Friday, April 4, 2014

ಹವ್ಯಾಸಕೊಂದು Break ಬಿದ್ದಾಗ..!!!

ಅಂದು ಸೋಮವಾರ, ವಾರದ ಮೊದಲನೇ ದಿನವಾಗಿದ್ದರಿಂದ ನಾನು ಶಾಲೆಗೆ ಹೋಗಲು ತಯಾರಾಗಿದ್ದೆ. ಅಂದು ನನ್ನ ಏಳನೇ ತರಗತಿಯ ಮೊದಲನೇ ವಾರ್ಷಿಕ ಕಿರುಪರಿಕ್ಷೆಯ ದಿನವಾಗಿತ್ತು. ನಾನು ಕೂಡ ತುಂಬಾ ಚನ್ನಾಗಿ ತಯಾರಾಗಿ ಹೋಗಿದ್ದೆ. ಪರೀಕ್ಷೆ ಮುಗಿಯಿತು. ಮಧ್ಯಾನ ಊಟ ಮುಗಿಸಿ ನಂತರ ಶಾಲೆಗೆ ಹೋಗುವಾಗ ನಾನು ಬರೆದ ನನ್ನ ಮೊದಲ ಕವನ ತೆಗೆದುಕೊಂಡು ಹೋದೆ. ಏಕೆಂದರೆ ನನ್ನ ಗುರುಗಳು ಹೇಳಿದ್ದರು, ವಿದ್ಯಾರ್ಥಿಗಳು ಕೇವಲ ಓದುವ ಹವ್ಯಾಸಗಳನ್ನು ಬೆಳಸಿಕೊಳ್ಳದೆ ಇತರೆ ಹವ್ಯಾಸಗಳನ್ನು ಬೆಳಸಿಕೊಳ್ಳಬೇಕು ಎಂದು. ಆಗ ನನಗೆ ತೋಚಿದ್ದು ಕವನ ಬರೆಯುವ ಹವ್ಯಾಸ. ಏಕೆಂದರೆ ಕುವೆಂಪು, ದಾ. ರಾ. ಬೇಂದ್ರೆ ತರಹ ನಾನೊಬ್ಬ ದೊಡ್ಡ ಸಾಹಿತಿ ಆಗಬೇಕೆಂಬ ಹಂಬಲ ಬಹಳ ಇತ್ತು. 

ನಂತರ ಅಂದು ಮಧ್ಯಾನ ಯಾಕೆ ಕವನ ತಗೆದುಕೊಂಡು ಹೋದೆ  ಎಂದರೆ, ಪ್ರತಿ ಸಾರಿ ನಾನು ಕಿರುಪರಿಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದಾಗ ನನ್ನ ಗುರುಗಳು "ನಂದು, ನೀನು ಬರಿ ಓದಿನ ಕಡೆ ಅಷ್ಟೇ ಅಲ್ಲ ಇತರ ಆರೋಗ್ಯಕರ ಹವ್ಯಾಸವನ್ನು ಬೆಳಸಿಕೊಳ್ಳಬೇಕು ಪುಟ್ಟ. ಏಕೆಂದರೆ ವಿದ್ಯೆ ಒಂದೇ ಜೀವನ ಅಲ್ಲ ಮನುಷ್ಯನಿಗೆ ಜ್ಞಾನದ ಜೊತೆಗೆ, ಮಾನಸಿಕ ಸಂತೋಷ ಕೂಡ ಮುಖ್ಯ" ಅಂತ ಹೇಳಿದ್ದರು . 

ನಾನು ಅಂದು ಒಂದು ಕವನ ಬರೆದಿದ್ದರಿಂದ ಅದನ್ನು ಶಿಕ್ಷಕರಿಗೆ ತೋರಿಸಬೇಕು, ಅವರಿಂದ ಪ್ರಶಂಸೆಯನ್ನು ಪಡೆಯಬೇಕೆಂಬ ತವಕದಿಂದ ಆತುರಾತುರವಾಗಿ ಊಟ ಮಾಡಿ ಶಾಲೆಗೇ ಹೋದೆ. ಹೋದ ನಂತರ ಮತ್ತೆ ಅದೇ ಪ್ರಥಮ ಸ್ಥಾನದಲ್ಲಿ ನಾನು ರಾರಾಜಿಸುತ್ತಿದ್ದೆ. 

ನನ್ನ ಗುರುಗಳು ಕೇಳಿದರು, "ಏನಮ್ಮ ನಂದು, ಈ ಸಾರಿಯಾದರು ಹವ್ಯಾಸ ಬದಲಿಸಿಕೊಂಡಿದ್ದಿಯಾ?"
ನಾನು ಸ್ವಲ್ಪವೂ ತಡ ಮಾಡದೆ ನಾನು ಬರೆದ ಕವನದ ಸಾಲನ್ನು ನನ್ನ ಗುರುಗಳಿಗೆ ತೋರಿಸಿದೆ. ನನಗೆ ನೆನಪಿರುವ ಹಾಗೆ ಆ ಕವನದ ಸಾಲುಗಳು ಈ ರೀತಿಯಾಗಿದೆ:
ಅಪ್ಪನ ಹಾಗೆ ಓದುವೆನು,
ಅಪ್ಪನ ಹಾಗೆ ಬರೆಯುವೆನು,
ಅಪ್ಪನ ಪ್ರೀತಿ - ಕಲಿಸಿದ ಪಾಠವ,
ಎಂದು ಅದನು ಮರೆಯನು...  
-------  ಇತ್ಯಾದಿಯಾಗಿದೆ....        


ಇದನ್ನು ನೋಡಿದ ನನ್ನ ಗುರುಗಳು ಅದ್ಭುತವಾಗಿ ಬರೆದಿದ್ದೀಯ ಪುಟ್ಟ ನೀನು, ಈವಾಗ್ಲೆ ಈ ರೀತಿಯಾಗಿ ಬರೆಯುತ್ತೀಯಾ ಅಂದರೆ ಮುಂದೆ ನೀನು ದೊಡ್ಡ ಕವಯತ್ರಿಯಾಗುವುದರಲ್ಲಿ ಯಾವುದೆ ಸಂಶಯವೇ ಇಲ್ಲ ಅಂದ್ರು. ಅಲ್ಲದೆ ಅದನ್ನು ಓದಿ ನನ್ನ ಸಹಪಾಠಿಗಳಿಂದ ಚಪ್ಪಾಳೆಯನ್ನು ಹೊಡೆಸಿದರು. ಆಗ ನನಗಾದ ಸಂತೋಷ ಹೇಳತೀರದು.

ನಂತರ ಆ ಸಂತೋಷವನ್ನು ಪೂರ್ಣವಾಗಿ ಅನುಭವಿಸಬೇಕು ಎಂದುಕೊಳ್ಳುವಸ್ಟರಲ್ಲಿ ನನ್ನೊಬ್ಬ ಸಹಪಾಠಿ ಥಾಮಸ್ ಅಣ್ಣ ಅಂತ ನಮ್ಮ ತರಗತಿಯಲ್ಲಿ ಹಿರಿಯ ಅಣ್ಣನಂತೆ ಒಬ್ಬ ಇದ್ದ. ಆತ ನನ್ನ ನೋಡಿ "ಸಾರ್, ಎಲ್ಲಾದ್ರು ಈ ಪುಟಾಣಿ ಹುಡುಗಿ ಇಂತ ಕವಿತೆ ಬರೆಯೋದಕ್ಕೆ ಆಗುತ್ತಾ ..? ಎಲ್ಲೋ ಕದ್ದು ಬರೆದಿದ್ದಾಳೆ." ಅಂತ ಹೇಳಿದ.
ಆ ಮಾತನ್ನು ಕೇಳಿ ನನಗೆ ಏನಾಯಿತೋ ಗೊತ್ತಿಲ್ಲ ಇಂದಿನವರೆಗೂ ನನಗೆ ಕವಿತೆ ಕವನಗಳೆಂದರೆ ಪ್ರೀತಿಯೇ ಹೋಗಿದೆ. ಅಂದು ನನ್ನ ಗುರುಗಳು ಏನೋ ಬೈದು ಅವನನ್ನು ಕೂರಿಸಿದರು. ಆದರೆ ನನಗೆ ಮಾತ್ರ ಅದು ಇಂದಿಗೂ ಕಹಿಯಾದ ಘಟನೆಯಾಗಿಯೇ ಉಳಿದಿದೆ. 

ಆದರೆ ಇಂದು ನನಗೆ ನನ್ನ ತಪ್ಪಿನ ಅರಿವಾಗಿದೆ, ಏಕೆಂದರೆ "You can stop a person, but not an idea whose time has come" ಅಂದರೆ "ನೀವು ವ್ಯಕ್ತಿಯನ್ನು ತಡೆಗಟ್ಟಬಹುದು, ಆದರೆ ಕಾಲ ಸನ್ನಿಹಿತವಾಗಿರುವ ಒಂದು ಕಲ್ಪನೆಯನ್ನಲ್ಲ..." ಎಂಬ ಮಾತು ನಿಜಕ್ಕೂ ಅದ್ಭುತವಾಗಿದೆ. ಏಕೆಂದರೆ ನಮ್ಮ ತರಗತಿಯಲ್ಲಿ ಇದ್ದ ಥಾಮಸ್ ಅಂತವರು ಸಾವಿರ ಜನ ಇದ್ದಾರೆ ಪ್ರಪಂಚದಲ್ಲಿ. ಆದರೆ ನನಗೆ ಆ ವಯಸ್ಸಿನಲ್ಲಿ ಈ ಯೋಚನೆ ಯಾಕೆ ಬರಲಿಲ್ಲ ಅಂತ ಗೊತ್ತಾಗ್ತಾ ಇಲ್ಲ.
 ಏನೇ ಆಗಲಿ ಒಂದು ಅಂತು ನಿಜ. ನನ್ನ ಕವನ ಎಂದೋ ಅಳಿಸಿ ಹೋದ ಒಂದು ಮುಗಿದ ಕಥೆ. ಆದ್ರೆ ನನ್ನ ಪ್ರಬಂಧಗಾರಿಕೆಯನ್ನು ಎಂದು ಸಹ ಕೈಬಿಡುವುದಿಲ್ಲ. ಇಂದು ನಾನು ಪ್ರಬುದ್ಧಳಾಗಿದ್ದೇನೆ ಅಂತಹ ಎಷ್ಟೇ ಥಾಮಸ್ ಗಳು ಬಂದರೂ ಹೆದರುವುದಿಲ್ಲ ಬದಲಿಗೆ ಅವರನ್ನು ಎದರಿಸುವ ಧೈರ್ಯ ಬಂದಿದೆ. 

Share/Save/Bookmark

5 comments:

  1. ನಂದಿನಿಯವರೆ,
    ನೀವು ಬರೆದ ಕವನವು ಏಳನೆಯ ತರಗತಿಯ ವಿದ್ಯಾರ್ಥಿಗೆ ಉತ್ತಮ ಸಾಧನೆಯೇ ಹೌದು. ಕೆಲವಷ್ಟು ವಿಘ್ನಸಂತೋಷಿಗಳು ಹೇಗೆ ಇತರರ ಉತ್ಸಾಹವನ್ನು ಹಾಳು ಮಾಡುತ್ತಾರೆ ಎನ್ನುವುದು ಖೇದದ ಸಂಗತಿ. ಈಗಲಾದರೂ ನೀವು ಆ ನೆನಪಿನಿಂದ ಹೊರಬಂದಿರುವಿರಿ ಎಂದು ಆಶಿಸುತ್ತೇನೆ.

    ReplyDelete
  2. This comment has been removed by the author.

    ReplyDelete
  3. ಭೇಷ್! ಧೈರ್ಯವಂತರಾಗಿ ಬಹಳ ಒಳ್ಳೆ ನಿರ್ಧಾರ ಕೈಗೊಂಡಿದ್ದೀರಿ. ಥಾಮಸ್ ಅಂಥವರು ರನ್ನಿಂಗ್ ರೇಸ್‍ನಲ್ಲಿ hurdles ಇದ್ದಂತೆ.. ಹೆಚ್ಚೆಚ್ಚು hurdles ಗಳನ್ನು ಕುದುರೆ ಹಾರಿ ಮುಂದು ಹೋದರೇನೆ ಅದಕ್ಕೆ ಎಲ್ಲರ ಚಪ್ಪಾಳೆ ಪ್ರಶಂಸೆ ದೊರಕುವುದು. ಕವನ ಮುಗಿದುಹೋದ ಕಥೆ ಎನ್ನದಿರಿ. ಪ್ರತಿಭೆಯನ್ನು ನಾವು ಕೈಬಿಟ್ಟರೂ ಅದು ನಂದಾದೀಪದಂತೆ ಸದಾ ಒಳಗೆ ಉರಿಯುತ್ತಿರುತ್ತದೆ. ಮತ್ತೆ ಪ್ರಯತ್ನ ಮಾಡಿ. ಜ್ಯೋತಿ ಬೆಳಗಬಹುದು. All the best

    ReplyDelete