Wednesday, January 20, 2010

ಎಲ್ಲ ಮರೆತಿರುವಾಗ

ಈ ಘಟನೆ ಎರೆಡು ವರ್ಷದ ಹಿಂದೆ ನಡೆದಿದ್ದು.

ನನ್ನ ಮನೆಯ ಹತ್ತಿರದಲ್ಲೇ ಒಂದು ಸುಂದರವಾದ ಉದ್ಯಾನವನ ಇದೆ. ನಾನು ಜಾಗಿಂಗ್ ಮಾಡಲು ಅಪರೂಪಕ್ಕೊಮ್ಮೆ ಅಲ್ಲಿಗೆ ಹೋಗುತ್ತೇನೆ.
ಹೀಗೆ ಒಮ್ಮೆ ಜಾಗಿಂಗ್ ಮಾಡಲು ಉದ್ಯಾನವನದ ಒಳಗೆ ಹೋದೆ. ಅಲ್ಲಿ ಒಂದು ಧಾರಾವಾಹಿಯ ಶೂಟಿಂಗ್ ನಡೆಯುತ್ತಿತ್ತು.
ಈ ಉದ್ಯಾನವನದಲ್ಲಿ, ವಾರದಲ್ಲಿ ಒಂದು ಬಾರಿಯಾದರೂ ಯಾವುದಾದರೂ ಒಂದು ಧಾರಾವಾಹಿಯ ಶೂಟಿಂಗ್ ನಡೀತಾ ಇರುತ್ತದೆ.
ಅಲ್ಲಿ ನನಗೆ ಪರಿಚಯವಿದ್ದ ಒಬ್ಬ ಕಿರುತರೆ ಕಲಾವಿದ ಕಾಣಿಸಿದ.
ಆ ಕಲಾವಿದ ನನಗಿಂತ ನನ್ನ ತಮ್ಮನಿಗೆ ತುಂಬಾ ಪರಿಚಯ. ಒಂದೆರಡು ಬಾರಿ ಅವರು ನಮ್ಮ ಮನೆಗೂ ಬಂದಿದ್ದರು.
ನಾನು, ನನ್ನ ತಮ್ಮ ಹಾಗು ಅವರು ಸೇರಿ ಒಂದೆರೆಡು ಬಾರಿ ಹೋಟೆಲ್ನಲ್ಲಿ ಟೀ ಕೂಡ ಕುಡಿದಿದ್ದೆವು.

ಅವರು ಇನ್ನೊಬ್ಬ ಕಿರುತೆರೆ ಕಲಾವಿದನ ಜೊತೆ ಅಲ್ಲಿ ಮಾತನಾಡುತ್ತ ನಿಂತಿದ್ದರು. ನಾನು ಅವರನ್ನು ಮಾತನಾಡಿಸಲು ಹೋದೆ.
ಅವರ ಹತ್ತಿರ ಹೋಗಿ "ಹಲೋ ಸರ್, ಹೇಗಿದ್ದೀರಿ" ಎಂದೆ.
ಅವರು "ನಾನು ಚನ್ನಾಗಿದೀನಿ. ನೀವು ಹೇಗಿದೀರಿ..?" ಎಂದು ಆತ್ಮೀಯವಾಗಿ ಕೇಳಿದರು.
ನಾನು "ನಾನು ಚನ್ನಾಗಿದೀನಿ ಸರ್. ಮತ್ತೆ ಏನ್ ವಿಶೇಷ ಸರ್, ಬಹಳದಿನಗಳಿಂದ ನೀವು ನಮ್ಮ ಮನೆಯ ಕಡೆಗೆ ಬಂದೆ ಇಲ್ಲ." ಎಂದೆ.
ಅವರು "ಇಲ್ಲ ರೀ, ಸ್ವಲ್ಪ ಕೆಲಸ ಜಾಸ್ತಿ ಇರೋದ್ರಿಂದ ಬರೋದಕ್ಕೆ ಆಗಲಿಲ್ಲ." ಎಂದರು.
ಹೀಗೆ ಸ್ವಲ್ಪ ಹೊತ್ತು ಮಾತನಾಡಿಸಿದೆ. ನಾನ್ಯಾರು ಅಂತ ಅವರಿಗೆ ಗೊತ್ತಗಿಲ್ಲವೇನೋ ಎನ್ನುವ ಸಂಶಯ ಬಂತು.
ಅದಕ್ಕೆ ಅವರಿಗೆ ಕೇಳಿದೆ... "ನಾನ್ಯಾರು ಅಂತ ಗೊತ್ತಾಯ್ತ ಸರ್...?"
ಆಗ ಅವರು..."ಸಾರೀ ರೀ... ಗೊತ್ತಾಗ್ಲಿಲ್ಲ..." ಎಂದರು..
ನನಗೆ ನಗು ಬಂದು..."ನಾನು ಸರ್, ವೀರೇಶ್ ಅವರ ಅಣ್ಣ, ಶಿವಪ್ರಕಾಶ್" ಎಂದೆ.
ಆಗ ಅವರಿಗೆ ನಾನ್ಯಾರು ಎಂದು ಅರ್ಥವಾಗಿ "ಒಹ್... ಕ್ಷಮಿಸಿ ಶಿವು... ಮರೆತುಬಿಟ್ಟಿದ್ದೆ... ಹೇಗಿದಾನೆ ವೀರೇಶ್...?" ಎಂದು ಹೇಳಿ ನನ್ನ ತಮ್ಮ ಹಾಗು ನಮ್ಮ ಮನೆಯವರನ್ನು ವಿಚಾರಿಸಿದರು.
ಒಂದು ಸ್ವಲ್ಪ ಹೊತ್ತು ಹಾಗೆ ಮಾತನಾಡಿದ ನಂತರ ನಾನು "ಯಾವುದು ಸರ್ ಈ ಧಾರಾವಾಹಿ?" ಎಂದೆ.
ಆಗ ಅವರು "ಎಲ್ಲ ಮರೆತಿರುವಾಗ..." ಎಂದರು..
ಅವರ ಪಕ್ಕದಲ್ಲೇ ನಿಂತಿದ್ದ ಇನ್ನೊಬ್ಬ ಕಿರುತೆರೆ ಕಲಾವಿದ "ಅದಕ್ಕೆ ರೀ, ನಿಮ್ಮನ್ನೂ ಮರೆತುಬಿಟ್ಟಿದ್ದಾರೆ" ಎಂದು ಚಟಾಕಿ ಹಾರಿಸಿದರು.
Share/Save/Bookmark

26 comments:

 1. ha...ha..haa...chennagide..good narration.

  ReplyDelete
 2. ಚೆನ್ನಾಗಿದೆ .. ಎಲ್ಲ ಮರೆತಿರುವಾಗ ಹ್ಹಾ ಹ್ಹಾ :)

  ReplyDelete
 3. :-) che papa, hogli bidi, neevu nenapisida meladru nimma guruthu sikthalla avarige.

  ReplyDelete
 4. ಹಹಹ, ಶಿಪ್ರಕಾಶ್ ನಿಮ್ಮ ಬ್ಲಾಗಿನ ಶೀರ್ಷಿಕೆ ತೋರಿಸ್ಬೇಕಿತ್ತು ನಿಮ್ಮ ಮನೆಗೆ ಬಂದಾಗ ಅವರಿಗೆ....ನೆನೆಪಿನ ಪುಟಗಳಲ್ಲಿ ಎಲ್ಲ ಮರೆತಿರುವಾಗ....ಹಹಹ..ಚನ್ನಾಗಿದೆ.

  ReplyDelete
 5. ಎಲ್ಲ ಮರೆತಿರುವಾಗ....
  ಏನ್ ಹೇಳ್ಬೇಕೊ ಗೊತ್ತಾಗ್ತಾ ಇಲ್ಲ...!!!!!!

  ReplyDelete
 6. :) :) :)ಪಾಪ...ಆದ್ರೆ ಪರಿಚಯ ಗೊತ್ತಾಗ್ದೇ ಅಷ್ಟೊತ್ತು ನಿಮ್ಮೊಂದಿಗೆ ಮಾತಾಡಿದ್ದು ಹೇಂಗೆ ಅಂತ?!!

  ReplyDelete
 7. ಎಷ್ಟೋ ಸಲ ನಾವೂ ಹೀಗೆ ಮಾಡುತ್ತೇವೆ. ಮದುವೆ ಮುಂತಾದ ಸಮರಂಭಗಳಲ್ಲಿ ಯಾರು ಯಾರೋ ಬಂದು ವಿಚಾರಿಸುತ್ತಾರೆ. ಅವರು ಯಾರು ಅಂತು ನೆನಪಾಗದಿದ್ದರೂ ಹಿ ಹಿ ಹಿ ಅಂತ ಮಾತಾಡಿಸುತ್ತೇವೆ. ಧಾರಾವಾಹಿ ಶೀರ್ಷಿಕೆಗೆ ಸರಿಯಾಗಿದೆ ಅವರ ನಡವಳಿಕೆ

  ReplyDelete
 8. ಚೆನ್ನಾಗಿದೆ :)

  ಪರಿಚಯ ಆಗದಿದ್ದರೂ ನಿಮ್ಮ ಜೊತೆ ನಗುನಗುತ್ತಾ ಮಾತಾಡಿದರಲ್ಲ... ಮೆಚ್ಕೋಬೇಕು ಅವರನ್ನ :)

  ReplyDelete
 9. ಕಾಲೇಜಿನ ದಿನಗಳಲ್ಲಿ ಜನರು ಕೆಲವು ಬಾರಿ ನನ್ನ ಹಾಗೂ ನನ್ನ ತ೦ಗಿಯನ್ನು ಗುರುತಿಸುವುದರಲ್ಲಿ ವ್ಯತ್ಯಾಸ ಮಾಡಿಕೊ೦ಡು,ತಿಳಿದ ನ೦ತರ ಓ ನೀನಾ,ನಿನ್ನ ತ೦ಗಿ ಅ೦ದ್ಕೊಡ್ ಬಿಟ್ಟೆ ಅನ್ನುವ ಪ್ರಸ೦ಗಗಳು ಇರುತ್ತಿದ್ದವು.ನಿಮ್ಮ ಬರಹದಿ೦ದ ಆ ಸ೦ದರ್ಭಗಳೆಲ್ಲಾ ನೆನಪಾಯ್ತು. ಧನ್ಯವಾದಗಳು.

  ReplyDelete
 10. hahah chennagide.. joke samayakke takkanagide aa daaravaahi hesaru kooda.

  ReplyDelete
 11. ಹಹಹಹಾ....
  ನಾನು ಒಂದು ಸಾರಿ ಹೆಸರು ಮರೆತಿದ್ದೆ......ಮುಖ ಪರಿಚಯ ಇತ್ತು.....ಆದರೂ ಮಾತಾಡಿಸಿ ನಿಧಾನವಾಗಿ ಹೆಸರು ನೆನಪು ಮಾಡಿಕೊಂಡೆ.....
  ಚೆನ್ನಾಗಿತ್ತು ನಿರೂಪಣೆ..

  ReplyDelete
 12. ಮರೆಯದೇ ಶೂಟಿಂಗಿಗೆ ಬಂದಿದ್ದರಲ್ಲಾ! ಅಥವಾ ಬೇರೇ ಯಾವದೋ ಶೂಟಿಂಗಿಗೆ
  ಬಂದುಬಿಟ್ಟಿದ್ದರೊ?

  ReplyDelete
 13. ಎಲ್ಲಾ ಮರೆತಿರುವಾಗ... ಛೆ ಅದೇನು ಬರ್ದಿದ್ರಿ ಬ್ಲಾಗ್ ನಲ್ಲಿ?? ನಾನು ಯಾವುದನ್ನು ಓದಿದೆ? :-)

  ReplyDelete
 14. ಧಾರವಾಹಿಯ ಪ್ರಭಾವ ಎಷ್ಟು ಚೆನ್ನಾಗಿ ಪ್ರಭಾವ ಬೀರಿರಬಹುದು...ಅಲ್ವಾ...

  ReplyDelete
 15. ಚೆನ್ನಾಗಿದೆ, ಅವರು ಎಲ್ಲ ಮರೆತಿರುವಾಗ ನಿಮ್ಮನ್ನು ಹೇಗೆ ನೆನಪಿಡಲು ಸಾಧ್ಯ. ನೀವು ಮಾತ್ರ ನನ್ನನ್ನು ಮರೀ ಬೇಡೀಪ್ಪಾ !!!

  ReplyDelete
 16. ಓದಿದ ಕೂಡಲೇ ಒಮ್ಮೆ ಮಂದಹಾಸ...!! ಚೆನ್ನಾಗಿದೆ ಸ್ಟೋರಿ...
  ನಿಮ್ಮವ,
  ರಾಘು.

  ReplyDelete
 17. papa! ella maratiruvaga! sadya nimma veeresh'nna avarannooooo maratidre :~)............. 'nenapige baradavaru' anta new 'dhaaravahi'ne madbekagi baratittenu alvendri! ...

  ReplyDelete
 18. ನಿಮಗೆ ನನ್ನ ನೆನಪಿದೆ ಅಂದುಕೊಂಡಿದ್ದೀನಿ, ನಾವು ಒಮ್ಮೆ ಅನಿರೀಕ್ಷಿತವಾಗಿ ಭೇಟಿ ಆಗಿದ್ವಿ ಎಲ್ಲಿ ಎಂದು ಹೇಳಿ ನೋಡೋಣ :)

  ಶರಶ್ಚಂದ್ರ ಕಲ್ಮನೆ

  ReplyDelete
 19. ಚನ್ನಾಗಿ ಬರೆದಿದ್ದೀರಿ.. ಎಲ್ಲಾ ಮರೆತಿರುವಾಗ..........

  ReplyDelete
 20. "ಎಲ್ಲ ಮರೆತಿರುವಾಗ..." just like my friend gane......

  ReplyDelete
 21. @Subrahmanya Bhat, ...
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  Ranjita, ...
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  @Nisha,
  ಹಾ. ಆಮೇಲಾದ್ರು ಜ್ಞಾಪಕ ಅಯ್ತಾಲ್ಲ. ಪುಣ್ಯಕ್ಕೆ.
  ಪ್ರತಿಕ್ರಿಯೆಗೆ ಧನ್ಯವಾದಗಳು..
  ============

  @Azad ,
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  @ಚುಕ್ಕಿಚಿತ್ತಾರ,
  ಪರವಾಗಿಲ್ಲ ಬಿಡಿ. ಅರ್ಥ ಆಗುತ್ತೆ.. ಹ್ಹ ಹ್ಹ ಹ್ಹ...
  ಪ್ರತಿಕ್ರಿಯೆಗೆ ಧನ್ಯವಾದಗಳು..
  ============

  @ಸೀತಾರಾಮ. ಕೆ.,
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  @ತೇಜಸ್ವಿನಿ ಹೆಗಡೆ,
  ಒಂದೊಂದು ಸಾರಿ ನಾವು ಕೂಡ ಹಾಗೆ ನಟಿಸುತ್ತೇವೆ ಅಲ್ಲವೇ..?
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  @ದೀಪಸ್ಮಿತ,
  ನಿಜ ಸರ್. ಹೀಗೆ ಬಹಳಷ್ಟು ಬಾರಿ ನಮ್ಮೊಂದಿಗೆ ಆಗುತ್ತೆ.
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  @ಸುಧೇಶ್ ಶೆಟ್ಟಿ,
  ಹೌದು ಹೌದು. ಅದಕ್ಕೆ ಮೆಚ್ಚಲೇ ಬೇಕು...
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  @ಮನಮುಕ್ತಾ,
  ನೀವು ನಿಮ್ಮ ತಂಗಿ ಅವಳಿ-ಜವಳಿ ಅನ್ಸುತ್ತೆ..
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  @ಸುಗುಣ,
  ಥ್ಯಾಂಕ್ಸ್ ಅಕ್ಕಯ್ಯ...
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  @ಮಹೇಶ್,
  ಹೌದು ಮಾಮ... ಒಮ್ಮೊಮ್ಮೆ ಹಾಗಾಗುತ್ತೆ..
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  ReplyDelete
 22. @ಸುನಾಥ್,
  ಹಾಗಾಗದಿದ್ದರೆ ಸಾಕು ಪಾಪ.
  ಪ್ರತಿಕ್ರಿಯೆಗೆ ಧನ್ಯವಾದಗಳು..
  ============

  @ರವಿಕಾಂತ ಗೋರೆ,
  ಹ್ಹ ಹ್ಹ ಹ್ಹ.. ಯಾಕ್ರೀ ಅಸ್ಟೊಂದು Confusion.. :P
  ಪ್ರತಿಕ್ರಿಯೆಗೆ ಧನ್ಯವಾದಗಳು..
  ============

  @ಮಾಲತಿ,
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  @ಶಿವು,
  ಹ್ಹ ಹ್ಹ ಹ್ಹ.. ನಿಜ ನಿಜ...
  ಪ್ರತಿಕ್ರಿಯೆಗೆ ಧನ್ಯವಾದಗಳು..
  ============

  @PARAANJAPE K.N.,
  ನಿಮ್ಮನ್ನ ಮರೆಯೋದ..? ಚಾನ್ಸ್ ಇಲ್ಲ ಬಿಡಿ..
  ಪ್ರತಿಕ್ರಿಯೆಗೆ ಧನ್ಯವಾದಗಳು..
  ============

  @ದಿನಕರ ಮೊಗೇರ,
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  @ರಘು,
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  @Snow White,
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  @ಗುರು ಕುಲಕರ್ಣಿ,
  ಹ್ಹ ಹ್ಹ ಹ್ಹ... ನಿಜ ನಿಜ.. ಆ ವಿಷಯದಲ್ಲಿ ಸ್ವಲ್ಪ ಲಕ್ಕಿಯಾಗಿದ್ದೆ ಬಿಡಿ..
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  @ಶರಶ್ಚಂದ್ರ ಕಲ್ಮನೆ,
  ಹೌದು.. ಎಲ್ಲೋ ನೋಡಿದೀನಿ ಅನ್ನಿಸ್ತ ಇದೆ.. ಎಲ್ಲಿ ಅಂತ ಗೆಪ್ತಿ ಆಗ್ತಾ ಇಲ್ಲ ದ್ಯಾವ್ರೆ...
  ನಾವು ಭೇಟಿಯಾದಾಗ ಸಿಮೆಂಟು, ಸೆಂಟಿಮೆಂಟು ಸಿಕ್ಕಿದರು ಅನ್ಸುತ್ತೆ.. ಹ್ಹ ಹ್ಹ ಹ್ಹ..
  ಪ್ರತಿಕ್ರಿಯೆಗೆ ಧನ್ಯವಾದಗಳು..
  ============

  @ಮನಸ್ವಿ,
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  ============

  @Anonymous,
  Hmmm... ಇರು Gani ಗೆ ಹೇಳ್ತೀನಿ...
  ಪ್ರತಿಕ್ರಿಯೆಗೆ ಧನ್ಯವಾದಗಳು..
  ============

  ReplyDelete