ಸಂಬಂಧಗಳೇ ಹೀಗೆ
ಅರ್ಥವಾದರೂ ಅರ್ಥವಾಗದ ಹಾಗೆ...
ಹಿಡಿದರೆ
ಹಿಡಿದರೆ
ಚುಚ್ಚುವ
ಮುಳ್ಳಿನ
ಗುಲಾಬಿಯಂತೆ,
ಹಿಡಿವುದ ಬಿಟ್ಟರೆ
ಚುಚ್ಚಿದ
ಮುಳ್ಳಿನ
ಮಾಸದ ರಕುತದ ಕಲೆಯಂತೆ
ಹತ್ತಿರವಿದ್ದಸ್ಟು
ನೋಯಿಸುವ,
ದೂರವಿದ್ದಸ್ಟು,
ಕಾಡಿಸುವ,
ಬೂದಿ ಮುಚ್ಚಿದ
ಕೆಂಡದಂತೆ...
ಮಾತಿಗೊಂದರ್ಥ,
ನಡತೆಗೊಂದರ್ಥ,
ಕಲ್ಪಿಸುವ,
ಕೊಂಕು ಮಾತಿನ,
ಡೊಂಕು ಬಾಲದ,
ನಾಯಿಯಂತೆ..
ಹೃದಯದಲ್ಲಿನ,
ಪ್ರೀತಿ,
ಪ್ರೇಮ,
ಕಾಣುವ ಸುಳ್ಳಲಿ,
ಮುಚ್ಚಿ ಹೋದ,
ಕಾಣದ ಸತ್ಯದಂತೆ...
ನುಂಗಲು ಆಗದ,
ಉಗುಳಲು ಆಗದ,
ಸಂಬಂಧಗಳೇ ಹೀಗೆ,
ಅರ್ಥವಾದರೂ ಅರ್ಥವಾಗದ ಹಾಗೆ... !!!
--
ಪ್ರೀತಿಯಿಂದ ,
ಶಿವಪ್ರಕಾಶ್
ಯಾಕ್ರೀ ಶಿವಪ್ರಕಾಶ,
ReplyDeleteವೈರಾಗ್ಯ ಬರ್ತಾ ಇದೆ?
@ಸುನಾತ್ ಸರ್,
Deleteಹಾಗೇನು ಇಲ್ಲ ಸರ್. ಸುತ್ತ ಮುತ್ತ ನೋಡ್ತಾ ಇರೋ ಸಂಗತಿಗಳಿವು ಅಸ್ಟೆ. :)
nice one.. yakishtu vyathe? :)
ReplyDelete@Pradeep,
DeleteThank u... vyate anta enu illa.. Hengidare nam janagalu anta :)
ಚೆನ್ನಾಗಿದೆ, ಅರ್ಥವಾಗದೆ ಅರ್ಥವಾಯಿತು !
ReplyDeleteThanks Basava :)
DeleteTumba artagarbita vagide sir
ReplyDeleteThank you Srini :)
Delete