Tuesday, May 12, 2009

ಸವಾರಿ



ನನ್ನ ಸ್ನೇಹಿತ ರಮೇಶ್ ಆಫೀಸ್ಗೆ ಬೆಳಿಗ್ಗೆ ರೆಡಿ ಆಗಿ ಇನ್ನೇನು ಬೈಕ್ ಹಾತ್ತಬೇಕು ಅನ್ನುವಸ್ಟರಲ್ಲಿ ಅವನ ಸ್ನೇಹಿತ ಉಲ್ಲಾಸ್ ಅವನನ್ನು ಕೇಳಿದ.
"ಯಾವ ಕಡೆಯಿಂದ ಹೋಗ್ತಾ ಇದಿಯಾ ಮಗ ? "
ರಮೇಶ್: "ಶಿವಾಜಿನಗರ್ ಕಡೆಯಿಂದ ಹೋಗ್ತಾ ಇದೀನಿ.. "
ಉಲ್ಲಾಸ್: "ನಾನು ನಿನ್ ಜೊತೆ ಬರ್ತೀನಿ. ಶಿವಾಜಿನಗರ್'ಗೆ ಹೋಗ್ಬೇಕು."
ರಮೇಶ್: "ಸರಿ, ಹೋಗೋಣ ಬಾ.."

ಹತ್ತಿರದ ಹೋಟೆಲ್ಲಿನಲ್ಲಿ ಟಿಫಿನ್ ಮಾಡಿ ರಮೇಶ್ ಬೈಕ್ ಹತ್ತಿ, ಅವನನ್ನು ಹಿಂದಿನ ಸೀಟಿನಲ್ಲಿ ಕುಳ್ಳಿರಿಸಿಕೊಂಡು ಹೊರಟ.
ದಾರಿಯಲ್ಲಿ ಒಂದು ಕುಣಿ ಬಂದಾಗ ಜೋರಾಗಿ ಬೈಕನ್ನು ಎಗ್ಗರಿಸಿದ.
ಜೋರಾಗಿ ಬೈಕ್ ಹೊಡೆಯುತ್ತಿದ್ದ ರಮೇಶನಿಗೆ, ನಿಧನಾವಾಗಿ ಓಡಿಸೋ ಅಂತ ಉಲ್ಲಾಸ ಕೇಳಿಕೊಂಡ.

ಹೋಗುತ್ತಿರುವಾಗ ದಾರಿಯಲ್ಲಿ ಪೆಟ್ರೋಲ್ ಹಾಕಿಸಲು ಪೆಟ್ರೋಲ್ ಬಂಕ್ ನ ಒಳ ನಡೆದು, ಪೆಟ್ರೋಲ್ ಹಾಕಿಸಿದ.
ಮತ್ತೆ, ಸವಾರಿ ಹೊರಟಿತು...
ಜೋರಾಗಿ ಓಡಿಸಿತ್ತಿದ್ದ...
೬ ಕಿಲೋಮೀಟರು ಚಲಸಿದ ಬಳಿಕ, ಒಂದು ದೊಡ್ಡ ಕುಣಿ ಬಂತು. ಅದನ್ನು ನೋಡದೆ ಮತ್ತೆ ಜೋರಾಗಿ ಎಗ್ಗರಿಸಿದ..
ಆಗ ರಮೇಶ್, ಉಲ್ಲಾಸನ ಉದ್ದೇಶಿಸಿ "ಸಾರೀ ಮಗ, ಕುಣಿ ಕಾಣಲಿಲ್ಲ, ಎಗ್ಗರಿಸಿಬಿಟ್ಟೆ" ಎಂದು ಕ್ಷೆಮೆ ಕೇಳಲು ಹಿಂತಿರಿಗಿದ...
ಹಿಂದೆ ಉಲ್ಲಾಸ ಇಲ್ಲ...
ಆಯ್ಯೋ ದೇವರೇ...
ಎಲ್ಲಿ ಬಿದ್ದನೋ ಉಲ್ಲಾಸ ?.ಅಂತ ಹಿಂತಿರಿಗಿ ನೋಡಿದ. ಅಲ್ಲೆಲ್ಲೂ ಅವನಿಲ್ಲ.
ಎಲ್ಲಿ ಹೋದ ಮಾರಾಯ. ಅಂತ ಅವನ ಮೊಬೈಲ್ಗೆ ಕರೆ ಮಾಡಲು ಮೊಬೈಲ್ ಹೊರ ತೆಗೆದ.
ನೋಡಿದರೆ ೩ missed calls. ಅದು ಉಲ್ಲಸಾನಿಂದ.
ತಿರಿಗಿ ಉಲ್ಲಾಸನ ಮೊಬೈಲ್ ಗೆ ಕರೆ ಮಾಡಿದ....
ರಮೇಶ್: "ಲೋ, ಎಲ್ಲಿದಿಯೋ ?"
ಉಲ್ಲಾಸ್: "ಮಗನೆ, ಪೆಟ್ರೋಲ್ ಬಂಕ್ ಹತ್ರ ಇದೀನಿ. ನೀನು ಪೆಟ್ರೋಲ್ ಹಾಕಿಸುವಾಗ ನಾನು ಕೆಳಗಡೆ ಇಳಿದಿದ್ದೆ.. ನಾನು ಅತ್ತ ಕಡೆ ನೋಡುವಾಗ, ಇತ್ತ ನೀನು ಮಾಯಾ... ದೊಡ್ಡ ನಮಸ್ಕಾರ ನಿನಗೆ... ಇನ್ನೊದು ಬಾರಿ ನಿನ್ನ ಬೈಕ್ನಲ್ಲಿ ಬರಲ್ಲಾ ಗುರು. ಇನ್ನೇನು ಮಾಡೋದು, ಬಡವರ ಬಂಧು BMTC ಹತ್ತಿ ಹೊರಡ್ತಾ ಇದೀನಿ.. ಚನ್ನಾಗಿ ಡ್ರಾಪ್ ಮಾಡದಲ್ಲ, ತುಂಬಾ ಥ್ಯಾಂಕ್ಸ್....ಫೋನ್ ಇಡ್ತೀನಿ ಮಗ, BYE "
Share/Save/Bookmark

22 comments:

  1. ಓದಿ ಜೋರಾಗಿ ನಕ್ಕುಬಿಟ್ಟೆ...

    ReplyDelete
  2. ಹ..ಹ್ಹ..ಹ್ಹ...ಹ್ಹಾ....! ಚೆನ್ನಾಗಿದೆ ನಿಮ್ಮ ಇಬ್ಬರ ಸ್ನೇಹಿತರ ಬೈಕ್ ಪ್ರಯಾಣದ ಪ್ರಸಂಗ!

    ReplyDelete
  3. ಹ್ಹಾ ಹ್ಹಾ!ಓಡ್ಸವ್ರಿಗೆ ಚೆಲ್ಲಾಟ... ಹಿಂದೆ ಕೂತವರಿಗೆ ಪ್ರಾಣ ಸಂಕಟ;)

    ReplyDelete
  4. ಚೆನ್ನಾಗಿದೆ ಹರಟೆ.
    ಒಂದು ಸಲ ನನ್ನ ಹೆಂಡತೀನ ಮಾರ್ಕೆಟ್ಟಿನಲ್ಲೇ ಬಿಟ್ಟು ನಾನು ಸ್ಕೂಟರ್ ಮೇಲೆ ಮನೆಗೆ ಮರಳಿದ್ದೆ!

    ReplyDelete
  5. ನಾನು ಒಂದು ಸಾರಿ ನನ್ನ ಹೆಂಡತಿಯನ್ನು ಹತ್ತುವ ಮೊದಲೇ ಬಿಟ್ಟುಬಿಟ್ಟು ಮೂರು ಕಿ.ಮೀ ನಷ್ಟು ಹೋಗಿದ್ದೆ. ಆನಂತರ ಗೊತ್ತಾಗಿ ಬಯ್ಯಿಸಿಕೊಂಡಿದ್ದೆ.

    ReplyDelete
  6. ಚೆನ್ನಾಗಿದೆ ಬರಹ. ಜೋರಾಗಿ ಬೈಕ್ ಓಡಿಸುವವರ ಕಥೆ ಹೀಗೆ...
    ನಾನು ಕೂಡ ಸ್ವಲ್ಪ ಬರಹಗಳನ್ನು ಬರೆದಿದ್ದೇನೆ. ಟೈಮ್ ಸಿಕ್ಕಾಗ ನೋಡಿ

    ranjanahegde.wordpress.com

    ReplyDelete
  7. ಹಾ ಹಾ ಹಾ....ಅಸ್ಟೆ ಹೇಳೋಕೆ ಆಗೋದು.......
    ಉಲ್ಲಾಸನ ಕತೆ....ನವೊಲ್ಲಾಸಬರಿತವಾಗಿದೆ ...........

    ಗುರು

    ReplyDelete
  8. ಶಿವಪ್ರಕಾಶ್,
    ಈ ತರಹದ ಅನುಭವ ನನಗೊ ಆಗಿದೆ.. ನಿಮ್ಮ ಲೇಖನ ನನ್ನ ಪತಿಯವರಿಗೆ ಕಳಿಸಿದ್ದೇನೆ ಏಕೆಂದರೆ ಅವರು ನನ್ನ ಹೀಗೆ ಬಿಟ್ಟು ಹೋಗಿದ್ದರು ಎಷ್ಟೋ ದೂರ ಹೋದ ನಂತರ ತಿರುಗಿ ಬಂದಿದ್ದರು ನಾನು ಅವರ ಬೈಕ್ ಹೋದ ದಾರಿಯಲ್ಲೇ ನೆಡೆದು ಹೋಗುತ್ತಲಿದ್ದೆ ನಂತರ ಕರೆದುಕೊಂಡು ಹೋದರು.... ಕೊನೆಗೆ ಬೈಸ್ ಕೊಂಡರು ಚೆನ್ನಾಗಿ........

    ಆಫೀಸಿನಲ್ಲಿ ನಾ ನಗುವುದ ನೋಡಿ ಎಲ್ಲರು ಬಂದು ಕೇಳಿದರು ಈ ಅರಬ್ಬೀಗಳಿಗೆಲ್ಲಾ ಈ ಕಥೆ ಅರಬ್ಬೀಯಲ್ಲೇ ಹೇಳಿದ್ದೀನಿ ಎಲ್ಲರೊ ನಕ್ಕು ನಕ್ಕು ಸುಸ್ತಾದರು ಹಾ ಹಾ ಹಾ

    ವಾಸ್ತವ ಘಟನೆಗಳು ಚೆನ್ನಾಗಿ ಬರೆಯುತ್ತೀರಿ ಮುಂದುವರಿಸಿ ನಿಮ್ಮ ಅನುಭವ ದಿನಚರಿ ಎಲ್ಲದರ ವಿಷಯಗಳನ್ನು ನಮಗೊ ನಗುವುದಕ್ಕೆ ಒಂದು ಚಾನ್ಸ್ ........

    ReplyDelete
  9. ಶಿವು ಅವರೇ,
    ಸ್ನೇಹಿತರ ಸವಾರಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    =================

    SSK ಅವರೇ,
    ಸ್ನೇಹಿತರ ಸವಾರಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    =================

    chethan c r ಅವರೇ,
    ಸ್ನೇಹಿತರ ಸವಾರಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    =================

    sunaath ಅವರೇ,
    ನಿಮಗೂ ಇದೆ ಥರ ಅನುಭವ ಆಗಿದೆ ನಾ.... ಬಹುಶ ಯಾವುದೋ ಆಲೋಚನೆಯಲ್ಲಿ ಇದ್ರಿ ಅನ್ಸುತ್ತೆ..
    ಸ್ನೇಹಿತರ ಸವಾರಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    =================

    ಉದಯ್ ಅವರೇ,
    ನಿಮ್ಮ ಅನುಭವ ತುಂಬಾ ತಮಾಷೆಯಾಗಿದೆ. ಹಾಗಾದ್ರೆ ನಾನು ನಿಮ್ಮ ಬೈಕಲ್ಲಿ ಬಂದ್ರೆ ಕೆಲಗಡೆ ಇಳಿಯೋಲ್ಲ...
    ಸ್ನೇಹಿತರ ಸವಾರಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    =================

    Ranjana H ಅವರೇ,
    ನಿಮ್ಮ ಬ್ಲಾಗ್ ನೋಡಿದೆ. ತುಂಬಾ ಚನ್ನಾಗಿದೆ..
    ಒಳ್ಳೆ ಒಳ್ಳೆ ಚುಟುಕುಗಳು, ಕವನಗಳು, ಲೇಖನಗಳು...
    ನಿಮ್ಮ ಆಹ್ವಾನಕ್ಕೆ ಧನ್ಯವಾದಗಳು...
    ಹಾಗೆ, ಸ್ನೇಹಿತರ ಸವಾರಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    =================

    ಗುರು ಅವರೇ,
    ಸ್ನೇಹಿತರ ಸವಾರಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    =================

    ಮನಸು ಅವರೇ,
    ನಿಮಗೂ ಕೂಡ ಇದೆ ರೀತಿ ಆಗಿತ್ತಾ? ಯಾವುದೋ ಆಲೋಚನೆಯಲ್ಲಿ ಇದ್ರೂ ಅನ್ಸುತ್ತೆ, ಅದಕ್ಕೆ ಮರೆತುಬಿಟ್ಟಿರ್ತಾರೆ, ನೀವು ದೊಡ್ಡ ಮನಸು ಮಾಡಿ ಕ್ಷಮಿಶಬಹುದಲ್ವಾ..?..
    ತಪ್ಪು ಮಾಡದವ್ರು ಯಾರವ್ರೆ ?... ಅಲ್ವ :P

    ಸ್ನೇಹಿತರ ಸವಾರಿಯನ್ನು ಮೆಚ್ಚಿಕೊಂಡು,
    ನಿಮ್ಮ ಪತಿದೇವರಿಗೆ ಹಾಗು ಅರಬ್ಬಿಗಳಿಗೆ ಸಾವರಿ ಹಾಸ್ಯವನ್ನು ಉಣಬಡಿಸಿ,
    ಲೇಖನಕ್ಕೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು....

    ReplyDelete
  10. ಒಳ್ಳೆಯ ತಮಾಷೆ ಮಾರಾಯ್ರೆ!

    ReplyDelete
  11. ಅದಕ್ಕರೀ ನಾ ಬೈಕ್ ಹೊಡಿಯುವುದಿಲ್ಲ ಹಿಂದ ಕೂತ್ರು ಮುಂದಿನವರ ಮ್ಯಾಲ ಯಾವಾಗಲೂ
    ಕಣ್ಣಿಟ್ಟಿರ್ತೇನಿ....!

    ReplyDelete
  12. ಚೆನ್ನಾಗಿದೆ..ನಕ್ಕುಬಿಟ್ಟೆ.
    -ಧರಿತ್ರಿ

    ReplyDelete
  13. ಸಂದೀಪ್ ಕಾಮತ್ ಅವರೇ,
    ಸ್ನೇಹಿತರ ಸವಾರಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    =================

    umesh desai ಅವರೇ,
    ಬೈಕ್ ಹೊಡಿಯಲ್ಲ ಅಂದ್ರೆ ಹೇಗ್ ರೀ..?
    ಬೈಕ್ ಹೊಡಿಯೋದ್ರಲ್ಲಿ ಒಂತರ ಕುಶಿ ಸಿಗುತ್ತೆ.
    ನಂಗೆ ಬೈಕ್ ಹೊಡಿಯೋದು ಅಂದ್ರೆ ತುಂಬಾ ಇಷ್ಟ.
    ಲೇಖನಕ್ಕೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು....
    =================

    ಧರಿತ್ರಿ ಅವರೇ,
    ಸ್ನೇಹಿತರ ಸವಾರಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

    ReplyDelete
  14. ಇದು ನು ರಿಯಲ್ ಸ್ಟೋರಿ ನ ಚಿನ್ನ. ತುಂಬ ಚೆನ್ನಾಗಿ ಇದೆ
    ಇಂದ್ರ

    ReplyDelete
  15. This comment has been removed by the author.

    ReplyDelete
  16. ಹುಹ್... ಏನ್ರೀ ಇದು... ಬೈಕಿನ ವಿಷ್ಯ ಬ್ಯಾದವೋ ಶಿಷ್ಯ... :-)

    ReplyDelete
  17. ಇಂದ್ರ,
    ರಿಯಲ್ ಸ್ಟೋರಿ ಕಣೋ.
    ಸವಾರಿ ಮೆಚ್ಚಿದ್ದಕ್ಕೆ ಥ್ಯಾಂಕ್ಸ್ ಕಣೋ...

    ===========

    ರವಿಕಾಂತ ಗೋರೆ ಅವರೇ,
    ಬೇಡ ಅಂದ್ರೆ ಹೆಂಗೆ ?...
    ಸ್ನೇಹಿತರ ಸವಾರಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

    ReplyDelete
  18. ಶಿವಪ್ರಕಾಶ್....

    ನನಗೂ ಇದೇರೀತಿ ಅನುಭವ ಆಗಿತ್ತು ಆಗಿತ್ತು.....

    ಬ್ಲಾಗಿನಲ್ಲಿ ಬರೆಯಲು ಒಂದು ವಿಷಯ ನೆನಪಿಸಿದ್ದೀರಿ...

    ಮರೆವು ಅನರ್ಥಕ್ಕೆ ಕಾರಣ...

    ನಮ್ಮನ್ನು ನಗಿಸಿದ್ದಕ್ಕೆ ಧನ್ಯವಾದಾಗಳು...

    ReplyDelete
  19. ಚೆನ್ನಾಗಿದೆ ಸವಾರಿ... ಸವಾರಿ ಚಿತ್ರದ ವಿಮರ್ಶೆ ಇರಬೇಕು ಅಂದುಕೊಂಡು ಬಂದೆ.. ಇಲ್ಲಿ ನೋಡಿದ್ರೆ ನಿಮ್ಮ ಸವಾರಿ ಕಥೆಯಿದೆ, ನಮ್ಮಂಥಾ ಕಡಿಮೆ ತೂಕದ ಜನ ಹಿಂದೆ ಕೂತದ್ದೆ ಗೊತ್ತಾಗಲ್ಲ ಆಗ್ ಹೀಗೆ ಆಗದೇ ಇನ್ನೇನು...

    ReplyDelete
  20. ಪ್ರಕಾಶ್ ಅವರೇ,
    ಸ್ನೇಹಿತರ ಸವಾರಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

    ===========
    ಪ್ರಭು,
    ಸ್ನೇಹಿತರ ಸವಾರಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

    ReplyDelete
  21. ವೀಣಾ ಅವರೇ,
    ಹೌದು ರೀ, ನಾನಗೂ ಪಾಪ ಅನ್ಸುತ್ತೆ... :)
    ಸ್ನೇಹಿತರ ಸವಾರಿ ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

    ReplyDelete