Tuesday, June 2, 2009

ಹೆಡ್ ಲೈಟ್

ಇದು ಮೈಸೂರಿನಲ್ಲಿದ್ದಾಗ ನಡೆದ ಘಟನೆ.
ನಾನು ಬೆಳಿಗ್ಗೆ ೭ ಗಂಟೆಗೆ, ನನ್ನ ದ್ವಿಚಕ್ರ ವಾಹನದ ಮೇಲೆ ಕುಳಿತು ಹೊರಟಿದ್ದೆ.
ಮೈಸೂರು ಅಂದ್ರೆ ಕೇಳಬೇಕೆ ? ತುಂಬಾ ಪ್ರಶಾಂತವಾದ ಊರು.
ಕಾಲಿ ಕಾಲಿ ರಸ್ತೆಗಳಲ್ಲಿ ನನ್ನ ಸವಾರಿ ಹೊರಟಿತ್ತು.
ಒಂದು ಸುಂದರವಾದ ಹುಡುಗಿ ಸ್ಕೂಟಿಯಲ್ಲಿ ಕುಳಿತು ನನಗೆ ಎದುರು ಬರುತ್ತಿದ್ದಳು. ಅವಳ ಸ್ಕೂಟಿಯ ಹೆಡ್ ಲೈಟ್ (Head Light) ಬೆಳಗುತ್ತಿತ್ತು.
ಬೆಳಕಾಗಿದ್ದರೂ ಇನ್ನು ಹೆಡ್ ಲೈಟ್ ಹಾಕೊಂಡು ಬರ್ತಾ ಇರೋದನ್ನ ನೋಡಿ ಮನಸಲ್ಲೇ "ಇವಳಿಗೆ ಇನ್ನು ಬೆಳಕಾರ್ದಂಗಿಲ್ಲ....." ಅನ್ಕೊಂಡೆ.
ಹೋಗ್ಲಿ ಬಿಡು. ಹೆಡ್ ಲೈಟ್ ಉರಿತಾ ಇದೆ ಅಂತ ಅವಳಿಗೆ ಸನ್ನೆ ಮಾಡಿ ಹೇಳೋಣ ಅನಿಸಿತು.
ಸರಿ, ಹೇಳಲು ಕೈ ಮುಂದೆ ಮಾಡಲು ಹೋದಾಗ ಮನಸೇಕೋ ತಡೆಯಿತು.
ಆ ಥರ ಸನ್ನೆ ಮಾಡಿದರೆ ಅಪಾರ್ಥವಾಗಬಹುದು ಎನಿಸಿತು.
ಸನ್ನೆ ಮಾಡಲು ಹೋದ ಕೈ ಹಿಂತೆಗೆದೆ.
ಅವಳು, ನನ್ನ ಗಾಡಿಗೆ ಹತ್ತಿರ ಬರುತ್ತಿದ್ದಂತೆ, ನಾನು ಮಾಡಬೇಕೆಂದುಕೊಂಡಿದ್ದ ಸನ್ನೆ ಅವಳು ಮಾಡಿದಳು.
ನಾನಗೆ ಆಶ್ಚರ್ಯವಾಯಿತು.
ಆಗ ಗೊತ್ತಾಯ್ತ, ನನ್ನ ಗಾಡಿಯ ಹೆಡ್ ಲೈಟ್ ಕೂಡ ಉರಿತಾ ಇದೆ ಅಂತ.
Share/Save/Bookmark

31 comments:

 1. ಹಹ್ಹಾ! ತಿರುಗುಬಾಣ ಆಯ್ತಲ್ರೀ!

  ReplyDelete
 2. ಹ ಹ್ಹ ಹ್ಹ ಹ್ಹಾ.......!

  ReplyDelete
 3. sakhatthagide...i wish.i were tht girl!!!

  ReplyDelete
 4. ಶಿವಪ್ರಕಾಶ್ ಸಕತ್ತಾಗಿದೆ. ಇದನ್ನು ಓದುವಾಗ ನನಗೆ ಎರಡು ಘಟನೆಗಳು ನೆನಪಿಗೆ ಬಂದವು. ಒಂದು ಕಣ್ಣಾರೆ ಖಂಡಿದ್ದು. ಇನ್ನೊಂದು ಓದಿದ್ದು. ತೇಜಸ್ವಿ ಒಂದು ಕಡೆ ಇದನ್ನು ಬರೆದಿದ್ದಾರೆ. ವೇಗವಾಗಿ ಹೋಗುತ್ತಿರುವ ಗಾಡಿಯನ್ನು ಗಾಬರಿಗೊಂಡವರಂತೆ ತಡೆದು ಹೆಡ್ ಲೈಟ್ ಉರಿಯುತ್ತಿದೆ ಎಂದು ಹೇಳುವವರನ್ನು ಕಂಡು ಅವರು ರೇಗುತ್ತಾರೆ. ಒಮ್ಮೆ ಹಗಲು ಹೊತ್ತಿನಲ್ಲಿ ಹೆಡ್ ಲೈಟ್ ಹಾಕಿಕೊಂಡು ಮೂಡಿಗೆರೆಯ ಬೀದಿಯಲ್ಲಿ ತಿರುಗಬೇಕು, ಊರಿನ ಜನರೆಲ್ಲಾ ನನ್ನ ಸ್ಕೂಟರಿನ ಹಿಂದೆ ಓಡುತ್ತಾ ಬರುವ ದೃಶ್ಯವನ್ನು ಕಾಣಬೆಕು ಎಂದು ಮುಂತಾಗಿ ಬರೆಯುತ್ತಾರೆ. ಇನ್ನೊಂದು ಹಾಸನದಲ್ಲಿ ನಡೆದಿದ್ದು. ಶೆಟ್ಟಿ ಎನ್ನುವ ನಮ್ಮ ಸ್ನೇಹಿತನೊಬ್ಬ ಹೀಗೆ ಹಗಲು ಹೊತ್ತಿನಲ್ಲಿ ಹೆಡ್ ಲೈಟ್ ಹಾಕಿಕೊಂಡು ಹೋಗುತ್ತಿದ್ದ. ಹುಡುಗನೊಬ್ಬ ಜೋರಾಗಿ ಕೂಗಿ ಸಾರ್ ಹೆಡ್ ಲೈಟ್ ಎಂದ. ತಕ್ಷಣ ಬ್ರೇಕ್ ಹಾಕಿ ಗಾಡಿ ನಿಲ್ಲಿಸಿದ ಶೆಟ್ಟಿ ಹುಡುಗನ ಹತ್ತಿರ ಹೋಗಿ, 'ಇದು ನನ್ನ ಗಾಡಿ, ಇದರ ಕರೆಂಟ್ ಚಾರ್ಜ್ ಕಟ್ಟುವುದು ನಾನೇ, ಹೆಡ್ ಲೈಟ್ ಹಾಕಿದರೆ ನಿನಗೇನು' ಎಂದನಂತೆ. ಆ ಹುಡುಗ ಕಕ್ಕಬಿಕ್ಕಿ!!!!!!!!

  ReplyDelete
 5. ಹಹ್ಹಹ್ಹ ಚೆನ್ನಾಗಿದೆ.

  ReplyDelete
 6. shivu thumba chennagide,

  Haage nandu ondu suggestion inmunde ithara situation eanadru bandre ondusaari nim gaadi headlight na ondu bari ON madi OFF madi aaga munde baruvaverge gothagbahudu. Aadru gothaglilla andre naavu mathe nevu enmadoke agutthe...

  Alva.....

  Ramesh Kumar H S

  ReplyDelete
 7. chennagide swamy, nangu tejaswi baraha nenp aithu!!!

  ReplyDelete
 8. ಶಿವಪ್ರಕಾಶ್,

  ಹುಡುಗಿಯರು ನಮಗಿಂತ ಒಂದು ಹೆಜ್ಜೆ ಮುಂದಿರುತ್ತಾರೆ...

  ReplyDelete
 9. sunaath ಅವರೇ,
  ಹೌದು ರೀ, ನನಗೇ ತಿರುಗುಬಾಣ ಆಗ್ಬಿಡ್ತು.... :)
  ಲೇಖನ ಓದಿ, ನಕ್ಕು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  SSK ಅವರೇ.
  ಲೇಖನ ಓದಿ, ನಕ್ಕು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  ಸುಮನ ಅವರೇ,
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  Dr. B.R. Satynarayana ಅವರೇ,
  ನಾನು ಹೆಚ್ಚು ಪುಸ್ತಕಗಳನ್ನು ಓದಿಲ್ಲ..
  ಕೆಲವು ತಿಂಗಳ ಹಿಂದೆಯಸ್ಟೆ ಓದುವ ಅಭ್ಯಾಸವನ್ನು ಶುರು ಮಾಡ್ಕೊಂಡಿದೀನಿ. ತಪ್ಪದೆ ತೇಜಸ್ವಿ ಅವರು ಬರೆದ ಪುಸ್ತಕಗಳನ್ನು ಓದುತ್ತೇನೆ.
  ನೀವು ಹೇಳಿದ "ತೇಜಸ್ವಿ ಅವರು ಬರೆದ ಸನ್ನಿವೇಶಗಳು" ತುಂಬಾ ಚನ್ನಾಗಿವೆ... ಒಳ್ಳೆ ತಮಾಷೆಯಾಗಿದವೇ..
  ಹಾಗೆ ನೀವು ಹೇಳಿದ ಶೆಟ್ಟಿಯ ವಿಷಯ ಕೇಳಿ ನನಗೇ ತುಂಬಾ ನಗು ಬಂತು... ಹೀಗೂ ಉಂಟೆ ... ?... ಹ್ಹಾ ಹ್ಹಾ ಹ್ಹಾ...
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  PARAANJAPE K.N. ಅವರೇ,
  ಲೇಖನ ಓದಿ, ನಕ್ಕು, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  ರಮೇಶ್ ಅವರೇ,
  ಇನ್ಮೇಲೆ ನೀವು ಹೇಳಿದ ಹಾಗೆ ಪಾಲಿಸುತ್ತೇನೆ. :)
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  ಬಾಲು ಅವರೇ,
  ನಾನು ಹೆಚ್ಚು ಪುಸ್ತಕಗಳನ್ನು ಓದಿಲ್ಲ.. ಕೆಲವು ತಿಂಗಳ ಹಿಂದೆಯಸ್ಟೆ ಓದುವ ಅಭ್ಯಾಸವನ್ನು ಶುರು ಮಾಡ್ಕೊಂಡಿದೀನಿ. ತಪ್ಪದೆ ತೇಜಸ್ವಿ ಅವರು ಬರೆದ ಪುಸ್ತಕಗಳನ್ನು ಓದುತ್ತೇನೆ.
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  shivu ಅವರೇ,
  ಹೌದು ಶಿವು, ನನಗು ಅವತ್ತೇ ಗೊತ್ತಯ್ತು... ಹ್ಹಾ ಹ್ಹಾ ಹ್ಹಾ
  ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

  ReplyDelete
 10. omme namma officer obru tumkurnalli scooty hudugide sanne maadi head light uritha irodannu elidaru aste.. avalu nillisi jagala aadidalu.....

  sadya.. neevu sanne madade iddidde ollede aythu,.apaartha agalillavalla... saaku..

  (apaara artha=apartha)

  inthi nimma prithiya,,

  shiva gadag

  www.shivagadag.blogspot.com

  ReplyDelete
 11. ಶಿವಪ್ರಕಾಶ್....

  ನಾವು ಆ ಸನ್ನೆ ಮಾಡಿದರೆ
  ಅಪಾರ್ಥವಾಗುತ್ತದೆ....

  ಅದೇ ಸನ್ನೆ ಹೆಣ್ಣುಮಕ್ಕಳು ಮಾಡಿದರೆ
  ಪಥ್ಯವಾಗುತ್ತದೆ...

  ಹ್ಹಾ....ಹ್ಹಾ... ಸಕತ್ ಆಗಿದೆ....

  ReplyDelete
 12. ಹೆಹೆಹೆಹೆ ಮಸ್ತು ಮಸ್ತು..ಹೆಡ್ ಲೈಟು ಅಲ್ಲ, ಟ್ಯೂಬ್ ಲೈಟು..!!!
  -ಧರಿತ್ರಿ

  ReplyDelete
 13. Chennaghi Yedhey kan ri nemma Story

  ReplyDelete
 14. ಶಿವಶಂಕರ್ ಅವರೇ,
  ಹು ರೀ, ನಾನು ಕೂಡ ಸ್ವಲ್ಪದರಲ್ಲಿ ಬಚಾವ್ ಆದೆ..
  ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  ಪ್ರಕಾಶ್ ಅವರೇ,
  ನಾವು ಆ ಸನ್ನೆ ಮಾಡುವುದು ತುಂಬಾ danger ರೀ. ಏನಾದ್ರು ಆಗಬಹುದು... :)...
  ಲೇಖನ ಓದಿ, ನಕ್ಕು, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  ರವಿಕಾಂತ ಗೋರೆ ಅವರೇ,
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  ಶಂಕರ ಪ್ರಸಾದ ಅವರೇ,
  ನಿಮ್ಮ ಹಾಗು ನಮ್ಮ ಮೈಸೂರೆ.... :)
  ಲೇಖನ ಓದಿ, ನಕ್ಕು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  ಧರಿತ್ರಿ ಅವರೇ,
  ನನ್ನ ಟ್ಯೂಬ್ ಲೈಟು ಅಂತಿರ ? ಅನ್ನಿ ಅನ್ನಿ ... ನಿಮ್ ಟೈಮ್.. ಅನ್ನಿ ಅನ್ನಿ .... ಹ್ಹಾ ಹ್ಹಾ ಹ್ಹಾ...
  ಲೇಖನ ಓದಿ, ನಕ್ಕು, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  Anonymous ಅವರೇ,
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

  ReplyDelete
 15. ಈ ತರಹ ಹಾಸ್ಯ ಲೇಖನಗಳು ಎಷ್ಟಿವೆ ನಿಮ್ಮ "ನೆನಪಿನ ಪುಟಗಳಲ್ಲಿ"?

  ReplyDelete
 16. ಶಿವೂ,
  ತುಂಬಾ ಸೊಗಸಾಗಿದೆ ನಿಮ್ಮ ಕಥೆ,
  ಕೆಲವೊಮ್ಮೆ ಬೇರೆಯವರ ಬಗ್ಗೆ ಉಪದೇಶ ಕೊಡ್ತೀವಿ ಆದರೆ ನಾವೇ ಆ ತಪ್ಪು ಮಾಡಿರ್ತಿವಿ ಆಲ್ವಾ,

  ReplyDelete
 17. ಅಂತರ್ವಾಣಿ ಅವರೇ,
  ನನ್ನ ಬಳಿ ಬಹಳಷ್ಟು ಹಾಸ್ಯ ಲೇಖನಗಳು ಇದಾವೆ..
  ನಿಮ್ಮ ಬಳಿ ಕೂಡ ಇರ್ತಾವೆ, ನೀವು ಗುರಿತಿಸಬೇಕು ಅಸ್ಟೆ .... ಸಣ್ಣ ಸಣ್ಣ ಸುಂದರ ಸನ್ನಿವೇಶಗಳು ನಮಗೆ ತುಂಬಾ ಸಂತೋಷ ಕೊಡ್ತವೆ...
  ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  ಗುರುಮೂರ್ತಿ ಅವರೇ,
  ಕೆಲವೊಂದ್ಸರಿ ನಾವೇ ತಪ್ಪು ಮಾಡಿ, ಬೇರೆಯವರನ್ನು ಬಯ್ದುಬಿಡ್ತಿವಿ...
  ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

  ReplyDelete
 18. ನಿಜ ಶಿವಪ್ರಕಾಶ್, ಎಷ್ಟೋ ಸಲ ನಾವು ಇನ್ನೊಬ್ಬರ ತಪ್ಪು ಹುಡುಕುತ್ತಿರುತ್ತೇವೆ, ಆದರೆ ನಮ್ಮಲ್ಲೇ ಆ ತಪ್ಪು ಇರುವುದು ನಾವು ಗಮನಿಸಿರುವುದೇ ಇಲ್ಲ. ನಿಮ್ಮ ಬರಹ ತಿಳಿ ಹಾಸ್ಯದಿಂದ ಕೂಡಿದೆ

  ReplyDelete
 19. ನಿಮ್ಮ ಬರಹಗಳು ಚಿಕ್ಕದಾಗಿದ್ದರೂ ನಗಿಸುವುದರಲ್ಲಿ ಭಾರೀ ಗಟ್ಟಿಯಾಗಿವೆ.
  ನಮ್ಮೆಲ್ಲರ ಆರೋಗ್ಯಕ್ಕೆ ಇಂಥಹ ಬರಹಗಾರರು ಅತ್ಯವಶ್ಯಕ.

  ReplyDelete
 20. ha!!! ha!!! girl is very smart !!! :-) :-)

  ReplyDelete
 21. ha ha ha.. hudgi thumba joraagidaale ha.... :)
  baravanige thumba chennagide...

  ನನ್ನ ಬ್ಲಾಗಿನಲ್ಲಿ 'ಅಮ್ಮನ ಮನ ನೋಯಿಸಿದ್ದಕ್ಕೆ ದೇವರು ಶಾಪವಿತ್ತನಾ....?!' ಅನ್ನೋ ಒಂದು ಬರಹ ಹಾಕಿದ್ದೇನೆ. ಬಿಡುವಾದಾಗ ಒಮ್ಮೆ ಭೇಟಿ ಕೊಟ್ಟು, ಅನಿಸಿಕೆ ತಿಳಿಸಿ...
  http://ranjanashreedhar.blogspot.com/

  ಧನ್ಯವಾದಗಳು...
  ರಂಜನ ಶ್ರೀಧರ್ ....

  ReplyDelete
 22. ಸಕತ್ತಾಗಿದೆ ಶಿವಪ್ರಕಾಶ್...

  ReplyDelete
 23. Deepasmitha ಅವರೇ,
  ನೀವು ಹೇಳಿದ್ದು ನಿಜ, ತಿಳಿದೋ ತಿಳಿಯದೆಯೋ ಈ ಥರ ತಪ್ಪು ಮಾಡ್ತಿವಿ...
  ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  ಚಂದಿನ ಅವರೇ,
  ನಿಮ್ಮ ಪ್ರತಿಕ್ರಿಯೆ ನನಗೆ ಬರೆಯಲು ಸ್ಫೂರ್ತಿ..
  ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  roopa ಅವರೇ,
  ನಿಜ ರೀ ಆ ಹುಡುಗಿ ತುಂಬಾ ಸ್ಮಾರ್ಟ್...
  ಎಸ್ಟೆ ಆಗ್ಲಿ ಹುಡುಗಿರು ಸ್ಮಾರ್ಟ್ ಅಲ್ವಾ ?
  ಲೇಖನ ಓದಿ, ನಕ್ಕು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  ರಂಜನ ಶ್ರೀಧರ್ ಅವರೇ,
  ಹುಡುಗಿರಂದ್ರೆನೆ ಜೋರು ಅಲ್ವಾ :P
  ತಾಮಷೆಗೆ ಹೇಳಿದೆ, ಬೇಜಾರ ಮಾಡ್ಕೋಬೇಡಿ....
  ನಿಮ್ಮ ಲೇಖನ ಓದಿದೆ, ತುಂಬಾ ಚನ್ನಾಗಿದೆ. ಮನಸಿಗೆ ಮುಟ್ಟುವ ಹಾಗೆ ಬರೆದಿದ್ದೀರಿ...
  ಲೇಖನ ಓದಿ, ನಕ್ಕು, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  ಪ್ರಭು ಅವರೇ,
  ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

  ReplyDelete
 24. ಶಿವಪ್ರಕಾಶ್,
  ಎದುರು ಬರುತ್ತಿರುವ ಹುಡುಗಿಯ ಕಣ್ಣಲ್ಲಿ ನಿಮ್ಮ ಬೆಳಕು(ಗಾಡೀದು!) ಕಾಣಲಿಲ್ವಾ?!!

  ReplyDelete
 25. ಮಲ್ಲಿಕಾರ್ಜುನ.ಡಿ.ಜಿ. ಅವರೇ,
  ಅಯ್ಯೋ ನನ್ನ ಕಣ್ಣು ಅಸ್ಟೊಂದು ಸೂಕ್ಷ್ಮ ಇಲ್ಲ ರೀ...
  ಅದು ಅಲ್ಲದೆ ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡುವಸ್ಟು ಧೈರ್ಯ ನನಗಿಲ್ಲ.. :(..
  ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

  ReplyDelete
 26. Anonymous ಅವರೇ,
  ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

  ReplyDelete
 27. sorry for responding very late ..( i am new fan to shiv sir ).. one more incident happened in u r life ( from Bangalore to bellary highway) ..

  ReplyDelete
 28. hai Rohini,
  ha ha... don't say fan yaar..
  nanage nachike agutte...
  Sure, i will write that incident soon..
  thanks for supporting me..

  ReplyDelete