ನನ್ನ ಹೆಂಡ್ತೀನ ಇವತ್ತು ನನ್ನೂರಿಗೆ ಕಳಿಸ್ತಾ ಇದೀನಿ...
ಕಳಿಸಲು ಮನಸಿಲ್ಲ..
ಆದ್ರೆ ಹೊಸ ಹೆಂಡ್ತಿಗೋಸ್ಕರ ನಾನು ಈ ತ್ಯಾಗ ಮಾಡಲೇಬೇಕು.
ಮನಸಿಲ್ಲದ ಮನಸಿನಿಂದ ಮನಸುಮಾಡಿ ಕಳಿಸ್ತಾ ಇದೀನಿ.
ಹತ್ತು ವರ್ಷದ ಈ ದಾಂಪತ್ಯದಲ್ಲಿ ಎಂದೂ ಕೂಡ ನೀ ನನ್ನ ಮನಸು ನೋಯಿಸಿಲ್ಲ.
ಬಹುಶ ನಾನು ಕೂಡ ನಿನ್ನನ್ನು ಅಸ್ಟೆ ಪ್ರೀತಿಯೊಂದ ನೋಡ್ಕೊಂಡಿದೀನಿ ಅನ್ಕೋತೀನಿ.
ನನಗರಿವಿಲ್ಲದೆ ನಿನಗೆ ಎಂದಾದರೂ ನೋವು ಮಾಡಿದ್ರೆ, ದಯವಿಟ್ಟು ಕ್ಷಮಿಸಿ ಬಿಡು.
ನೀನು ಎಲ್ಲೇ ಇರು, ಹೇಗೆ ಇರು, ನೀನು ನನ್ನವಳೇ.
ಬೇಜಾರ್ ಆಗಬೇಡ ಕಣೆ, ಅದೆಸ್ಟೆ ಕೆಲಸ ಕಾರ್ಯ ಇದ್ರು,
ತಿಂಗಳಿಗೊಮ್ಮೆ ಬಂದು ನಿನ್ನ ನೋಡ್ಕೊಂಡು ಹೋಗ್ತೀನಿ...
ಅಲ್ಲಿ ಎಲ್ಲರೂ ನಿನ್ನನ್ನ ಚನ್ನಾಗಿ ನೋಡ್ಕೋತಾರೆ.
ಅವರು ಚನ್ನಾಗಿ ನೋಡಿಕೊಳ್ಳದೆ ಇದ್ರೆ, ದಯವಿಟ್ಟು ಬೇಜಾರ್ ಮಾಡ್ಕೋಬೇಡ.
ನನಗೋಸ್ಕರ ಸಹಿಸಿಕೋ. ಪ್ಲೀಸ್...
ಅದ್ಯಾಕೋ ಗೊತ್ತಿಲ್ಲ. ನಿನ್ನ ಕಳುಹಿಸುತ್ತಿರುವ ಈ ಘಳಿಗೆಯಲ್ಲಿ, ನನಗರಿವಿಲ್ಲದೆ ನನ್ನ ಕಣ್ಣಲ್ಲಿ ಹನಿಯೊಂದು ಮೂಡಿದೆ.
I Miss You

ಸಹಿಸ್ಕೋತಾಳೆ ಬಿಡು.... ಅವಳಿಗೂ ಗೊತ್ತು ಜನ change ಕೇಳ್ತಾರೆ ಅಂತಾ...!! ಹಹಹ
ReplyDeleteಮೂಡಿರುವ ಹನಿ ಕೆನ್ನೆಯಿಂದ ಜಾರದಂತೆ ಒರೆಸಲು ಮತ್ತೊಬ್ಬಳು ಬರುತಿದ್ದಾಳಲ್ಲ... ಬಿಡು.. ಯೋಚಿಸಬೇಡ....
ನೆನಪಿನ ಪುಟದಲಿ ಮಾಸದ ಚಿತ್ರದಂತೆ ಮೊದಲನೆಯಳು ಇದ್ದು ಬಿಡುತ್ತಾಳೆ.....
:)
ReplyDeleteಆಮೇಲೆ ಬಂದವಳಿಗಾಗಿ, ಮೊದಲು ಇದ್ದವಳನ್ನು ತ್ಯಾಗ ಮಾಡಲೇ ಬೇಕಲ್ರೀ.
ReplyDeleteಮೊದಲಿನವಳು ಏನೂ ಬೇಜಾರು ಮಾಡ್ಕೊಳ್ಳೋದಿಲ್ಲ ಬಿಡಿ.
ಶಿವು,
ReplyDeleteನಮ್ಮೊಂದಿಗೆ ಹಲವು ಕಾಲದಿಂದ ಜೊತೆಗಿದ್ದ ವಸ್ತುಗಳನ್ನು ಅಗಲಿದಾಗ ಮನ ಮೂಕರೋದನಗೈವುದು ಸತ್ಯ..........
ಹೊಸಬಳು ಹಳಬಳ ಜಾಗ ತುಂಬಲಿ ಅಂತ ಹಾರೈಸುತ್ತೇನೆ!!!!
ನಿಮ್ಮ ಹಳೆ ??? ಹೆಂಡತಿ ತವರಿಗೆ ಹೊರಟಿದ್ದಕ್ಕೆ ನನ್ನ ಸಂತಾಪ , ಹೊಸ ಹೆಂಡತಿ??[ಪ್ರಿಯತಮೆ!!!] ಬರುತ್ತಿದ್ದಾಳೆ !! ಆದಾಗ್ಯೂ ಹಳೆಯ ಹೆಂಡತಿಯ ಜೊತೆ ಕಳೆದ ಸುಂದರ ಗತ ನೆನಪುಗಳು ನಿಮ್ಮ ಕಣ್ಣಲ್ಲಿ ನೀರು ತರಿಸಿದ್ದು ಸಹಜವೇ ಆಗಿದೆ. ಹಳೆಯ ಹೆಂಡತಿಗೆ ತಿಂಗಳಿಗೊಮ್ಮೆ ನಿಮ್ಮ ದರುಶನ , ಹೊಸ ಹೆಂಡತಿಯೊಂದಿಗೆ ಶುರುವಾಗಲಿ ಶುಭ ಜೀವನ ಯಾನ. [ ಸ್ವಾಮೀ ಬೈಕಿಗೆ ಹೊಸ ಹೆಲ್ಮೆಟ್ಟು ತಗೋಳಿ.] ನಿಮಗೆ ನನ್ನ ಶುಭ ಕಾಮನ.
ReplyDelete--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]
ಹೊಸಾ ಹೆಂಡ್ತೀ ಹೆಸರೇನು..? (ಹೆಸರು ಹೇಳೋಕೆ ನಾಚ್ಗೆ ಆದ್ರೆ ಬೇಡ ಬಿಡಿ.. ) ಹೊಸಾ ಹೆಂಡ್ತೀ ಫೋಟೋ ನೂ ಹಾಕಿ..
ReplyDeletenice story
ReplyDelete