Thursday, June 4, 2015

ಅರವತ್ತಕ್ಕೆ ಅರುವು-ಮರುವು

ಅರವತ್ತಕ್ಕೆ ಅರುವು-ಮರುವು,
ಆದರೆ, ನಮಗಿನ್ನೂ ಕೇವಲ ಮೂವತ್ತು... !!!

ಒಂದು ಕೈಯಲ್ಲಿ ಮೊಬೈಲು,
ಇನ್ನೊಂದು ಕೈಯಲ್ಲಿ ಕಾಫಿ ಕಪ್,
ಯಾವುದು ಬಾಯಿಗೋ, ಯಾವುದು ಕಿವಿಗೋ,
ಅರಿಯದ ಹೊತ್ತು....
ನಮಗಿನ್ನೂ ಕೇವಲ ಮೂವತ್ತು... !!!

ಲಿಫ್ಟಿನ ಮುಂದೆ ಆಕ್ಸೆಸ್ ಕಾರ್ಡ್ ಹಿಡಿದು ನಿಲ್ಲುವ,
ವಾಶ್ ಬೆಸಿನ್ನಿನಲಿ ಸೂಸು ಮಾಡುವ,
ಇಂದು ನಾ ನಡೆದಿದ್ದೆಸ್ಟು..?? ಎಂದು App ಲಿ ನೋಡುವ...
ನಮಗಿನ್ನೂ, ಕೇವಲ ಮೂವತ್ತು... !!!

ರಸ್ತೆ ಮಧ್ಯದಿ ನಿಂತು, ನಾನೆತ್ತ ಹೋಗುತಿರುವೆನೆಂದು ಯೋಚಿಸುವ,
ನ್ಯೂಸ್ ಪೇಪರ್ ಕೈಯಲಿ ಹಿಡಿದು, ಜೂಮ್ ಮಾಡ ಹೊರಟಿರುವ,
ಪ್ರಜ್ಞೆ ಇಲ್ಲದ ಹೊತ್ತು... 
ನಮಗಿನ್ನೂ, ಕೇವಲ ಮೂವತ್ತು... !!!

ಹ್ಯಾಂಗ್-ಔಟ್ ಅನ್ನೂ ಕಂಪ್ಯೂಟರ್ನಲ್ಲೆ ಮಾಡಿ, 
ಟು ಪ್ಲಸ್ ತ್ರೀ ಗೂ ಮೊಬೈಲ್ನ ಕ್ಯಾಲ್ಸಿ ತೆಗೆವ,
ಇದ್ದಲ್ಲೇ ಎಲ್ಲ ಬೇಕೆನುವ...
ನಮಗಿನ್ನೂ, ಕೇವಲ ಮೂವತ್ತು... !!!

ಅರವತ್ತಕ್ಕೆ ಅರುವು-ಮರುವು,
ಆದರೆ, ನಮಗಿನ್ನೂ ಕೇವಲ ಮೂವತ್ತು... !!!

Share/Save/Bookmark

4 comments:

  1. ಶಿವಪ್ರಕಾಶರೆ, ಇಷ್ಟು ಸೊಗಸಾದ ಕವನವನ್ನು ಬರೆಯುವ ನೀವು, ಇಲ್ಲಿಯವರೆಗೆ ಏಕೆ ಸುಮ್ಮನೆ ಇದ್ದಿರಿ? ಅಥವಾ ಮೂವತ್ತರ ಅರವು-ಮರವಿನಲ್ಲಿ ಈ ಕವನ ಹೊರಹೊಮ್ಮಿತೆ?

    ಮೂವತ್ತಾಯ್ತಾ? ಶುಭಾಶಯಗಳು !
    ಎಲ್ಲೇ ಹಿಡಿಯಿರಿ ಮೋಬೈಲನ್ನು
    ನೀಡಿರಿ ನಮಗೆ ಕವನಗಳನ್ನು !

    ReplyDelete
    Replies
    1. ಧನ್ಯವಾದಗಳು ಸರ್..
      ಮೂವತ್ತರ ಗಡಿ ದಾಟಿ, ಒಂದೆರೆಡು ವರ್ಷಗಳಾಯ್ತು... ಕವನ ಪ್ರಾಸಬದ್ದವಾಗಿರಲಿ ಅಂತ "ಮೂವತ್ತು" ಉಪಯೋಗಿಸಿದೆ... :) :)
      ನಿಮ್ಮ ಸಹಕಾರ ಹೀಗೆ ಇರಲಿ ...

      Delete
  2. ಶಿವಪ್ರಾಕಾಶ್
    ಶುಬಾಷಯಗಳು!

    ಕವನ, ಚೆನ್ನಾಗಿ ಮೂಡಿದೆ ಮೂವತ್ತರ ವಯಸು ಅರಿವು ಮರುವಿನಲ್ಲಿ

    ಹೀಗೆ ಬರೆತ್ತೀರಿ..

    ReplyDelete