Sunday, July 24, 2011

ನನ್ನ ಹೃದಯ



ಎಂದೋ ಬೀಗ ಜಡಿದ ಗೇಟಿನ
ಮುಂದಿರುವ ಅಂಚೆ ಪೆಟ್ಟಿಗೆ
ಈ ನನ್ನ ಹೃದಯ.

ಬಂದು ಬೀಳುತಿವೆ
ಅದೆಸ್ಟೋ ಲೆಕ್ಕವಿಲ್ಲದಷ್ಟು ಪತ್ರಗಳು
ಓದುವವರಿಲ್ಲ, ಉತ್ತರಿಸುವವರಿಲ್ಲ.

ಪತ್ರಗಳಿಗಾಗಿ ಕಾದು,
ಅನುಭವಿಸುತ್ತಿದ್ದ ವೇದನೆ
ಈ ಅಂಚೆ ಪೆಟ್ಟಿಗೆಗಸ್ಟೇ ಗೊತ್ತು.

ಕಾಯುವಿಕೆಯು ಬೇಸರವ ಮೂಡಿಸಲು,
ಹಿಂದೆ ಮುಂದೆ ನೋಡದೆ,
ಬೀಗ ಜಡಿದು,
ಕೀ ಬೀಸಾಡಿಬಿಟ್ಟೆ.

ಇಂದು ಅದೆಷ್ಟು ಹುಡುಕಾಡಿದರೂ ಸಿಗುತ್ತಿಲ್ಲ.
ಗೇಟಿನ ಕೀ ಅಲ್ಲ.
ನನ್ನ ಹೃದಯ.

ಅಂಚೆ ಪೆಟ್ಟಿಗೆಯ ಮಾಲೀಕ,
ಶಿವಪ್ರಕಾಶ್

Image Courtesy: Sam [AllOfUsAreLost]


Share/Save/Bookmark

10 comments:

  1. :):)ಬೇಜಾರು ಮಾಡ್ಕೋಬೇಡಿ. ರಸ್ತೆ ತುದೀಲಿರೊ ಡ್ಯುಪ್ಲಿಕೇಟ್ ಕೀಮಾಡೊವನನ್ನು ಕರ್ಕೊ೦ಬ೦ದು ಹೊಸಾ ಕೀಲಿ ಕೈ ಮಾಡಿಸಿ..:))

    ReplyDelete
  2. ಅಂಚೆ ಮೇಲೆ depend ಆಗಬೇಡಿ. SMS ಪ್ರಾರಂಭಿಸಿ!
    ಕವನ ಇಷ್ಟವಾಯಿತು.

    ReplyDelete
  3. ಹೊಸ ಕೀಲಿ ಕೈ ಮಾಡಿಸಿ
    ತೆಗೆದೆಲ್ಲಾ ಓದಿದರೆ ಮೊನ್ನೆ ಮೊನ್ನೆ
    ಮದುವೆಯಾದ ಗೆಳತಿಯರ ಪ್ರೇಮ ನೀವೆದನಾ ಪತ್ರಗಳು.
    ಬೇಗವೆಕೆ ಬದಲಿ ಕೀ ಮಾಡಿಸಲಿಲ್ಲವೆ೦ಬಾ
    ಬರದ ಮನವೀಗ
    ಎಂದುಕೊಳ್ಳುವ ಮೊದಲು ಹೊಸ ಕೀ ಮಾಡಿಸಿ.

    ReplyDelete
  4. ಯಾರು ಶಿವು ನಿನ್ನ ಕೀ ,ಅಲ್ಲ ಹೃದಯ ಕದ್ದಿದ್ದು

    ReplyDelete
  5. ಹೋಗ್ಲಿ ಬಿಡಿ , ಇನ್ಮುಂದೆ ನಿಮಗೆ ಪತ್ರ ಬರೆಯೋದಿಲ್ಲ ... ಮೊಬೈಲ್ ಮೂಲಕ ಮೆಸೇಜ್ ಕಳಿಸ್ತೀನಿ

    ReplyDelete
  6. ಶಿವಪ್ರಕಾಶ್ ನೀವು ತಮಾಷೆಗೆ ಕವನವನ್ನು ಬರೆದಿದ್ದರೂ ತುಂಬಾ ಅರ್ಥಗರ್ಭಿತವಾಗಿವೆ. ಹೃದಯದ ಇಲ್ಲದಿದ್ದರೇನೆಂತೆ ಬ್ಲಾಗಿನ ಕೀ ಇದೆಯಲ್ಲ ಅದರಲ್ಲಿ ಹಂಚಿಕೊಳ್ಳಿ.

    ReplyDelete