Monday, January 4, 2010

ಬುದ್ದಿವಂತ(ಚಿತ್ರ ಕೃಪೆ: ಅಂತರ್ಜಾಲ)

ಕೊನೆಯ ವರ್ಷದ ಡಿಪ್ಲೋಮಾ ಪರೀಕ್ಷೆ ಬರೆದು, ಫಲಿತಾಂಶಕ್ಕಾಗಿ ಕಾಯುತ್ತಿದ್ದೆ.
ಮೊದಲ ಎರಡು ವರ್ಷಗಳಲ್ಲಿ ಕಡಿಮೆ ಅಂಕಗಳನ್ನು ಪಡೆದು ಪಾಸಾಗಿದ್ದೆ. ಯಾಕೆ ಅಂತ ಕೇಳಬೇಡಿ. ಅದೊಂದು ದೊಡ್ಡ ಕಥೆ..!!!.
ಇದೇ ಕಾರಣಕ್ಕಾಗಿ ಓದುತ್ತಿದ್ದ ಆ ಕಾಲೇಜ್ ಬಿಟ್ಟು, ಬೇರೆ ಹೆಸರುವಾಸಿಯಾಗಿದ್ದ ಕಾಲೇಜ್ ಸೇರಿಕೊಂಡಿದ್ದೆ.
ಕೊನೆಯ ವರ್ಷದಲ್ಲಾದರೂ ಸ್ವಲ್ಪ ಉತ್ತಮ ಅಂಕಗಳಿಸಿ ಪಾಸಗೋಣವೆಂದು.
ಎಸ್ಟೆ ಕಷ್ಟವಾದರೂ ಸರಿ, ಈ ಕೊನೆಯ ವರ್ಷದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತಿರ್ಣನಾಗಬೇಕೆಂದು ಶ್ರಮ ಪಟ್ಟಿದ್ದೆ.

"ಫಲಿತಾಂಶ ನಾಳೆ ಬರುತ್ತದೆ..." ಎಂದು ಕೇಳಿದಾಗಿನಿಂದ, ನನ್ನ ಎದೆ ಒಂದೇ ಸಮನೆ ಬಡೆದುಕೊಳ್ಳುತ್ತಿತ್ತು. ಆ ರಾತ್ರಿ ಸರಿಯಾಗಿ ನಿದ್ದೆ ಕೂಡ ಮಾಡಲಿಲ್ಲ.
ಮರುದಿನ ಬೆಳಿಗ್ಗೆ ಬೇಗನೆ ಎದ್ದು ಬಳ್ಳಾರಿಗೆ ಬಂದೆ.
ಸೈಬರ್ ಸೆಂಟರ್ ಮುಂದೆ, ನನ್ನ ಹಾಗೆ ಬಹಳಷ್ಟು ಜನ ಜಮಾಯಿಸಿದ್ದರು.
ಸೈಬರ್ ಸೆಂಟರ್'ನವ ನನ್ನ ನಂಬರ್ ತೆಗೆದುಕೊಂಡು, ಫಲಿತಾಂಶ ಬರೆದುಕೊಳ್ಳುವಂತೆ ಹೇಳಿದ.
ಒಂದೊಂದು ವಿಷಯಗಳ ಅಂಕಗಳನ್ನು ಹೇಳುತ್ತಾ ಹೋದ.. ನಾನು ಬರೆದುಕೊಂಡೆ.
ಅಂತು ಎಲ್ಲಾ ವಿಷಯಗಳಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತಿರ್ಣನಾಗಿದ್ದೆ.
ನಾನು, ಎಲ್ಲಾ ಅಂಕಗಳನ್ನು ಸೇರಿಸಿ, ನನ್ನ ಶೇಕಡಾ ಅಂಕವನ್ನು ಲೆಕ್ಕಹಾಕಿದೆ.
ಶೇಕಡಾ 69% ಅಂಕ ಪಡೆದು ಉತ್ತಿರ್ಣನಾಗಿದ್ದೆ.
ಇದೇ ಮೊದಲಬಾರಿಗೆ ಜೀವನದಲ್ಲಿ ಇಷ್ಟು ಅಂಕ ಪಡೆದಿದ್ದು. :)
ತುಂಬಾ ಕುಶಿಯಲ್ಲಿದ್ದೆ. ಮನೆಗೆ ಬಂದು ಎಲ್ಲರಿಗೂ ಹೇಳಿ ಕುಶಿಯಿಂದ ಬೀಗಿದೆ.
ಮನೆಯಲ್ಲಿ ಎಲ್ಲರೂ ತುಂಬಾ ಸಂತೋಷಪಟ್ಟರು.

ಕಾಲೇಜಿನಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಶುಭ ಕೊರೋಣವೆಂದು ಯೋಚಿಸಿದೆ.
ಯಾರು ಹೆಚ್ಚು ಅಂಕ ಗಳಿಸಿದ್ದಾರೆ ಎಂದು ತಿಳಿಯಲು ಕಾಲೇಜಿನ ಲ್ಯಾಂಡ್'ಲೈನ್ ನಂಬರ್'ಗೆ ಫೋನಾಯಿಸಿದೆ.
ಫೋನ್ ರಿಂಗಾದ ಬಳಿಕ, ಆ ಕಡೆಯಿಂದ ಒಬ್ಬ ವ್ಯಕ್ತಿ ಫೋನ್ ಎತ್ತಿ "ಹಲೋ" ಎಂದರು.
ನನಗೆ ತುಂಬಾ ಪರಿಚಯವಿದ್ದವರ ಧ್ವನಿ ಅದು. ನಮ್ಮ ಕಂಪ್ಯೂಟರ್ ಸೈನ್ಸ್ ವಿಭಾಗದ HOD ಅಲೀಂ ಸರ್ ಅವರ ಧ್ವನಿ ಎಂದು ತಿಳಿಯಿತು.
ನಾನು "ಹಲೋ ಸರ್, ನನಗೆ ಒಂದು ಮಾಹಿತಿ ಬೇಕಾಗಿತ್ತು...."
ಅಲೀಂ ಸರ್ ... "ಏನು ಬೇಕಾಗಿತ್ತು....?"
ನಾನು "ಸರ್, ಈ ವರ್ಷ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಪಾಸಾದವರು ಯಾರು ಎಂದು ತಿಳಿದುಕೊಳ್ಳಬೇಕಾಗಿತ್ತು..."
ಅಲೀಂ ಸರ್... "ನೀವು ಯಾರು ಮಾತಾಡ್ತಾ ಇರೋದು....?".
ನಾನು.." ಸರ್, ನಾನು ಶಿವಪ್ರಕಾಶ್ "
ಅಲೀಂ ಸರ್..."Congratulations.... You are the topper in Computer Science...."
ನನಗೆ ಆಶ್ಚರ್ಯವಾಯ್ತು... ನಾನು "ಶಿವಪ್ರಕಾಶ್" ಎಂದು ಹೇಳಿದ್ದು ಅವರಿಗೆ "ಶಿವು" ಎಂದು ಕೇಳಿಸಿರಬೇಕು. ಯಾಕೆಂದರೆ ನಮ್ಮ ಕ್ಲಾಸ್ಸಿನಲ್ಲಿದ್ದುದು ಮೂವರು ಶಿವು'ಗಳು... ನಾನು ಅಸ್ಟೊಂದು ಬುದ್ದಿವಂತನೂ ಅಲ್ಲ.
ನಾನು ಸಣ್ಣ ಧ್ವನಿಯಲ್ಲಿ.."ಸರ್, ನಾನು ಶಿವಪ್ರಕಾಶ್" ಎಂದೆ..
ಅಲೀಂ ಸರ್... "ಹೌದು ನೀವೇ... ನಮ್ಮ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದು ಪಾಸಗಿರೋದು..."
ನನಗೆ ನಂಬಲು ಸಾಧ್ಯವಾಗಲಿಲ್ಲ.
ಮತ್ತೊಂದು ಪ್ರಶ್ನೆಹಾಕಿದೆ.. "ಸರ್, Second heighest ಯಾರದು?, ಎಷ್ಟು ಅಂಕ...?" ಎಂದು ಕೇಳಿದೆ.
ಅಲೀಂ ಸರ್.. "ಸಂತೋಷ್... 73.xx %"
ನನಗೆ ಆಶ್ಚರ್ಯವಾಯ್ತು. ನನಗೆ ಬಂದಿರೋದು 69%, ಸಂತೋಷ್'ಗೆ ಬಂದಿರೋದು 73.xx %... ಹಾಗಾದರೆ ಅವನೇ ಹೆಚ್ಚು ಅಂಕ ಗಳಿಸಿದವನು ಅಲ್ಲವೇ...?
ನನಗೆ ಅರ್ಥವಾಗಲಿಲ್ಲ.
ಕೊನೆಗೆ ತಡೆದುಕೊಳ್ಳಲಾಗದೆ ಕೇಳಿಬಿಟ್ಟೆ... "ಸರ್, ನನ್ನ ಶೇಕಡಾ ಅಂಕಗಳು ಎಷ್ಟು....?"
ಅಲೀಂ ಸರ್, ಸ್ವಲ್ಪವು ತಡ ಮಾಡದೆ ಹೇಳಿಬಿಟ್ಟರು "74%" ಎಂದು.
ಏನು ಮಾಡಬೇಕೆಂದು ತಿಳಿಯದೆ ಧನ್ಯವಾದಗಳನ್ನು ಹೇಳಿ, ಫೋನ್ ಇಟ್ಟೆ.
ಅದು ಹೇಗೆ ಸಾಧ್ಯ..?
ನನಗೆ ಬಂದಿರೋದು 69%, ಆದರೆ, ಸರ್ ಹೇಳ್ತಾ ಇದಾರೆ 74% ಅಂತ.
ಮತ್ತೊಮ್ಮೆ ನನ್ನ ಅಂಕಗಳ ಶೇಕಡಾವನ್ನು ಲೆಕ್ಕ ಹಾಕುತ್ತ ಕುಳಿತೆ.
ಬಹಳ ಹೊತ್ತು ಲೆಕ್ಕ ಹಾಕಿದ ಬಳಿಕ ತಿಳಿಯಿತು.... ನನಗೆ ಬಂದಿದ್ದು 69% ಅಲ್ಲ, 74% ಎಂದು.

ಅವತ್ತೇ ಗೊತ್ತಾಗಿದ್ದು, ನಾನು ಲೆಕ್ಕದಲ್ಲಿ ಎಷ್ಟು ಬುದ್ದಿವಂತನಿದ್ದೇನೆ ಎಂದು.
Share/Save/Bookmark

27 comments:

 1. ನೀವು ೭೪% ಅ೦ಕ ಹೇಗೆ ಪಡೆದಿದ್ದಿರಾ ಅ೦ತಾ ನಮಗೆ ಅನುಮಾನ ಶುರುವಾಗಿದೆ..............
  ಹೆ..ಹೆ....
  ಒಳ್ಳೇ ಪ್ರಸ೦ಗ

  ReplyDelete
 2. ಅನಿರೀಕ್ಷಿತವಾಗಿ ಇಂತಹ ದೊಡ್ಡ ಯಶಸ್ಸು ಸಿಕ್ಕಿದಾಗ ಉಂಟಾಗುವ ಸಂತೋಷದ ಪ್ರಮಾಣವನ್ನು ಅಳೆಯಲೂ ಸಾಧ್ಯವಿಲ್ಲ. ನನಗೂ ಇಂತಹ ಅನುಭವಗಳು ಆಗಿವೆ. ಹಾಗಾಗಿ ಊಹಿಸಬಲ್ಲೆ.

  Many Congratulations
  ಹಾರ್ದಿಕ ಅಭಿನಂದನೆಗಳು. :)

  ReplyDelete
 3. ನಿಮ್ಮ ಬುದ್ಧಿವಂತಿಕೆ ಬ್ಲಾಗಿನ ಪುಟ್ಟ ಲೇಖನಗಳಲ್ಲು ಕಾಣುತ್ತಿದೆ.

  ReplyDelete
 4. ಸ೦ತೋಷದ ತುದಿಯಲ್ಲಿದ್ದಾಗ ಕೆಲವೊಮ್ಮೆ ನಾವು ನಿ೦ತ ಜಾಗವೇ ಕಾಣಿಸದಾಗಿ ಬಿಡುತ್ತದೆ...
  ಲೆಕ್ಕಾಚಾರ ಹೆಚ್ಚು ಕಡಿಮೆ ಆಗಿ ಬಿಡುತ್ತವೆ....!!!
  ಆಲ್ ದಿ ಬೆಸ್ಟ್..

  ReplyDelete
 5. ೭೪% ಅ೦ಕ ಹೇಗೆ ಅ೦ತ ಅನುಮಾನ ಬರುತ್ತಿದೆ........
  ಎದುರುಗಡೆ ಇದ್ದವಳಿಗೂ ಅಷ್ಟೆ ಬರಬೇಕಿತ್ತು ಅಲ್ವ....
  ಹೆ..ಹೆ....
  ಅಭಿನಂದನೆಗಳು. :)

  ReplyDelete
 6. hehe gaDibiDiyalli tappu lekka maaDidarabahudu.

  Congrats da!!!

  :-)

  malathi S

  ReplyDelete
 7. ೭೪ % ಪಡೆದಿದ್ದು ಮತ್ತು ಅದರ ಲೆಕ್ಕಾಚಾರದ
  ಪ್ರಸಂಗ ಸೊಗಸಾಗಿದೆ

  ReplyDelete
 8. oh congrats sorry late agi helta ideeni ... neevu percentage lekka akodralli late adri naanu wish maadodralli late maadide..

  ReplyDelete
 9. ಶಿವಪ್ರಕಾಶ,
  ಅಭಿನಂದನೆಗಳು.

  ReplyDelete
 10. Congrats Shivu. kaleda post sonne inda ekdum 74% ge long jump madbittidira, so adakke innondu congrats. :-)

  ReplyDelete
 11. naanu kooda second PU li first class bandidde, saakshat nange namboke aagilla. ega heli valuation maadoru kooda nammantavara answer paper bagge thappu maahiti kodovaga, naavugalu chikka putta tappu maadodu dodda vishyave alla.. :) :) :)


  chennagide lekhana. Super :)

  ReplyDelete
 12. ಶಿವಪ್ರಕಾಶ್,
  ಸಕತ್ತಾಗಿದೆ ನಿಮ್ಮ ಲೆಕ್ಕ.... ನಾನು s . s .l . c ಯಲ್ಲಿದ್ದಾಗ ಹೀಗೆ ಆಗಿತ್ತು....... ತುಂಬಾ ಸೊಗಸಾಗಿ ವಿವರಿಸಿದ್ದೀರಾ.....

  ReplyDelete
 13. ಏನೇ ಬರೆಯಿರಿ..ನೀವು
  "ಲೆಕ್ಕಕ್ಕೆ,ಬುದ್ದಿವಂತ"
  ಖಂಡಿತ....

  ReplyDelete
 14. ೭೪% ಕೂಡಾ ಸರಿ ಅಂತ ನಂಬೋದು ಹೇಗೆ ಶಿವು ಮಹರಾಜ್ ! ಸರಾಗವಾಗಿ ಓದಿಸಿಕೊಂಡು ಮುದ ನೀಡುತ್ತವೆ ನಿಮ್ಮ ಲೇಖನಗಳು.

  ReplyDelete
 15. ಶಿವು...

  ಕಷ್ಟ ಪಟ್ಟು ಓದಿ, ಅಂಕ ಪಡೆಯುವದು ಬೇರೆ...
  ಲೆಕ್ಕಾಚಾರದ ಪ್ರಪಂಚವೇ ಬೇರೆ...!


  ಅಭಿನಂದನೆಗಳು...

  ReplyDelete
 16. ಶಿವಪ್ರಕಾಶ್ ಈಗೇನು ನಿಮಗೆ ಅಭಿನಂದನೆ ಹೇಳಬೇಕೊ ಅಥವಾ ಲೆಕ್ಕ ಮಾಡಲು ಹೇಳಬೇಕೊ

  ReplyDelete
 17. ಶಿವಪ್ರಕಾಶ್
  ಚೆನ್ನಾಗಿದೆ ನಿಮ್ಮ ಲೆಕ್ಕದ ತರಲೆ. ತಡವಾಗಿ ಅಭಿನ೦ದನೆ ಸ್ವೀಕರಿಸಿ. ಆದರೆ ಯಾಕೋ ನಿಮ್ಮ ಮೇಲೆ ಅನುಮಾನ ಬರ್ತಾ ಇದೆ. (ತಮಾಷೆಗೆ)

  ReplyDelete
 18. ಅಭಿನಂದನೆಗಳು ಶಿವು ಅವರೇ..ಬರಹ ಚೆನ್ನಾಗಿದೆ..

  ReplyDelete
 19. ಶಿಪ್ರ....ಈಗ ವಾಸ್ತವಕ್ಕೆ kareದು ತನ್ನಿ ನಮ್ಮನ್ನೆಲ್ಲ ಇದು ನಿಮ್ಮ ಜೀವನದಲ್ಲಿ ಆದದ್ದಾ...? ಹಾಗಿದ್ರೆ ಯಾವಾಗ ಆದದ್ದು...ಹೌದು ಅನ್ನೋದಾದ್ರೆ ನಮಗೆ ಮೊದಲೇ ಯಾಕೆ ತಿಳಿಸ್ಲಿಲ್ಲ..? ಏನು ಬಿಡು ಬರೇ ೬೯% ಅಂತಾನಾ?.....ಹಹಹ...ತ.ತಿ. ಇದ್ದೀನಲ್ಲ...? ಅಭಿನಂದನೆಗಳು.....

  ReplyDelete
 20. oh solle ge 74% heg banthu nambodike sadhyane illa hahaha.................. nice writting

  ReplyDelete
 21. ಏನು ಸರ್ ನಿಮ್ಮ ಕಥೆ :) :) ಕಾಂಗ್ರಟ್ಸ್ ಶಿವು ಅವರೇ :)

  ReplyDelete
 22. ತುಂಬಾ ಚೆನ್ನಾಗಿ ಬರೆದಿದ್ದೀರಿ.
  ಫಲಿತಾಂಶದ ವಿಷಯದಲ್ಲಿ ಯಾರನ್ನೂ ನಂಬಬಾರದು. ಆದರಲ್ಲೂ ನಮ್ಮನ್ನು ನಾವು ನಂಬಲೇಬಾರದು. ಕ್ಯಾಲ್‍ಕ್ಯುಲೇಟರ್ ಉಪಯೋಗಿಸಬೇಕು :)

  ReplyDelete
 23. ಸೀತಾರಾಮ. ಕೆ. ಅವರೇ,
  ನೀವು ಸಂದೇಹ ಪಡುವುದರಲ್ಲಿ ತಪ್ಪೇನು ಇಲ್ಲ ಬಿಡಿ... ನನ್ನಂತಹವರು ಅಪರೂಪಕ್ಕೊಮ್ಮೆ ಹೆಚ್ಚು ಅಂಕ ಬದೆದರೆ ಹೀಗೆ ಆಗೋದು....
  ಪ್ರತಿಕ್ರಿಯೆಗೆ ಧನ್ಯವಾದಗಳು.
  =======

  ತೇಜಸ್ವಿನಿ ಹೆಗಡೆ ಅವರೇ,
  ನಿಜ ಮೇಡಂ. ಕುಶಿಯಲ್ಲಿದ್ದಾಗ ಈ ತರ ತಪ್ಪುಗಳಾಗುತ್ತವೆ....
  ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...
  =======

  ರವಿಕಾಂತ ಗೋರೆ ಅವರೇ,
  ಪ್ರತಿಕ್ರಿಯೆಗೆ ಧನ್ಯವಾದಗಳು.
  =======

  ಶಿವು ಅವರೇ,
  ನಿಮ್ಮ ಮೆಚ್ಚುಗೆಗೆ ನಾನು ಚಿರಋಣಿ..
  ಪ್ರತಿಕ್ರಿಯೆಗೆ ಧನ್ಯವಾದಗಳು.
  =======

  ಚುಕ್ಕಿಚಿತ್ತಾರ ಅವರೇ,
  ನಿಜ ಮೇಡಂ. ಕುಶಿಯಲ್ಲಿದ್ದಾಗ ಈ ತರ ತಪ್ಪುಗಳಾಗುತ್ತವೆ....
  ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...
  =======

  ಮಹೇಶ್ ಅವರೇ,
  ಅಪ್ಪಟ ಚಿನ್ನದ ಮೇಲೆ ಸಂಶಯವೇ....? ಹ್ಹಾ ಹ್ಹಾ ಹ್ಹಾ...
  ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...
  =======

  ಮಾಲತಿ ಅವರೇ,
  ನಿಜ ಮೇಡಂ. ಕುಶಿಯಲ್ಲಿದ್ದಾಗ ಈ ತರ ತಪ್ಪುಗಳಾಗುತ್ತವೆ....
  ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...
  =======

  ಗುರುಮೂರ್ತಿ ಅವರೇ,
  ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
  =======

  ಮನಸು ಅವರೇ,
  ಏನ್ ಮಾಡೋದು ಅಕ್ಕಯ್ಯ, ನಾನು ಲೆಕ್ಕದಲ್ಲಿ ವೀಕು... ಹ್ಹಾ ಹ್ಹಾ ಹ್ಹಾ....
  ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...
  =======

  ಸುನಾಥ್ ಅವರೇ,
  ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...
  =======

  ನಿಶಾ ಅವರೇ,
  ಸೊನ್ನೆಯಿಂದ ೭೪ಕ್ಕೆ ಜಂಪ್... ಹ್ಹಾ ಹ್ಹಾ ಹ್ಹಾ... ಫುಲ್ ಇಂಪ್ರೂವ್ ಆಗೀದಿನಿ ಅಲ್ವಾ... ?
  ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...
  =======

  ಬಾಲು ಅವರೇ,
  ಹ್ಹಾ ಹ್ಹಾ ಹ್ಹಾ... ನಿಮ್ ರಿಸಲ್ಟ್ ಮೇಲೆ ನಿಮಗೇ ನಂಬಿಕೆ ಇರ್ಲಿಲ್ವೇ... :D
  ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
  =======

  ದಿನಕರ ಮೊಗೇರ ಅವರೇ,
  ಹಾಗಾದರೆ ನೀವು ಲೆಕ್ಕದಲ್ಲಿ ನನಗಿಂತ ಬುದ್ದಿವಂತರು... ಹ್ಹಾ ಹ್ಹಾ ಹ್ಹಾ...
  ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
  =======

  Venkatakrishna.K.K. ಅವರೇ,
  ಹ್ಹಾ ಹ್ಹಾ ಹ್ಹಾ... ಪ್ರತಿಕ್ರಿಯೆಗೆ ಧನ್ಯವಾದಗಳು.
  =======

  Subrahmanya Bhat ಅವರೇ,
  ನನ್ನನ್ನ ನಂಬಿ... ಪ್ಲೀಸ್... ಪ್ಲೀಸ್... ಹ್ಹಾ ಹ್ಹಾ ಹ್ಹಾ...
  ನನ್ನ ಲೇಖನಗಳನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು....

  ReplyDelete
 24. ವನಿತಾ ಅವರೇ,
  ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...
  =======

  ಪ್ರಕಾಶಣ್ಣ,
  ನಿಜ.. ಆತುರದಲ್ಲಿ ಲೆಕ್ಕ ಹಾಕುವಾಗ ತಪ್ಪು ಮಾಡಿಬಿಟ್ಟೆ...
  ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...
  =======

  ಉಮೇಶ್ ಅವರೇ,
  ಹ್ಹಾ ಹ್ಹಾ ಹ್ಹಾ.. ಮೊದಲು ಲೆಕ್ಕ ಮಾಡುವುದನ್ನು ಹೇಳಿಕೊಡಿ...
  ಪ್ರತಿಕ್ರಿಯೆಗೆ ಧನ್ಯವಾದಗಳು.
  =======

  PARAANJAPE K.N. ಅವರೇ,
  ಅಪ್ಪಟ ಚಿನ್ನದ ಮೇಲೆ ಸಂಶಯವೇ....? ಹ್ಹಾ ಹ್ಹಾ ಹ್ಹಾ...
  ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...
  =======

  ಆಕಾಶಬುಟ್ಟಿ ಅವರೇ,
  ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...
  =======

  ಆಜಾದ್ ಅವರೇ,
  ಈ ಘಟನೆ ನಡೆದಿದ್ದು ೨೦೦೨ರಲ್ಲಿ.. ಆಗಲೇ ಹೇಳುತ್ತಿದ್ದೆ... ಆದರೆ ಆಗಿನ್ನೂ ಬ್ಲಾಗ್ ಲೋಕಕ್ಕೆ ಕಾಲಿಟ್ಟಿರಲಿಲ್ಲ...
  ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...
  =======

  ರೂಪ ಅವರೇ,
  ಅಪ್ಪಟ ಚಿನ್ನದ ಮೇಲೆ ಸಂಶಯವೇ....? ಹ್ಹಾ ಹ್ಹಾ ಹ್ಹಾ...
  ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...
  =======

  ಸುಮ ಅವರೇ,
  ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...
  =======

  ಕಲ್ಯಾಣ್ ಅವರೇ,
  ನಾನು ಕ್ಯಾಲ್ಸಿ ಉಪಯೋಗಿಸಿದ್ದೆ.. ಅವತ್ತು ಅದು ಹೇಗೆ ತಪ್ಪು ಮಾಡಿದೆ ಅಂತ ಆ ದೇವರಿಗೇ ಗೊತ್ತು... ಹ್ಹಾ ಹ್ಹಾ ಹ್ಹಾ...
  ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...
  =======

  ಸುಧೇಶ್ ಶೆಟ್ಟಿ ಅವರೇ,
  ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete