Thursday, May 5, 2011

ಗುರಿ ಮರೆತ ಅಲೆಮಾರಿಯಾಗದಿರಿ

ಸುಗಮವಾಗಿದೆಯೆಂದು ದಾರಿ,
ಮರೆತು ನಡೆಯದಿರು ಜೀವನದ ಗುರಿ,
ನಿನಗರಿವಿಲ್ಲದೆ ಬೀಳುವೆ ಕಂದಕಕ್ಕೆ ಜಾರಿ
ಪ್ರಜ್ಞೆ ಬರುವುದರೊಳಗಾಗಿ,
ಹೋಗಬಹುದು ಪರಿಸ್ಥಿತಿ ಕೈಮೀರಿ...

ನಿನ್ನೆ ನಿನ್ನೆಗೆ, ನಾಳೆ ನಾಳೆಗೆ, ಇಂದು ಇಂದಿಗೆ, ಚಿಂತೆ ಏತಕೆ...? ಎಂದು ಜೀವನವನ್ನು ತುಂಬ ಸುಲಭವಾಗಿ ತೆಗೆದುಕೊಳ್ಳುತ್ತೇವೆ. ಆದರೆ ಕಠಿಣ ಪರಿಸ್ಥಿತಿ ಎದುರಾದಗ ತಲೆ ಮೇಲೆ ಕೈಇಟ್ಟುಕೊಂಡು, ಕೈಚಲ್ಲಿ ಕೂಡುತ್ತೇವೆ. ಈ ಸಮಸ್ಯೆ ನಮ್ಮಲ್ಲಿ ಅನೇಕರಿಗೆ ಇದೆ. ಹಾಗೆಂದು ಜೀವನವನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಳ್ಳಿ ಎಂದು ನಾ ಹೇಳುತ್ತಿಲ್ಲ. ಈಗ ಸಂತೋಷವಾಗಿದ್ದೇನೆ ಎಂದು ಗುರಿ ಮರೆತು ನಡೆಯಬೇಡಿ, ಏಕೆಂದರೆ ಜೀವನದಲ್ಲಿ, ಯಾವುದು ಕೂಡ ಹೇಳಿ ಕೇಳಿ ಬರುವುದಿಲ್ಲ. ನಿನ್ನೆಯಂತೆ ನಾಳೆ ಇರುವುದಿಲ್ಲ. ಸುಂದರವಾದ ನಾಳೆಗಳಿಗಾಗಿ ಇಂದು ನಾವು ಶ್ರಮ ಪಡಲೇಬೇಕು ಎನ್ನುವುದು ನನ್ನ ಅನಿಸಿಕೆ.

ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು, ಕೊನೆಯನೆಂದು ಮುಟ್ಟದಿರು... ಎನ್ನುವ ಕುವೆಂಪುರವರ ಸಾಲುಗಳು ಎಸ್ಟು ಸತ್ಯ ಅಲ್ಲವೇ..? Success is a journey not a Destination.

ಗೆಲ್ಲಲೇಬೇಕೆಂಬ ಕೆಚ್ಚೆದೆ ನಿಮ್ಮಲ್ಲಿ ಇರಲಿ. ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ!!

--
ಗುರಿ ಮರೆತ ಅಲೆಮಾರಿಯಾಗದಿರಿ ಎನ್ನುವ ಆಶಯ ಹಾಗು ಶುಭಾಶಯಗಳೊಂದಿಗೆ,
ಶಿವಪ್ರಕಾಶ್
Share/Save/Bookmark

3 comments: