Wednesday, February 16, 2011

ಅಂದು - ಇಂದು

ಮೊದಮೊದಲು
ಹುಡುಗಿಯನ್ನು ನೋಡಲು
ಹೋಗುತ್ತಿದ್ದ ಹುಡುಗ
ಹಿಂಜರಿಕೆಯಿಂದಲೇ
ಹಿರಿಯರೆದುರು
ಹುಡುಗಿಯನ್ನು
ತಲೆಯೆತ್ತಿ
ನೋಡಲು
ಪಡುತ್ತಿದ್ದ
ಕಷ್ಟ
ಅಸ್ಟಿಸ್ಟಲ್ಲ...

ಈಗಲೂ
ಹುಡುಗಿಯನ್ನು ನೋಡಲು
ಹೋಗುತ್ತಿದ್ದಾನೆ,
ವ್ಯತ್ಯಾಸ ಇಸ್ಟೇ,
ಹುಡುಗಿಯನ್ನು
ನೋಡಲು
ಎತ್ತಿದ
ತಲೆಯನ್ನು
ಇಳಿಸುತ್ತಲೇ
ಇಲ್ಲ.....!!!!


--
ಶಿವಪ್ರಕಾಶ್

Share/Save/Bookmark

Wednesday, February 9, 2011

Miss You Dear


ನನ್ನ ಹೆಂಡ್ತೀನ ಇವತ್ತು ನನ್ನೂರಿಗೆ ಕಳಿಸ್ತಾ ಇದೀನಿ...
ಕಳಿಸಲು ಮನಸಿಲ್ಲ..
ಆದ್ರೆ ಹೊಸ ಹೆಂಡ್ತಿಗೋಸ್ಕರ ನಾನು ಈ ತ್ಯಾಗ ಮಾಡಲೇಬೇಕು.
ಮನಸಿಲ್ಲದ ಮನಸಿನಿಂದ ಮನಸುಮಾಡಿ ಕಳಿಸ್ತಾ ಇದೀನಿ.
ಹತ್ತು ವರ್ಷದ ಈ ದಾಂಪತ್ಯದಲ್ಲಿ ಎಂದೂ ಕೂಡ ನೀ ನನ್ನ ಮನಸು ನೋಯಿಸಿಲ್ಲ.
ಬಹುಶ ನಾನು ಕೂಡ ನಿನ್ನನ್ನು ಅಸ್ಟೆ ಪ್ರೀತಿಯೊಂದ ನೋಡ್ಕೊಂಡಿದೀನಿ ಅನ್ಕೋತೀನಿ.
ನನಗರಿವಿಲ್ಲದೆ ನಿನಗೆ ಎಂದಾದರೂ ನೋವು ಮಾಡಿದ್ರೆ, ದಯವಿಟ್ಟು ಕ್ಷಮಿಸಿ ಬಿಡು.
ನೀನು ಎಲ್ಲೇ ಇರು, ಹೇಗೆ ಇರು, ನೀನು ನನ್ನವಳೇ.
ಬೇಜಾರ್ ಆಗಬೇಡ ಕಣೆ, ಅದೆಸ್ಟೆ ಕೆಲಸ ಕಾರ್ಯ ಇದ್ರು,
ತಿಂಗಳಿಗೊಮ್ಮೆ ಬಂದು ನಿನ್ನ ನೋಡ್ಕೊಂಡು ಹೋಗ್ತೀನಿ...
ಅಲ್ಲಿ ಎಲ್ಲರೂ ನಿನ್ನನ್ನ ಚನ್ನಾಗಿ ನೋಡ್ಕೋತಾರೆ.
ಅವರು ಚನ್ನಾಗಿ ನೋಡಿಕೊಳ್ಳದೆ ಇದ್ರೆ, ದಯವಿಟ್ಟು ಬೇಜಾರ್ ಮಾಡ್ಕೋಬೇಡ.
ನನಗೋಸ್ಕರ ಸಹಿಸಿಕೋ. ಪ್ಲೀಸ್...
ಅದ್ಯಾಕೋ ಗೊತ್ತಿಲ್ಲ. ನಿನ್ನ ಕಳುಹಿಸುತ್ತಿರುವ ಈ ಘಳಿಗೆಯಲ್ಲಿ, ನನಗರಿವಿಲ್ಲದೆ ನನ್ನ ಕಣ್ಣಲ್ಲಿ ಹನಿಯೊಂದು ಮೂಡಿದೆ.

I Miss You

Share/Save/Bookmark

Sunday, January 2, 2011

ಸಣ್ಣ ಕಥೆಗಳು

ತನ್ನ ಮದುವೆಯ ಕರೆಯೋಲೆ ಬೇರೆಯವರ ಮದುವೆಯ ಕರೆಯೋಲೆಗಿಂತಲೂ ವಿಭಿನ್ನವಾಗಿರಲೆಂದು, ಕಷ್ಟದಿ ಇಷ್ಟ ಪಟ್ಟು ಸುಂದರ ಸಾಲುಗಳಿಂದ ಪೋಣಿಸಿ.... ಅದಕ್ಕೊಂದು ಸುಂದರ ಕವಿತಾ ರೂಪವನ್ನೂ ಕೊಟ್ಟು..... ಪದೇ ಪದೇ ಅದೇ ಸಾಲುಗಳ ಮೆಲುಕು ಹಾಕುತ್ತ ಬಾಯಿಪಾಠ ಮಾಡಿದ್ದ. ಆದರೆ ಇವನ ಸ್ನೇಹಿತನ ಮದುವೆಯ ಕರೆಯೋಲೆಯ ಪತ್ರಿಕೆಗಾಗಿ ಸಾಲುಗಳನ್ನು ಬರೆದುಕೊಡು ಎಂದಾಗ.... ಹೊಸ ಸಾಲುಗಳ ಬರೆಯಲೋಗಿ ತನ್ನದೇ ಮದುವೆಯ ಕರೆಯೋಲೆಗೆಂದು ಬರೆದಿದ್ದ ಸಾಲುಗಳನ್ನು ಬರೆದುಬಿಟ್ಟಿದ್ದ ಕಾರಣ ಆ ಸಾಲುಗಳು ಅವನಲ್ಲೇ ಗುನುಗುತ್ತಲಿದ್ದವು........... ಕರೆಯೋಲೆಯ ಸಾಲುಗಳನ್ನ ದಾನ ಮಾಡಿ ಕೊನೆಗೆ ಅವನ ಮದುವೆಯ ಕರೆಯೋಲೆ ಪತ್ರಕ್ಕೆ ಸಾಲುಗಳೇ ಹುಟ್ಟದಾಗಿದೆ.
==

ಅವನು ಸರಿ ರಾತ್ರಿ ೧೨ ಗಂಟೆಗೆ ಮಲಗಿದ್ದ ಅಪ್ಪ ಅಮ್ಮನನ್ನು ಪ್ರೀತಿಯಿಂದ ಎಬ್ಬಿಸಿ ಅವರೊಟ್ಟಿಗೆ ಕೇಕ್ ಕತ್ತರಿಸಿ ಹೊಸ ವರ್ಷದ ಆಚರಣೆಯಲ್ಲಿ ವಿಜೃಂಭಿಸುತ್ತಿದ್ದ....... ಆದರೆ ಈಗ ಸಂಭ್ರಮಿಸುವ ಮನೆ ಮೌನವಿಸಿ ನಿದ್ರಿಸುತಿದೆ.... ಆದರವನು ಹೆಂಡತಿಯೊಡನೆ ಅವಳ ಅಪ್ಪ ಅಮ್ಮನೊಟ್ಟಿಗೆ ಸರಿ ರಾತ್ರಿಯಲಿ ಕೇಕ್ ಕತ್ತರಿಸಿ ಸಂತಸದಿ ಹೊಸ ವರ್ಷವನ್ನು ಬರಮಾಡಿಕೊಂಡನು.... ಇತ್ತ ಮೌನವಿಸಿದ ಮನೆಯಲ್ಲಿ ಜನ್ಮದಾತರಿಗೆ ಅನಾಥ ಪ್ರಜ್ಞ್ನೆ ಕಾಡುತಿದೆ
==

ಹೊಸ ವರ್ಷದ ಶುಭಾಗಮನಕ್ಕೆ ಪ್ರತಿ ವರ್ಷ ಅಪ್ಪ ಅಮ್ಮ ಮಗನಿಗೆ ಮೊದಲ ಕರೆ ಮಾಡುವಂತೆ, ಈ ವರ್ಷವೂ ಕರೆ ಮಾಡಿದ್ದಾರೆ. ಆದರೆ ಎರಡು ತಾಸುಗಳಾದರೂ ಎಂಗೇಜ್ ಸದ್ದೇ ಕಿವಿಗೆ ಅಪ್ಪಳಿಸುತ್ತಿದೆ....
ಕಾರಣ ಅವನೀಗ ಎಂಗೇಜ್......

==

ನಿಮ್ಮಿಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು..

ಪ್ರೀತಿಯಿಂದ,
ಶಿವಪ್ರಕಾಶ್
Share/Save/Bookmark

Thursday, December 9, 2010

ನೆನಪುಗಳು ಸುಟ್ಟು ಬೂದಿಯಾಗುವುದನ್ನು ಕಂಡೆ

ನಾನವಾಗ ಏಳನೇ ತರಗತಿಯಲ್ಲಿ ಓದುತ್ತಿದ್ದೆ. ಆ ವಯಸ್ಸಿನಲ್ಲಿ ನನಗೆ ಓದುವುದು, ಬರೆಯುವುದೆಂದರೆ ತುಂಬ ಇಷ್ಟದ ಸಂಗತಿ. ಒಮ್ಮೆ ನನ್ನ ಹಾಗು ನನ್ನ ಸುತ್ತಮುತ್ತ ನಡೆಯುತ್ತಲಿದ್ದ ಹಾಸ್ಯ ಹಾಗು ರಸಮಯ ಕ್ಷಣಗಳನ್ನು ನನ್ನ ದಿನಚರಿಯಲ್ಲಿ ಬರೆದಿಡಬೇಕೆನಿಸಿತು. ಮುಂದೊಮ್ಮೆ ನಾನು ದೊಡ್ಡ ವ್ಯಕ್ತಿಯಾದಾಗ ಎಲ್ಲರಿಗೂ, ನಾನು ಹೇಗಿದ್ದೆ..? ಎಂದು ಹೇಳಿಕೊಳ್ಳಬೇಕು, ಅದಕ್ಕಾಗಿ ದಿನಚರಿಯಲ್ಲಿ ಸುಂದರವಾದ ಕ್ಷಣಗಳನ್ನು ಬರೆದಿಡಬೇಕೆನಿಸಿತು. ನಾನು ಹಾಸ್ಟೆಲ್ಲಿನಲ್ಲಿ ಇದ್ದುದರಿಂದ ಬರೆಯಲು ಇಂತಹ ತುಂಬ ಸನ್ನಿವೇಶಗಳು ಸಿಗುತ್ತಿದ್ದವು. ಅಂದಿನಿಂದ ನನಗೆ ಎದುರಾದ ಹಾಸ್ಯ ಹಾಗು ರಸಮಯ ಕ್ಷಣಗಳನ್ನು ಬರೆದಿಟ್ಟುಕೊಳ್ಳತೊಡಗಿದೆ.

ನಾಲ್ಕು ತಿಂಗಳುಗಳ ನಂತರ ನಾನು ಬರೆದಿಡುತ್ತಿದ್ದ ದಿನಚರಿಯ ಪುಟಗಳ ಸಂಖೆ ೩೫೦ ದಾಟಿತ್ತು. ಅದನ್ನು ನೋಡಿದಾಗಲೆಲ್ಲ ಏನೋ ಒಂದು ರೀತಿಯ ಹೆಮ್ಮೆಯಾಗುತ್ತಿತ್ತು. ನಾನೊಬ್ಬ ದೊಡ್ಡ ವ್ಯಕ್ತಿಯ ಹಾಗೆ ಬೀಗುತ್ತಿದ್ದೆ. ನಾನು ಈ ನನ್ನ ದಿನಚರಿ ಪುಸ್ತಕವನ್ನು ಯಾರ ಕೈಗೂ ಸಿಗದಂತೆ ಕಾಪಾಡಿಕೊಂಡು ಬಂದಿದ್ದೆ. ಆದರೆ, ಒಂದುದಿನ ನನ್ನ ರೂಮ್-ಮೆಟ್ ಅದನ್ನು ಕೈಗೆತ್ತಿಕೊಂಡುಬಿಟ್ಟಿದ್ದ. ಅವನು ಓದುವ ಮುಂಚೆಯೇ ಅವನಿಂದ ಕಿತ್ತುಕೊಂಡು ಓಡಿದೆ. ಅವನು ಇನ್ನೂ ಇಬ್ಬರು ಸ್ನೇಹಿತರನ್ನು ಕಟ್ಟಿಕೊಂಡು ನನ್ನ ಹಿಂದೆಯೇ ಓಡೋಡಿ ಬಂದ. ಅವರಿಗೆ ಆ ಪುಸ್ತಕವನ್ನು ಕೊಟ್ಟುಬಿಡಬಹುದಾಗಿತ್ತು ಆದರೆ, ಅದರಲ್ಲಿ, ನನಗೆ ಏಳನೇ ಕ್ಲಾಸಿನಲ್ಲೇ ಹುಟ್ಟಿದ ಒಂದು ಪ್ರೇಮಕಥೆ ಇತ್ತು. ಅದನ್ನು ಯಾರಿಗೂ ತೋರಿಸಲು ನಾನು ಸುತರಾಂ ಸಿದ್ದವಿರಲಿಲ್ಲ. ನಾನು ಓಡುತ್ತಾ ಓಡುತ್ತಾ ಹಾಸ್ಟೆಲ್ಲಿನ ಅಡುಗೆ ಕೊಣೆಯ ಒಳ ಹೊಕ್ಕು ಗ್ಯಾಸ್-ಸ್ಟವ್ ನ ಪಕ್ಕ ಬಂದು ನಿಂತಿದ್ದೆ. ಗ್ಯಾಸ್-ಸ್ಟವ್ ನ ಉರಿಯನ್ನು ಹತ್ತಿಸಿದೆ. ಅವರು ಇನ್ನೇನು ನನ್ನ ಕೈಯಿಂದ ಕಿತ್ತುಕೊಳ್ಳುತ್ತಾರೆ ಎಂದು ಗೊತ್ತಾಗಿ, ನನ್ನ ದಿನಚರಿಯನ್ನು ಉರಿಯುತ್ತಿದ್ದ ಗ್ಯಾಸ್ ಸ್ಟವ್ ನ ಬೆಂಕಿಗೆ ಆಹುತಿ ಮಾಡಿಬಿಟ್ಟೆ...
ನನ್ನ ಕಣ್ಣ ಮುಂದೆಯೇ, ನನ್ನ ನೆನಪುಗಳು ಸುಟ್ಟು ಬೂದಿಯಾಗುವುದನ್ನು ಕಂಡೆ..... ಅದಾದ ಒಂದು ವಾರದ ವರೆಗೆ ನನಗೆ ತುಂಬ ಬೇಜಾರ್ ಆಗಿತ್ತು.

ಮೇಲಿನ ಘಟನೆ ನನ್ನದಲ್ಲ. ನನ್ನ ಸಹೋದ್ಯೋಗಿಯು ಕಾಫಿ Break ನಲ್ಲಿ ನನ್ನ ಜೊತೆ ಹಂಚಿಕೊಂಡ, ಅವನ ಬಾಲ್ಯದ ನೆನಪು..

ಗೆಳೆಯರೇ,
ನಾನು ಈ ಬ್ಲಾಗ್ ಲೋಕದ ಪಯಣದಲ್ಲಿ ಎರಡು ವರ್ಷಗಳನ್ನು ಕಳೆದು, ಮೂರನೇ ವರ್ಷಕ್ಕೆ ಕಾಲಿಟ್ಟಿದ್ದೇನೆ.
ನಿಮ್ಮೆಲ್ಲರ ಆತ್ಮೀಯ ಸಹಕಾರ ಹಾಗು ಬೆಂಬಲಕ್ಕೆ ನನ್ನ ಅನಂತ ಅನಂತ ಧನ್ಯವಾದಗಳು

ಇಂತಿ ನಿಮ್ಮ ಪ್ರೀತಿಯ,
ಶಿವಪ್ರಕಾಶ್
Share/Save/Bookmark

Sunday, October 24, 2010

ಗೋಕಾಕ್ ಜಲಪಾತ

ಸ್ನೇಹಿತನ ಮದುವೆ ನಿಮಿತ್ತ ಕೆಲವು ಗೆಳೆಯರೆಲ್ಲ ಸೇರಿಕೊಂಡು ಬೆಳಗಾವಿಗೆ ಹೋಗಿದ್ದೆವು. ಹಾಗೆ ಅಲ್ಲಿಗೆ ಹತ್ತಿರವಿದ್ದ ( 72 KMS) ಗೋಕಾಕ್ ಜಲಪಾತವನ್ನು ನೋಡಿಕೊಂಡು ಬಂದೆವು. ಅಲ್ಲಿ ತೆಗೆದ ಕೆಲವು ಫೋಟೋಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಜಲಪಾತವು ಗೋಕಾಕ್ ನಿಂದ ಕಿಲೋಮೀಟರು ದೂರದಲ್ಲಿದೆ. ಘಟಪ್ರಭಾ ನದಿಯ ಜಲಪಾತವು ನೋಡಲು ತುಂಬ ಮನಮೋಹಕವಾಗಿದೆ.






ಜಲಪಾತದ ವೀಡಿಯೊ ತುಣುಕು:



ಹೆಚ್ಚಿನ ಫೋಟೋಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ.

ಪ್ರೀತಿಯಿಂದ,
ಶಿವಪ್ರಕಾಶ್
Share/Save/Bookmark

Thursday, September 16, 2010

Bureaucrats

ಕಾಲೇಜಿನಲ್ಲಿ ಕ್ಯಾಂಪಸ್ ಇಂಟರ್ವ್ಯೂ ನಡೀತಾ ಇತ್ತು. ಮೊದಲ ಸುತ್ತಿನಲ್ಲಿ ತೇರ್ಗಡೆಯಾಗಿ ಎರಡನೇ ಸುತ್ತಾದ Group Discussion ಗೆ ನನ್ನ ಇಬ್ಬರು ಸ್ನೇಹಿತರಾದ ತರುಣ್ ಮತ್ತು ನವೀನ ಅರ್ಹತೆ ಪಡೆದಿದ್ದರು.
ಮೇಲ್ವಿಚಾರಕರು ಎರಡನೇ ಸುತ್ತಿಗೆ ಅರ್ಹತೆ ಪಡೆದ ಎಂಟು ಅಭ್ಯರ್ಥಿಗಳ ಗುಂಪು ಮಾಡಿ, ಚರ್ಚಿಸಬೇಕಾಗಿದ್ದ ವಿಷಯ "Should bureaucrats rule the nation?" ಎಂದು ತಿಳಿಸಿದರು.
ನನ್ನ ಇಬ್ಬರು ಸ್ನೇಹಿತರು ಒಂದೇ ಗುಂಪಿನಲ್ಲಿ ಇದ್ದರು.
ನನ್ನ ಇಬ್ಬರು ಸ್ನೇಹಿತರಿಗೂ "Bureaucrats" ಎನ್ನುವ ಪದದ ಅರ್ಥ ಗೊತ್ತಿರಲಿಲ್ಲ. ಸುಮ್ಮನಿರುವುದಕ್ಕಿಂತ ಕೇಳಿಬಿಡುವುದೇ ವಾಸಿಯೆಂದು ನವೀನ ಮೇಲ್ವಿಚಾರಕರಲ್ಲಿ "Bureaucrats" ಎನ್ನುವ ಪದದ ಅರ್ಥ ತಿಳಿಸುವಂತೆ ಮನವಿ ಮಾಡಿದ. ಆದರೆ, ಆ ಮೇಲ್ವಿಚಾರಕರು "ಕ್ಷಮಿಸಿ, ನಾವು ಹೇಳುವ ಹಾಗಿಲ್ಲ" ಎಂದು ನಯವಾಗಿ ತಿರಸ್ಕರಿಸಿದರು. ಬೇರೆ ದಾರಿಯಿಲ್ಲದೆ ನವೀನ ಸುಮ್ಮನಾದ.
ಚರ್ಚೆ ಪ್ರಾರಂಭವಾಯ್ತು. ನನ್ನ ಇನ್ನೊಬ್ಬ ಸ್ನೇಹಿತ ತರುಣ್ ಆ ಪದದ ಅರ್ಥ ಗೊತ್ತಿರದ ಕಾರಣ, ಅವನು ಬೇರೆಯವರು ಮಾತಾಡುವುದನ್ನು ಗ್ರಹಿಸಿಕೊಂಡು, ಅದೇ ಸಾಲಿಗೆ ತನ್ನ "I totally agree with you my friend" ಸೇರಿಸಿ ಹ್ಯಾಗೋ ಹೇಳುತ್ತಿದ್ದ. ಆದರೆ ನಮ್ಮ ನವೀನ ಮಾತ್ರ ಪದದ ಅರ್ಥ ತಿಳಿಯದೆ ಸುಮ್ಮನೆ ಕೂತುಬಿಟ್ಟಿದ್ದ.
ಚರ್ಚೆಯ ಸಮಯ ಮುಗಿಯುತ್ತ ಬಂತು. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದರು (ನನ್ನ ಸ್ನೇಹಿತ ನವೀನ ಒಬ್ಬ ಬಿಟ್ಟು).
ಕೊನೆಯಲ್ಲಿ ಸುಮ್ಮನೆ ಕೂತಿದ್ದ ನನ್ನ ಸ್ನೇಹಿತ ನವೀನನನ್ನು ನೋಡಿದ ಮೇಲ್ವಿಚಾರಕರು "Do you have any questions?" ಎಂದರು.
"Yes. May i know the meaning of Bureaucrats ??" ಎಂದ ನಮ್ಮ ನವೀನ.
Share/Save/Bookmark

Thursday, August 5, 2010

ಹೀಗೊಂದು ಪರೀಕ್ಷೆ...!!!

ಸೆಮಿಸ್ಟರ್ ನ ಕೊನೆ Lab Exam. ಅದು Project Demo ಕೊಡುವ Lab Exam. ಪ್ರಾಜೆಕ್ಟಿನಲ್ಲಿ ನಾನು, ನಟ, ರಘು ಹಾಗು ಸಂಗಮೇಶ್ ಇದ್ವಿ. ನಾವೆಲ್ಲರೂ ಸೇರಿ ಒಂದು PPT (Power Point Presentation) ರೆಡಿ ಮಾಡಿದೆವು. ಅದನ್ನು ತುಂಬ ಸುಂದರವಾಗಿಯೂ ಸಿದ್ದಗೊಳಿಸಿದೆವು.
ಪರಿವೀಕ್ಷಕರು (Examiner) ನಮ್ಮ ಹತ್ತಿರ ಬರುವುದರೊಳಗಾಗಿ ನಾವು PPT ಓಪನ್ ಮಾಡಿ ಇಟ್ಟುಕೊಂಡಿದ್ದೆವು. ಅವರು ಬಂದವೊಡನೆ ನಾವೆಲ್ಲರೂ "Good Morning Sir" ಹೇಳಿ, Project Demo ಕೊಡಲು ಮುಂದಾದವು.
ಮೊದಲು ನನ್ನ ಸರಧಿ. ನಾವೆಲ್ಲರೂ ಮುಂಚೆಯೇ PPT ಯ ಪುಟಗಳನ್ನು ಸರಿಯಾಗಿ ಹಂಚಿಕೊಂಡಿದ್ದೆವು.
ನಾನು ಮುಂದೆ ಬಂದು PPT ಯ ಮೊದಲ ಪುಟವನ್ನು ತೋರಿಸುತ್ತ... ಪ್ರಾಜೆಕ್ಟ್ ಬಗ್ಗೆ ಹೇಳೋಳು ಶುರು ಮಾಡಿದೆ.
ಮಾನಿಟರ್ ಪರದೆಯ ಮೇಲೆ ಕಾಣಿಸುತ್ತಿದ್ದ PPT ಯ ಮೊದಲನೇ ಪುಟವನ್ನು ಪರಿವೀಕ್ಷಕರು ನೋಡುತ್ತಾ, SKIP ಎಂದರು.
ನಾನು ಮೊದಲ ಪುಟದ ಮಾಹಿತಿಯನ್ನು ವಿವರಿಸುವುದನ್ನು ನಿಲ್ಲಿಸಿ, ಎರಡನೇ ಪುಟಕ್ಕೆ ತಿರುಗಿಸಿ, ಎರಡನೇ ಪುಟದಲ್ಲಿ ಬರೆದ ವಿಷಯವನ್ನು ವಿವರಿಸುವುದಕ್ಕೆ ಹೋದೆ.
ಪರಿವೀಕ್ಷಕರು ಪುನಃ SKIP ಎಂದರು.
ನಾನು ಮೂರನೇ ಪುಟಕ್ಕೆ ತಿರುಗಿಸಿ, ವಿವರಿಸಲು ಅಣುವಾದೆ.
ಅವರು ಪುನಃ SKIP ಎಂದರು.
ನಾಲ್ಕನೇ ಪುಟಕ್ಕೆ ತಿರುಗಿಸಿದೆ.
ಪುನಃ SKIP ಎಂದರು.
ಐದನೇ ಪುಟಕ್ಕೆ ತಿರುಗಿಸಿದೆ.
ಪುನಃ SKIP ಎಂದರು.
ಆರನೇ ಪುಟಕ್ಕೆ ತಿರುಗಿಸಿದೆ.
ಪುನಃ SKIP ಎಂದರು.
ನಾನು ಹೇಳುವುದನ್ನು ಬಿಟ್ಟು ಹಿಂದಕ್ಕೆ ಸರಿದು ನಿಂತೆ. ನಾನು ಅಲ್ಲಿಯವರೆಗೂ ಏನನ್ನು ಹೇಳಿರಲಿಲ್ಲ, ಏಕೆಂದರೆ ಹೇಳುವುದಕ್ಕೆ ಮುಂಚೆಯೇ ಅವರು PPT ಯ ಪುಟದ ಮೇಲೆ ಕಣ್ಣಾಡಿಸಿ SKIP ಎನ್ನುತ್ತಿದ್ದರು.
ನಾನು ಹಿಂದೆ ಸರಿದಿದ್ದನ್ನು ನೋಡಿದ ಪರಿವೀಕ್ಷಕರು "ಯಾಕೆ ಹಿಂದಕ್ಕೆ ಹೋದಿರಿ" ಎಂದರು.
ನಾನು "ಸಾರ್, ನಮ್ಮ PPT ನಲ್ಲಿ 24 ಪುಟಗಳಿವೆ. ನಾವೆಲ್ಲರೂ PPT ಯನ್ನು ವಿವರಿಸಲು ತಲಾ ಆರು ಪುಟಗಳಂತೆ ಆರಿಸಿಕೊಂಡಿದ್ದೇವೆ. ಮೊದಲ ಆರು ಪುಟಗಳನ್ನು ನಾನು ವಿವರಿಸಿ. ನಂತರದ ಆರು ಪುಟಗಳು ರಘು, ಅದನಂತರದ ಆರು ಪುಟಗಳು ನಟರಾಜ, ನಂತರ ಸಂಗಮೇಶ್ ವಿವರಿಸೋಣವೆಂದು ನಿಶ್ಚಯಿಸಿಕೊಂಡಿದ್ದೇವೆ. ನನ್ನ ಆರು ಪುಟಗಳು ಮುಗಿಯಿತಲ್ಲ...? ಅದಕ್ಕೆ ಹಿಂದೆ ಸರಿದೆ." ಎಂದೆ.
ನನ್ನ ಈ ವಿವರಣೆಯನ್ನು ಕೇಳಿದ ಪರಿವೀಕ್ಷಕರು ಒಮ್ಮೆ ಮುಗುಳ್ನಕ್ಕು, ಸರಿಯಪ್ಪಾ ಎಂದು ಹೇಳಿ. ನಂತರ ವಿವರಿಸಿದ ನಟ, ರಘು, ಹಾಗು ಸಂಗಮೇಶನ Project Demo ದ ವಿವರಣೆಯನ್ನು ಕೇಳಿದರು.
ನಿಜ ಹೇಳಬೇಕೆಂದರೆ ಅವರು ಕೇಳಿದ್ದು, ಸಂಗಮೇಶ್ ವಿವರಿಸಿದ ಆ ಕೊನೆಯ ಆರು ಪುಟಗಳು ಅಸ್ಟೆ.
Share/Save/Bookmark