Wednesday, July 14, 2010

ಯಾಕೋ.... ನನ್ ಟೈಮ್ ಸರಿಯಿಲ್ಲ....!!??


ನಾನು ಎದ್ದಾಗ ನನ್ನ ಮೊಬೈಲಿನಲ್ಲಿ ಸಮಯ ಬೆಳಿಗ್ಗೆ 8 AM ಆಗಿತ್ತು. ಆಫೀಸ್ ಇರೋದು 9 AM ಗೆ. ಮನೆಯಿಂದ ಆಫೀಸ್ ಗೆ ಹತ್ತು ಕಿಲೋಮೀಟರು. ಲೇಟ್ ಆಗಿ ಎದ್ದ ಪರಿಣಾಮವಾಗಿ ಬೇಗ ಬೇಗ ಸ್ನಾನ ಮಾಡಿ, ಬೆಳಿಗ್ಗಿನ ಉಪಹಾರವನ್ನು ಕೂಡ ಸೇವಿಸದೆ ಆತುರಾತುರವಾಗಿ ಬೈಕ್ ಹತ್ತಿ ಆಫೀಸಿನ ಕಡೆ ಹೊರಟೆ.

ನಾನು ದಿನಾಲು ಕಬ್ಬನ್ ಪಾರ್ಕ್ ಒಳಗಡೆ ಇರುವ ದಾರಿಯಿಂದ UB City ಕಡೆಗೆ ಹೋಗುವ ರಸ್ತೆಗೆ ಹೋಗೋದು. ನಾನು ಅಲ್ಲಿಗೆ ಬಂದಾಗ ಕಬ್ಬನ್ ಪಾರ್ಕ್ ನ ಗೇಟ್ ಮುಚ್ಚಿತ್ತು. ಕೆಲವು ವಾಹನಗಳು ಆ ಗೇಟಿನ ಮುಂದೆ ನಿಂತಿದ್ದವು. ಗೇಟ್ ಮುಂದೆ ಕಾವಲಿದ್ದ ವ್ಯಕ್ತಿಯನ್ನು ಕೇಳಿದೆ "ಯಾಕೆ ಗೇಟ್ ತೆಗೆದಿಲ್ಲ...??". ಅದಕ್ಕೆ ಆ ವ್ಯಕ್ತಿ "ಎಂಟು ಗಂಟೆಯವರೆಗೂ ತೆಗೆಯೋಲ್ಲ" ಎಂದ.

ನನಗೆ ಆಶ್ಚರ್ಯವಾಯಿತು. ನನ್ನ ಮೊಬೈಲಿನಲ್ಲಿ ಒಂಬತ್ತು ಗಂಟೆಯಾಗಿದೆ. ಇವನು ಇನ್ನೂ ಎಂಟು ಗಂಟೆಯವರೆಗೂ ತೆಗೆಯೋಲ್ಲ ಎನ್ನುತ್ತಿದ್ದನಲ್ಲ...
ಪಕ್ಕದಲ್ಲಿದ್ದ ಒಬ್ಬ ವ್ಯಕ್ತಿಯನ್ನು "ಈಗ ಟೈಮ್ ಎಸ್ಟಾಗಿದೆ..?" ಎಂದು ಕೇಳಿದೆ.
ಅದಕ್ಕೆ ಆ ವ್ಯಕ್ತಿ "7:45" ಎಂದ.
ನನಗೆ ಒಮ್ಮೆಲೇ ಸಿಟ್ಟು ಬಂತು. ನನ್ನ ರೂಮ್'ಮೇಟ್ಸ್ ನನ್ನ ಚೂಡಯಿಸಲೆಂದು ನನ್ನ ಮೊಬೈಲ್ ನ ಸಮಯವನ್ನು ಬದಲಾಯಿಸಿದ್ದರೆಂದು ತಿಳಿದು ಸಿಟ್ಟಿನಲ್ಲಿ ಬೈಯಲು ಅವರಿಗೆ ಫೋನ್ ಮಾಡಿದೆ. ಮೊದಲು ನನ್ನಿಂದ ಇದೇ ರೀತಿಯ ತೊಂದರೆ ಅನುಭವಿಸಿದ್ದ ನಟನಿಗೆ (ನಟರಾಜ್) ಕರೆಮಾಡಿದೆ.
"ಲೋ, ನನ್ ಮೊಬೈಲ್ ಟೈಮ್ ಯಾಕೋ ಚೇಂಜ್ ಮಾಡಿದೆ...?"
ನಟ "ನಾನು ಚೇಂಜ್ ಮಾಡಿಲ್ಲ." ಎಂದ.
ಅವನು ಹಾಗೇನಾದರೂ ಚೇಂಜ್ ಮಾಡಿದ್ದರೆ ಒಪ್ಪಿಕೊಳ್ಳುತ್ತಿದ್ದ. ನಡೆದಿರುವುದನ್ನು ಅವನಿಗೆ ವಿವರಿಸಿದೆ.
ಹೀಗೆ ಎಲ್ಲ ರೂಮ್'ಮೇಟ್ಸ್ ಗೆ ಕರೆಮಾಡಿ ವಿಚಾರಿಸಿದೆ. ಅವರು ಕೂಡ ಬದಲಾಯಿಸಿಲ್ಲ ಎಂದರು.
ಹೋಗ್ಲಿ ಬಿಡು ಇವತ್ತು ನನ್ನ ಟೈಮ್ ಸರಿಯಿಲ್ಲ ಅನ್ಕೊಂಡು ಆಫೀಸ್ ಗೆ ಹೋದೆ.

ಮಧ್ಯಾನ ಸುಮಾರು ಹನ್ನೆರೆಡು ಗಂಟೆಗೆ, ಮೊಬೈಲ್'ನಲ್ಲಿ ತಪ್ಪಾಗಿ ತೋರಿಸುತ್ತಿದ್ದ ಸಮಯವನ್ನು ಸರಿಪಡಿಸಲು ಮೊಬೈಲ್ ಹೊರತೆಗೆದೆ. ನನಗೆ ಇನ್ನೊಂದು ಆಶ್ಚರ್ಯ ಕಾದಿತ್ತು. ಈಗ ಸಮಯ ಸರಿಯಾಗಿಯೇ ತೋರಿಸುತ್ತಿದೆ. ನಾನು ಸರಿಪಡಿಸಿಯೇ ಇರಲಿಲ್ಲ. ಆಫೀಸ್ ನಲ್ಲಿ ಕೂಡ ನನ್ನ ಮೊಬೈಲ್ ಯಾರು ಮುಟ್ಟಿರಲಿಲ್ಲ. ಇದು ಹೇಗೆ ಸಾಧ್ಯ.??. ಮತ್ತೆ ತಲೆ ಬಿಸಿಯಾಯಿತು. ಯಾಕೆ ನನಗೆ ಹೀಗೆಲ್ಲ ಆಗ್ತಾ ಇದೆ. ಇದ್ಯಾವುದೋ ಭೂತ ಕಾಟವೇ ಇರಬೇಕು...!!!!.

ಮುಂಚೆ ಇಂತಹ ತೊಂದರೆ ಯಾರಿಗಾದರು ಆಗಿದಿಯೇ ಎಂದು ಗೂಗಲ್ ನಲ್ಲಿ ಪರಿಶೋಧಿಸಿದೆ. ನನಗೆ ಹೊಸದಾದ ಸಂಗತಿಯೊಂದು ತಿಳಿದುಬಂತು. ಇಂತಹ ಸಮಸ್ಸೆಯನ್ನು ಕೆಲವರು ಅನುಭವಿಸಿದ್ದರು. ಇಂತಹ ಸಮಸ್ಸೆಗೆ ಒಂದು ಮಾರ್ಗವನ್ನು ಕೂಡ ಸೂಚಿಸಿದ್ದರು. ಅದೇನೆಂದರೆ ನಮ್ಮ ಮೊಬೈಲ್ನಲ್ಲಿ ಇರುವ "Automatic Time Update" ಎನ್ನುವ ಸೆಟ್ಟಿಂಗ್ "DeActivate" ಮಾಡುವಂತೆ ತಿಳಿಸಿದ್ದರು. "Automatic Time Update" ಸೆಟ್ಟಿಂಗ್ "Activate" ಇದ್ದಾಗ ನಮ್ಮ ಮೊಬೈಲ್ ಸಮಯವು ಹತ್ತಿರವಿರುವ "ಟೈಮ್ ಸರ್ವರ್" ಕಡೆಯಿಂದ Update ಆಗಿರುತ್ತೆ. ಕೆಲವೊಮ್ಮೆ ತಾಂತ್ರಿಕ ದೋಷವಿರುವ "ಟೈಮ್ ಸರ್ವರ್"ನಿಂದಾಗಿ ನಮ್ಮ ಮೊಬೈಲ್ನಲ್ಲಿ ಸಮಯ ತಪ್ಪಾಗಿ "Update" ಆಗಿಬಿಡುತ್ತದೆ.

ಇವೆಲ್ಲದರ ನಡುವೆ ನಮ್ಮ ಮನಸ್ಸಿನಲ್ಲಿ ಮೂಡುವ ಪ್ರಶ್ನೆ ಒಂದೇ... ಹೀಗೂ ಉಂಟೇ...!!!!
Share/Save/Bookmark

25 comments:

  1. ಟೈಂ ಸರಿ ಇಲ್ಲ ಅಂದರೆ ಗಡಿಯಾರದ ಮುಳ್ಳು ತಿರುಗಿಸಪ್ಪ....
    ಭೂತ ಚೇಷ್ಟೆ ಏನಾದ್ರು ಇದ್ದ್ರೆ ಮಂತ್ರ ಹಾಕಿಸೋಣ ನೋಡು........ಇನ್ನೊಂದು ಸರಿ ಹೀಗೇನಾದ್ರು ಆದ್ರೆ ತಪ್ಪದೇ ತಿಳಿಸು.......ಓಕೆನಾ?

    ತಮ್ಮನಿಗೆ ದಿನ ಬೆಳಗಾದರೆ ಏನಾದರೊಂದು ತಮಾಷೆ ಇದ್ದೇ ಇರುತ್ತೇ ಹಹಹ

    ReplyDelete
  2. ಹ್ಹ ಹ್ಹ.. ಏನ್ ಸ್ವಾಮಿ ನೀವು !

    ಇರಲಿ, ನಮಗೂ ಹೊಸ ವಿಷ್ಯ ಗೊತ್ತಾಯ್ತು :)

    ReplyDelete
  3. ಹೀಗೆಲ್ಲಾ ಉಂಟೆಂದು ನಿಜಕ್ಕೂ ಗೊತ್ತಿರಲಿಲ್ಲ.ಹೊಸ ವಿಷಯವೊಂದು ತಿಳಿಯಿತು.ಧನ್ಯವಾದಗಳು.

    ReplyDelete
  4. Get another mobile/watch... you can calculate average time and use it

    ReplyDelete
  5. ಈಗ ಟೈಮ್ ಸರಿ ಹೋಯ್ತಾ?

    ReplyDelete
  6. ಹೀಗೂ ಇಲ್ಲ! ಹಾಗು ಇಲ್ಲ!
    ಬೇಗ ದೈವಜ್ನರನ್ನು ಕರೆಸಿ ಮುಹೂರ್ತ ತೋರಿಸಿ ಪರ್ಯಾಯ ಯಾಗ ಹೋಮ ಹವನ ಮಾಡಿಸಿ ಆಚಾರ್ಯರನ್ನು ಸ್ವಾಮಿಗಳನ್ನು ಧನಕನಕ ನೀಡಿ ಸಂತುಷ್ಟಗೊಳಿಸಿ ಗ್ರಹದ ಕಾಟ ನೀವಾರಿಸಿಕೊಳ್ಳಿ.
    ಆಟೋಮತಿಕ್ ಅಪ್ಡೇಟ್ ಬಂದಿಡುವ ಬಗ್ಗೆ ಮಾಹಿತಿಗೆ ಧನ್ಯವಾದಗಳು.

    ReplyDelete
  7. ಶಿವಪ್ರಕಾಶ್,

    ಭ್ರಮೆಗೊಳಗಾಗಿಬಿಟ್ಟರೆ...ಏನೇನೋ ಆಗಿ ಕೊನೆಗೆ "ಹೀಗೂ ಉಂಟೇ" ಇದು ನಿಮ್ಮ ಸರಧಿ.

    ReplyDelete
  8. ಗೇಟ್ ಮುಂದೆ ಕಾವಲಿದ್ದವನ ವಾಚ್ ಮೇಲೆ ನಿಮಗೆಷ್ಟು ನಂಬಿಕೆ ನೋಡಿ, ಯಾರೋ ಅವನ ವಾಚಿನ ಸಮಯ ಬದಲಿಸಿರಬಹುದಲ್ವೆ?:)

    ReplyDelete
  9. ಹ್ಹ ಹ್ಹ..ಭೂತ ಚೇಷ್ಟೆ..!!
    ನಮ್ಮಲ್ಲಿ ವರ್ಷಕ್ಕೆ ಎರಡು ಸಲ ಹೀಗೆ time automatic update ಮಾಡಲೇ ಬೇಕಾಗುತ್ತದೆ..nice write up:)

    ReplyDelete
  10. This comment has been removed by the author.

    ReplyDelete
  11. ಇದು ಭೂತ ಚೇಷ್ಟೆ ಯೇ ಶಿವಪ್ರಕಾಶ್.. ನೀವು ಯಾವುದಕ್ಕೂ ಒಮ್ಮೆ ಕೇರಳ ಮೂಲದ ಯಾವುದಾದರೂ ಮಂತ್ರವಾದಿಯನ್ನು ಕಾಣೋದು ಒಳಿತು..

    ReplyDelete
  12. houdu shivaa aagatte.... idarinda receiving time of call and sms change aagatte....

    bhootaaaaaa untu....

    ReplyDelete
  13. ಏನೇ ಆದ್ರೂ ನಿಮ್ಮ ಟೈಮ್ ಚೆನ್ನಾಗಿದೆ ಅಂತ ಗೊತ್ತಾಯ್ತು ಬಿಡಿ !.

    ReplyDelete
  14. ಹ್ಹೆ ಹ್ಹೆ ಹ್ಹೆ...ಗಡಿಯಾರಕ್ಕೆ ಯಾರೋ ಮಾಟ ಮಾಡಿಸಿದ್ದಾರೆ.. ಹೀಗೂ ಉಂಟೇ!!
    ನಿಮ್ಮವ,
    ರಾಘು.

    ReplyDelete
  15. ಹ ಹ್ಹ ಹಾ ಹ್ಹಾ..... ಚೆನ್ನಾಗಿದೆ ನಿಮ್ಮ ಅ(ವ್ಯ)ವಸ್ತೆ!

    ReplyDelete
  16. hahaha :)chennagide sir nimma time kathe..:)

    ReplyDelete
  17. ಅಲ್ಲ ಶಿವು...ನಿಮ್ಮ ಮೊಬೈಲ್ ಆಟೋ ಸೆಟ್ಟಿಂಗ್ ಇಷ್ಟೋಂದು ತಲೆ ಕೆಡಿಸ್ತಾ..ನಿಮಗೆ,,,?? ಯಾಕೋ..ವಿಷಯ ಒಪ್ಪೋಕಾಗ್ತಾ ಇಲ್ಲ ಆದ್ರೆ ಈ ಐಡಿಯಾ ಸೂಪರ್ರು...ಬ್ಲಾಗ್ ಪೋಸ್ಟ್ ಮಾಡ್ಲಿಕ್ಕೆ...ಎಲ್ಲರ ತ-ಗೆ ..ಹು- ಬಿಡೋಕೆ...ಹಹಹಹ...

    ReplyDelete
  18. shivu avre yaake bejaaraagiddira, yella sariyaagatte bidi, maneli onderdu extra gadiyaara itkolli, adralli yen time change agolla alve

    ReplyDelete
  19. ಇಷ್ಟೆಲ್ಲ ನೋಡಿದ ನಂತರ ನಮ್ಮಲ್ಲಿ ಅನೇಕ ಪ್ರಶ್ನೆಗಳು ಕಾಡುತ್ತವೆ. ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದ ಮೇಲೂ ನಮ್ಮನ್ನು ಕಾಡುವ ಕಟ್ಟಕಡೆಯ ಪ್ರಶ್ನೆ....ಹೀಗೂ ಉಂಟೇ???

    ReplyDelete
  20. ಓಹ್ ಹೀಗೂ ಇದ್ದೀಯ,
    ನಿಮ್ಮ ಒಬ್ಬರ ಟೈಮ್ ಸರಿ ಇಲ್ಲದೆ ಇರೋದಕ್ಕೆ ಕಾರಣ,, automatic time update ನಿಂದ ಬಂದ ಸೆರ್ವೆರ್ ಮೂಲಕ,,, ಹಾಗಾದರೆ,, ಅ ಸೆರ್ವೆರ್ ಟೈಮ್ ಸರಿ ಇಲ್ಲದಿರ,, ಎಷ್ಟು ಪಜೀತಿ ಆದೀತು,,,,,
    ಇದರ ಬಗ್ಗೆ ಇನ್ನಷ್ಟು ಮಾಹಿತಿ ಹುಡುಕಿದೆ... ಬಟ್ ಆಟೋ ಟೈಮ್ zone ಅಪ್ಡೇಟ್ ಆಗೋದು,, ನೀವು ಒಂದು ಏರಿಯ ಅಥವ,, ಒಂದು ಟೈಮ್ zone ನಿಂದ ಬೇರೆ ಕಡೆ ಹೋದಾಗ... ನೀವು ಇಲ್ಲೇ ಇದ್ದುಕೊಂಡು,,,, ಟೈಮ್ ಚೇಂಜ್ ಆಗಿದೆ ಅಂದರೆ,,, ಏನೋ ಪ್ರಾಬ್ಲಮ್ ಆಗಿದ್ದಿರಬೇಕು...... ನಿಮ್ಮ ಮೊಬೈಲ್ ನಲ್ಲಿ automatic time update ಎನಬ್ಲೆ ಆಗಿದ್ದರೆ,,, ನಿಮ್ಮ Serivce provider (airtel , vodafone .) ಸೆರ್ವೆರ್ ನಿಂದ ಅಪ್ಡೇಟ್ ತಗೋತ ಇರುತ್ತೆ.... but e ರೀತಿ ಚೇಂಜ್ ಆಗೋದು,, ತುಂಬಾ ಕಮ್ಮಿ.....ನನಗನ್ನಿಸಿದ ಪ್ರಕಾರ....

    ReplyDelete
  21. ಬಹುಶ ನಿಮಗೇನೂ ದೋಷ ಇದೆ.. ಯಾವುದಕ್ಕೋ ಒಮ್ಮೆ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ಕೊಡಿ :)

    ReplyDelete