ಜನ ಜಾತ್ರೆಯ ನಡುವೆ
ಕಳೆದುಹೊಗಬೇಕೆನಿಸುವುದು..
ಎಲ್ಲವನೊಮ್ಮೆ ದೂರಕೆ ತಳ್ಳಿ
ದೂರವಾಗಬೇಕೆನಿಸುವುದು..
ಮಾತುಗಾರರ ನಡುವೆ,
ಮೌನವಾಗಿರಬೇಕೆನಿಸುವುದು..
ಮಾತಲ್ಲದ ಮಾತಲ್ಲಿ
ಮಾತು ಹೇಳಬೇಕೆನಿಸುವುದು...
ಹರಿವ ನೀರನೊಮ್ಮೆ
ನಿಲಿಸಿ ಕೇಳಬೇಕೆನಿಸುವುದು
ನಿಂತ ನೀರನ್ನೊಮ್ಮೆ
ಕದಡಿ ಕೇಳಬೇಕೆನಿಸುವುದು..
ಈ ಜೀವನಕೆ
ಅರ್ಥವೇ ಇಲ್ಲವೆನಿಸುವುದು..
ಅರ್ಥ ಹುಡುಕುತಿರುವವರ
ಕಂಡು ಮರುಕ ಹುಟ್ಟುತಿಹುದು..
ಒಮ್ಮೊಮ್ಮೆ ಎಲ್ಲವು
ಬೇಕೆನಿಸುವುದು..
ಬೇಕೆನಿಸುವುದೆಲ್ಲಾ
ಬರಿ ಮಾಯೆ ಎಂದು ಮನ ಎಚ್ಚೆರಿಸುತಿಹುದು...
ಇಂತಿ,
ವೈರಾಗಿ... ನಾನಲ್ಲ..
ಶಿವಪ್ರಕಾಶ್
--
ಕೊನೆಯದಾಗಿ. ಡಿವಿಜಿ ಯವರ ಈ ಸಾಲು ನಿಮಗಾಗಿ...
"ವ್ಯರ್ಥವೀ ಜೀವನದ ಬಡಿದಾಟವೆನ್ನದಿರು | ಅರ್ಥವಹುದದು ನಿನಗೆ ಪೂರ್ಣದರ್ಶನದಿಂ"
