  ನಿಜ ರೀ. ನಮ್ಮ ಕಡೆ ಕೂಡ ಕೆಲವರು "ಸೀಟಿ" ಹೊಡಿಯೋದು ಅಂತಾರೆ.
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
  ==============

  roopa ಅವರೇ,
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
  ==============

  Dear Mahesh,
  This article is of comedy flick.
  its bit difficult for me to translate to English. i try my level best.

  we boys use the word "ನೀರು ಚಲ್ಲೋದು" as an alternative word to say for "going to pass urine".
  as you know, its difficult to tell such words in public because some people may laugh at us.
  one of my friend asked us while we are in public place as "hey guys, i m going to spill water (throw water).. are you coming ?"
  some women having a small kid heard this and asked us: "please, don't waste water, my kid is thirst. we need to go very far to get it. please give your water to us"
  later we told her "its not good water. its a waste water. its not good to drink"
  i hope, you understood this...

  Thanks a lot for the compliments.
  Cheers
  ==============

  ಮನಸು ಅವರೇ,
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
  ==============

  ಗುರುಮೂರ್ತಿ ಅವರೇ,
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  ReplyDelete
 14. ಮಜಾ ಇದೆ ನಿಮ್ಮ ನೆನಪಿನ ಪುಟಗಳನ್ನು ತಿರುವಿ ಹಾಕುವುದರಲ್ಲಿ :-) ಹೀಗೆ ಪುಟಗಳು ತೆರೆದುಕೊಳ್ಳುತ್ತಿರಲಿ...

  ReplyDelete
 15. ಹಾ ಹಾ ಹಾ... ಚೆನ್ನಾಗಿದೆ...

  ReplyDelete
 16. ದಿವ್ಯಾ ಮಲ್ಯ ಅವರೇ,
  ನನ್ನ ನೆನಪಿನ ಪುಟಗಳನ್ನು ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
  ==============

  nataraj babu ಅವರೇ,
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
  ==============

  ರವಿಕಾಂತ ಗೋರೆ ಅವರೇ,
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  ReplyDelete
 17. ಹ್ಹ ಹ್ಹ... ಏನೆಲ್ಲಾ ಕೋಡ್(code)ಗಳು!!

  ಟ್ಯಾಂಕ್ ಖಾಲಿ ಮಾಡೋಡು ಕೇಳಿದ್ದೆ.

  ReplyDelete
 18. ರೂpaश्री ಅವರೇ,
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  ReplyDelete
 19. ಹಾಯ್, ಶಿವಪ್ರಕಾಶ್ ಒಂದೇ ಉಸುರಿನಲ್ಲಿ ನಿಮ್ಮ ಬ್ಲಾಗ್ ಓದಿ ಮುಗಿಸಿದೆ, ಆಹಾ ಅನ್ನಿಸುವಂತಾ ನಿಮ್ಮ ನವಿರಾದ ಬರಹದ ಶೈಲಿ ನನಗೆ ತುಂಬಾ ಹಿಡಿಸಿತು, ಜೊತೆಗೆ ಸಣ್ಣ ಸಣ್ಣ ಸಂಗತಿಗಳನ್ನು ನೀವು ಹೇಳಿರುವ ರೀತಿ ಅಪರೂಪ ಅಂತ ಹೇಳಬೇಕು...

  ತೀರಾ ದೊಡ್ಡದಾಗಿ ಬರೆಯದೇ, ಕಿರಿ ಕಿರಿ ಅನ್ನಿಸದೇ ಬರೆಯೋ ನಿಮ್ಮ ಬ್ಲಾಗ್ ಗೆ ನಾನು ಇನ್ನು ಪರಮನೆಂಟ್ ಓದುಗ. ಬರೀತಾ ಇರಿ.
  ನಿಮ್ಮವ

  ReplyDelete
 20. ಶ್ರೀನಿವಾಸಗೌಡ ಅವರೇ,
  ನಿಮ್ಮ ಅಮೂಲ್ಯವಾದ ಪ್ರತಿಕ್ರಿಯೆ ಓದಿ, ನನಗೆ ತುಂಬಾ ಕುಶಿಯಾಯಿತು.
  ನಿಮ್ಮ ಪ್ರತಿಕ್ರಿಯೆ ನನ್ನನು ಮೂಕವಿಸ್ಮಯನನ್ನಾಗಿ ಮಾಡಿದೆ.
  ನಿಮ್ಮ ಪ್ರೋತ್ಸಾಹಕ್ಕೆ ನಾನು ಚಿರ ಋಣಿ.
  ಕೆಲಸದ ಒತ್ತಡದಿಂದ, ಕೆಲ ದಿನಗಳವರೆಗೆ ಬ್ಲಾಗ್ ಬರೆಯಲು ಆಗುವದಿಲ್ಲ. ತಪ್ಪದೆ ಆದಸ್ಟು ಬೇಗ ಒಂದು ಒಳ್ಳೆಯ ಲೇಖನದೊಂದಿಗೆ ಹಿಂದಿರುಗುತ್ತೇನೆ.
  ಧನ್ಯವಾದಗಳು.

  ReplyDelete
 21. ವಾಹ್...ಸಕತ್ತಾಗಿದೆ.

  ReplyDelete
 22. ಸಂತೋಷ್ ಚಿದಂಬರ್ ಅವರೇ,
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
  ==============

  Chandina ಅವರೇ,
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  ReplyDelete
 23. ರವಿಕಾಂತ ಗೋರೆ ಅವರೇ,
  ನಾನು ಚನ್ನಾಗಿದಿನಿ. ನೀವು ಹೇಗಿದಿರಿ ?

  ವ್ಯಯುಕ್ತಿಕ ತೊಂದರೆಗಳ ಕಾರಣಗಳಿಂದ ಬ್ಲಾಗ್ ಬರೆಯಲು ಹಾಗು ಯಾವುದೇ ಬ್ಲಾಗ್ ಓದಲು ಆಗುತ್ತಿಲ್ಲ. ದಯವಿಟ್ಟು ಕ್ಷಮಿಷಿ.
  ಆದಸ್ಟು ಬೇಗ ಬ್ಲಾಗ್ ಲೋಕಕ್ಕೆ ಮರುಳಲು ಪ್ರಯತ್ನಿಸುತ್ತಿದ್ದೇನೆ.

  ReplyDelete
 24. ತುಂಬ ತುಂಬ ಚೆಂದ
  ನಿನ್ನ ಕಥೆ ಚೆಂದ . . .
  ಯಾವಾಗ ಬರುತ್ತೆ ಚಿನ್ನ
  ನಿನ್ನ ಮುಂದಿನ ಕಥೆ ಕಂದ .. . :-)

  -ಇಂದ್ರ-

  ReplyDelete
 25. ನಿಮ್ಮ ವೈಯಕ್ತಿಕ ಸಮಸ್ಯೆಗಳು ಬೇಗ ಪರಿಹಾರ ವಾಗಲಿ, ನೀವು ಬೇಗ ಬ್ಲಾಗ್ ಲೋಕಕ್ಕೆ ಬನ್ನಿ ಎ೦ದು ಹಾರೈಸುತ್ತೇನೆ

  ReplyDelete
 26. ಹಹಹಹ..ಹಿಂಗೂ ಹೇಳ್ತಾರಾ? ಭಾಷಾ ಪ್ರಯೋಗ ಚೆನ್ನಾಗಿದೆ. ನಿಮ್ಮಿಂದ ತಿಳಿದುಕೊಂಡಂಗಾಯಿತು
  -ಧರಿತ್ರಿ

  ReplyDelete
 27. ಇಂದ್ರ,
  ಧನ್ಯವಾದಗಳು ಇಂದ್ರ..
  ಸದ್ಯಕ್ಕೆ ಯಾವುದೇ ಲೇಖನ ಇಲ್ಲ ಕಣೋ..
  ಆದಸ್ಟು ಬೇಗ ಮರಳುತ್ತೇನೆ..
  ==============

  ರೂಪ ಅವರೇ,
  ನಿಮ್ಮ ಹಾರೈಕೆಗೆ ನಾನು ಚಿರ ಋಣಿ.
  ತಪ್ಪದೆ ಆದಸ್ಟು ಬೇಗ ಬ್ಲಾಗ್ ಲೋಕಕ್ಕೆ ಮರಳುತ್ತೇನೆ..
  ನಿಮ್ಮ ಹಾರೈಕೆಗೆ ನನ್ನ ನಮನಗಳು
  ==============

  ಧರಿತ್ರಿ ಅವರೇ,
  ಇನ್ನು ಬಹಳ ಹೆಸರುಗಳಿಂದ ಕರೆಯುತ್ತಾರೆ. ಇದು ಸ್ಯಾಂಪಲ್ ಅಸ್ಟೆ.
  ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  ReplyDelete
 28. ಶಿವಪ್ರಕಾಶರೇ, ನಿಮ್ಮ ಮಾತು ಕೇಳಿ ನನ್ನ ಹಾಡು ನೆನಪಿಗೆ ಬಂತು...ನನ್ನ ಬ್ಲಾಗಿನ ಈ ಪೋಸ್ಟನ್ನು ನೋಡಿ http://jalanayana.blogspot.com/2009/06/blog-post.html ನನಗೆ azadis@hotmail.com ಮೇಲೆ ಪ್ರತಿಕ್ರಿಯೆ ಕಳುಹಿಸಿ. ಬಹಳ ದಿನಗಳಿಂದ ನಿಮ್ಮ ಪೋಸ್ಟ್ ಕಾಣ್ತಿಲ್ಲ..?? ಬ್ಯುಸೀನಾ..?

  ReplyDelete
 29. actually , ಇಂಗ್ಲೀಷ್ ಅನುವಾದ ಇನ್ನೂ ಚೆನ್ನಾಗಿದೆ ಕಣ್ರೀ. :)

  ReplyDelete