ನನ್ನ ರೂಂಮೇಟ್ ಹೆಸರು ನಟರಾಜ್.. ಪ್ರೀತಿಯಿಂದ ನಟ ಅಂತಿವಿ.
ಅವನು ಕೆಲಸಕ್ಕೆ ಸೇರಿ ೨ ವರ್ಷ ಆಗಿತ್ತು.. ಸ್ವಲ್ಪ ಹೊಟ್ಟೆನು ಬಂದಿತ್ತು. ಕೂತಲ್ಲೇ ಕುಳಿತು ಕೀ ಬೋರ್ಡ್ ಕುಟ್ಟೋ ಕೆಲಸ ಅಲ್ವಾ ನಂಬ್ದು. ಹಾಗಾಗಿ ಸ್ವಲ್ಪ ಹೊಟ್ಟೆ ಬಂದಿತ್ತು..
ಅವನಿಗೆ, ಯಾಕೋ ಹೊಟ್ಟೆ ಬಂದಿದ್ದು ಸರಿ ಕಾಣಲಿಲ್ಲ.
ಏನಾದ್ರು ಮಾಡಿ ಹೊಟ್ಟೆ ಕರಿಗಿಸಬೇಕು ಅಂದ್ಕೊಂಡ.
ಸರಿ, ಹೊಟ್ಟೆ ಕರಿಗಿಸೋಕೆ ಬೆಳಿಗ್ಗೆ ಜಾಗಿಂಗ್ ಹೋಗೋ ಪ್ಲಾನ್ ಹಾಕಿದ.
ನನ್ನ ಕರೆದೆ, ನಾನು ಇಲ್ಲ ಕಣೋ. ನಾನು ಬರೋಲ್ಲ ಅಂದೆ..
ನನ್ನ ಮೊಬೈಲ್ ನಲ್ಲಿ ೫ ಗಂಟೆಗೆ ಅಲಾರಂ ಸೆಟ್ ಮಾಡಿ ಮಲಗಿದ (ನನ್ ಮೊಬೈಲ್ ನಲ್ಲಿ ಶಬ್ದ ಜೋರಾಗಿ ಬರುತ್ತೆ ಅದಕ್ಕೆ).
ಅವನು ನನ್ ಮೊಬೈಲ್ನಲ್ಲಿ ಅಲಾರಂ ಸೆಟ್ ಮಾಡಿರೋದು ನಂಗೆ ಗೊತ್ತಿರ್ಲಿಲ್ಲ.
ಸರಿ ಬೆಳಿಗ್ಗೆ ಅಲಾರಂ ಬಡಿದಾಗ ಎದ್ದು, ಜಾಗಿಂಗ್ ಹೊರಟ.
ಬೆಂಗಳೂರಿನ ರಸ್ತೆಗಳಲ್ಲಿ ವಾಕಿಂಗ್ ಮಾಡಲು ಹೊರಟ. ಜನರೇ ಕಾಣಿಸುತ್ತಿಲ್ಲ..
ಬರಿ ಕಾಲಿ ಕಾಲಿ ರಸ್ತೆಗಳು..
ಮನಸ್ಸಲ್ಲಿ ಅವನು , " ಇದೇನು ಬೆಂಗಳೂರು ಜನಾನೋ ಏನೋ, ಎಷ್ಟು ಸೋಮಾರಿಗಳು, ಬೆಳಿಗ್ಗೆಯಾದರು ವಾಕಿಂಗ್ ಮಾಡೋರು ಕಾಣಿಸ್ತಿಲ್ಲ... ಸೋಮಾರಿಗಳು, ಸೋಮಾರಿಗಳು" ಅಂತ ಬೈಯುತ್ತ, ಸರಿಯಾಗಿ ಒಂದು ಗಂಟೆಗಳ ಕಾಲ ವಾಕಿಂಗ್ ಮಾಡಿ ಮನೆಗೆ ಹಿಂತಿರಿಗಿದ.
ಯಾವುದಾದರು ಸಂದೇಶ(message) ಬಂದಿದವಾ? ಅಂತ ಅವನ ಮೊಬೈಲ್ ಹಿಡಿದ..
ಯಾವುದು ಸಂದೇಶ ಬಂದಿರಲಿಲ್ಲ..
ಮೊಬೈಲ್ ನೋಡುತ್ತಿದ್ದಂತೆ ಅವನ ಮುಖದಲ್ಲಿ ಆಶ್ಚರ್ಯ ಭಾವ ಮೂಡಿತ್ತು.
ಅವನು ಮೊಬೈಲನ್ನು ಎರೆಡೆರಡು ಬಾರಿ ಸರಿಯಾಗಿ ನೋಡಿದ,ಹಾಗೆ ಟಿವಿ ಆನ್ ಮಾಡಿದ. ಟೈಮ್ ತೋರಿಸೋ ಚಾನೆಲ್ ಓಪನ್ ಮಾಡಿದ. (ಕೆಲವು ಚಾನಲ್ ಗಳು ಸಮಯ ತೋರ್ಸ್ತಾರೆ. ಉದಾಹರಣೆಗೆ ಕೆಲವು ನ್ಯೂಸ್ ಚಾನಲ್ ಗಳು)
ಅವನ ಮೊಬೈಲಿನಲ್ಲೂ, ಟಿವಿಯಲ್ಲೂ ಸಮಯ ಇನ್ನು ೫ ಗಂಟೆ..
ನನ್ನ ಮೊಬೈಲಿನಲ್ಲಿ ಟೈಮ್ ೬, ಆದರೆ ಅವನ ಮೊಬೈಲ್ನಲ್ಲಿ, ಟಿವಿಯಲ್ಲಿ ಇನ್ನು ೫ ಗಂಟೆ !!!!.
ಬೆಳಿಗ್ಗೆ ಎದ್ದ ನನ್ನನ್ನು ಕೇಳಿದ, "ಯಾಕೋ ನಿನ್ನ ಮೊಬೈಲಿನಲ್ಲಿ ಟೈಮ್ ರಾಂಗ್ ಇದೆಯಾ ?"
ಯಾಕೆ ?
ನಿನ್ನ ಮೊಬೈಲಿನಲ್ಲಿ ಟೈಮ್ ಒಂದು ಗಂಟೆ ಮುಂದೆ ಇದೆ.
ಆಗ ನಾನಂದೆ, "ಇಲ್ಲ, ನಾನೇ ಒಂದು ಗಂಟೆ ಯಾವಾಗಲು ಮುಂದೆ ಇಟ್ತಿರ್ತೀನಿ"
ಅವನಿಗೆ ಸಿಟ್ಟು ಬಂದಿತ್ತು...
ಯಾಕೋ ? ಅಂತ ಕೇಳಿದೆ,
ನಿನ್ನ ಹಾಳು ಸಮಯ ನೋಡಿ, ನಾನು ೪ ಗಂಟೆಗೆ ಜಾಗಿಂಗ್ ಹೋಗಿದ್ದೆ,
ನಿನಗೊಂದು ದೊಡ್ಡ ನಮಸ್ಕಾರ ಮಾರಾಯಾ,
ಅಂತ ನಡೆದ ಸಂಗತಿ ಹೇಳಿದ..
ಆಗಾ ನಾನು ಬಿದ್ದು ಬಿದ್ದು ನಕ್ಕಿದ್ದು..
ಅಂದಿನಿಂದ ನನ್ನ ಮೊಬೈಲ್ನಲ್ಲಿ ಸಮಯ ನೋದೊದನ್ನೇ ಬಿಟ್ಟ...
ನಾನು ಕೂಡ ನನ್ನ ಮೊಬೈಲಿನಲ್ಲಿ ಸಮಯ ಮುಂದೆ ಇಡುವುದನ್ನು ಬಿಟ್ಟೆ..

ಚೆನ್ನಾಗಿದೇರಿ ನಿಮ್ಮ ಜಾಗಿ೦ಗ ಪುರಾಣ, ಹೀಗೆ ಬರೆಯುತ್ತಿರಿ. ಅ೦ದ ಹಾಗೆ ನನ್ನದು ಒ೦ದು ಬ್ಲಾಗಿದೆ. ಭೇಟಿ ಕೊಡಿ. ನಾನು ನಿಮ್ಮ ಬ್ಲಾಗನ್ನು follow ಮಾಡುತ್ತೇನೆ. ನೀವು ನನ್ನ ಬ್ಲಾಗನ್ನು follow ಮಾಡಿದಲ್ಲಿ ಸ೦ತೋಷ
ReplyDeletewww.nirpars.blogspot.com
ನಾನೂ ಅಷ್ಟೇ, ನನ್ನ ಮೊಬೈಲಿನ್ನು ಯಾವಾಗಲೂ ಅರ್ಧ ಗಂಟೆ ಮುಂದೆ ಇಟ್ಟಿರುತ್ತೇನೆ!
ReplyDeleteನನಗಿರುವ ಕೆಟ್ಟ ಅಭ್ಯಾಸ, alarm snooze ಮಾಡೋದು. ಅರ್ಧ ಗಂಟೆಯಾದರೂ ಮಾಡದಿದ್ದರೆ ನೆಮ್ಮದಿ ಇರುವುದಿಲ್ಲ!
ಎಷ್ಟೋ ಬಾರಿ ನಾನೇ ನನ್ನ ಮೊಬೈಲ್ ನೋಡಿ ಮೋಸ ಹೋಗಿದ್ದೇನೆ :-)
ಹಾಗಿದ್ದಲ್ಲಿ ಉಳಿದವರ ಕತೆ ಏನೋ ;-)
ಚೆನ್ನಾಗಿ ಬರೆದಿದ್ದೀರಿ :-)
Nimma snehitana jogging sanniveshada lekhana odi tumbaa nagu bantu,lekhana chennagide.
ReplyDeleteAadare avareno aparoopakke jogging hodaga janare iralillavenda maatrakke Bengaloorina janarella somberigalenu alla alva? (Just joking)
ನೀತಿಪಾಠ:
ReplyDeleteಮತ್ತೊಬ್ಬರ ಮೋಬೈಲ್ ಉಪಯೋಗಿಸಬಾರದು!
tumba chennagide ha ha ha .... sadhya alaram hoditalla, hodililala andidre malge irta idreno......ha ha ha
ReplyDeleteಶಿವಪ್ರಕಾಶ್...
ReplyDeleteಮಸ್ತಾಗಿದೆ...!
ಒಂಥರಾ ಅಡಪೋಟ್ರು ಕಥೆ ಆಗೊಯ್ತು ನಿಮ್ಮ ಮಿತ್ರರಿಗೆ...!
ನಕ್ಕೂ ನಕ್ಕೂ ಸುಸ್ತಾದೆ..
ನಿಮ್ಮ ಬ್ಲಾಗ್ ಚೆನ್ನಾಗಿ ಬರ್ತಾ ಇದೆ..
ಅಭಿನಂದನೆಗಳು..
ಶಿವಪ್ರಕಾಶ್,
ReplyDeleteನಿಮ್ಮ ಗೆಳೆಯನ ಜಾಗಿಂಗ್ ಪುರಾಣ ತುಂಬಾ ಚೆನ್ನಾಗಿದೆ..ಸಕ್ಕಾತ್ತಾಗಿ ಬೆಸ್ತು ಬೀಳಿಸಿದ್ದೀರಿ....ಅಥವ ಅವನೇ ಬಿದ್ದಿದ್ದಾನೆ....ಇದೇನಿದು ಏಪ್ರಿಲ್ ಫೂಲ್ ಲೇಖನವನ್ನು ಏಪ್ರಿಲ್ ಬರುವ ಮೊದಲೇ ಹಾಕುತ್ತಿದ್ದೀರಲ್ಲ...
PARAANJAPE K.N. ಅವರೇ,
ReplyDeleteಜಾಗಿ೦ಗ ಪುರಾಣ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು..
====================
ಜ್ಯೋತಿ ಅವರೇ.,
ನನ್ನ ಸ್ನೇಹಿತ ಪಟ್ಟ ಕಷ್ಟ ನೋಡಿ, ನಾನು ಆ ಅಭ್ಯಾಸವನ್ನು ಈಗ ಬಿಟ್ಟಿದ್ದೇನೆ..
ಲೇಖನ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು
====================
SSK ಅವರೇ,
ಲೇಖನ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು
ನಮ್ಮ ಹುಡುಗನಿಗೆ ಸ್ವಲ್ಪ ಜೋಶ್ ಜಾಸ್ತಿ... ಅದಕ್ಕೆ ಬೆಂಗಳೂರು ಜನ ಸೋಮಾರಿ ಅಂದಿದ್ದು...
ಬೇಜಾರ್ ಆಗ್ಬೇಡಿ... ಅವನು ಸ್ವಲ್ಪ ತಮಾಷೆ ಹುಡುಗ...
====================
sunaath ಅವರೇ,
ನಿಮ್ಮ ನೀತಿಪಾಠ ಚನ್ನಾಗಿದೆ...
ಟೈಮ್ ಅಂದ್ರೆ ಪಕ್ಕ ೪೨೦ ಅಲ್ವಾ ?
====================
ಮನಸು ಅವರೇ,
ಲೇಖನ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು
ಪಾಪ ರೀ ನಮ್ಮ ಹುಡುಗ ಜೀವನದಲ್ಲಿ ಮೊದಲ ಬಾರಿಗೆ ಒಳ್ಳೆ ಪ್ಲಾನ್ ಹಾಕಿದ್ದ , ಎಲ್ಲ ಎಡವಟ್ಟು ಆಯ್ತು.
====================
ಶಿವಶಂಕರ ಅವರೇ,
ನಾನು ಆ ಅಭ್ಯಾಸವನ್ನು ಈಗ ಬಿಟ್ಟಿದ್ದೇನೆ..
ಧನ್ಯವಾದಗಳು..
====================
ಪ್ರಕಾಶ್ ಅವರೇ,
ನಿಮ್ಮ ಪ್ರೋತ್ಸಾಹ ಹೀಗೆ ಇದ್ದರೆ, ನನ್ನ ಎಲ್ಲ ನೆನಪಿನ ಪುಟಗಳನ್ನು ಬಿಚ್ಚಿಡುತ್ತೇನೆ...
ಲೇಖನ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು .
====================
ಶಿವು ಅವರೇ,
ನೀವು ಎಪ್ರಿಲ್ ಫೂಲ್ ಅಂದಾಗ ನನ್ನದೊಂದು ಹಳೆ ನೆನಪು ಜ್ಞಾಪಕಕ್ಕೆ ಬಂತು, ಒಂದು ದಿನ ಆ ಲೇಖನ ಬರೆಯುತ್ತೇನೆ..
ಲೇಖನ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು
ಶಿವಪ್ರಕಾಶ್ ಅವರೆ,
ReplyDeleteಒಂದು ಗಂಟೆ ಸಮಯ ಮುಂದೆ ಇಟ್ಟಿರೋರು ಬಹುಶಃ ನೀವೊಬ್ಬರೆ ಅನ್ನಿಸುತ್ತೆ ಈ ಪ್ರಪಂಚದಲಿ...
ನಾನು ನಕ್ಕು ಸುಸ್ತಾದೆ.
ಯುಗಾದಿ ಹಬ್ಬದ ಶುಭಾಶಯಗಳು
ಅಂತರ್ವಾಣಿ ಅವರೇ,
ReplyDeleteನನ್ನ ಸ್ನೇಹಿತನ ಜಾಗಿಂಗ್ ಪುರಾಣ ಓದಿ, ನಕ್ಕು, ಆನಂದಿಸಿದ್ದಕ್ಕೆ ಧನ್ಯವಾದಗಳು...
ನಿಮಗೂ ಹಾಗು ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಭಾಶಯಗಳು..