Sunday, January 2, 2011

ಸಣ್ಣ ಕಥೆಗಳು

ತನ್ನ ಮದುವೆಯ ಕರೆಯೋಲೆ ಬೇರೆಯವರ ಮದುವೆಯ ಕರೆಯೋಲೆಗಿಂತಲೂ ವಿಭಿನ್ನವಾಗಿರಲೆಂದು, ಕಷ್ಟದಿ ಇಷ್ಟ ಪಟ್ಟು ಸುಂದರ ಸಾಲುಗಳಿಂದ ಪೋಣಿಸಿ.... ಅದಕ್ಕೊಂದು ಸುಂದರ ಕವಿತಾ ರೂಪವನ್ನೂ ಕೊಟ್ಟು..... ಪದೇ ಪದೇ ಅದೇ ಸಾಲುಗಳ ಮೆಲುಕು ಹಾಕುತ್ತ ಬಾಯಿಪಾಠ ಮಾಡಿದ್ದ. ಆದರೆ ಇವನ ಸ್ನೇಹಿತನ ಮದುವೆಯ ಕರೆಯೋಲೆಯ ಪತ್ರಿಕೆಗಾಗಿ ಸಾಲುಗಳನ್ನು ಬರೆದುಕೊಡು ಎಂದಾಗ.... ಹೊಸ ಸಾಲುಗಳ ಬರೆಯಲೋಗಿ ತನ್ನದೇ ಮದುವೆಯ ಕರೆಯೋಲೆಗೆಂದು ಬರೆದಿದ್ದ ಸಾಲುಗಳನ್ನು ಬರೆದುಬಿಟ್ಟಿದ್ದ ಕಾರಣ ಆ ಸಾಲುಗಳು ಅವನಲ್ಲೇ ಗುನುಗುತ್ತಲಿದ್ದವು........... ಕರೆಯೋಲೆಯ ಸಾಲುಗಳನ್ನ ದಾನ ಮಾಡಿ ಕೊನೆಗೆ ಅವನ ಮದುವೆಯ ಕರೆಯೋಲೆ ಪತ್ರಕ್ಕೆ ಸಾಲುಗಳೇ ಹುಟ್ಟದಾಗಿದೆ.
==

ಅವನು ಸರಿ ರಾತ್ರಿ ೧೨ ಗಂಟೆಗೆ ಮಲಗಿದ್ದ ಅಪ್ಪ ಅಮ್ಮನನ್ನು ಪ್ರೀತಿಯಿಂದ ಎಬ್ಬಿಸಿ ಅವರೊಟ್ಟಿಗೆ ಕೇಕ್ ಕತ್ತರಿಸಿ ಹೊಸ ವರ್ಷದ ಆಚರಣೆಯಲ್ಲಿ ವಿಜೃಂಭಿಸುತ್ತಿದ್ದ....... ಆದರೆ ಈಗ ಸಂಭ್ರಮಿಸುವ ಮನೆ ಮೌನವಿಸಿ ನಿದ್ರಿಸುತಿದೆ.... ಆದರವನು ಹೆಂಡತಿಯೊಡನೆ ಅವಳ ಅಪ್ಪ ಅಮ್ಮನೊಟ್ಟಿಗೆ ಸರಿ ರಾತ್ರಿಯಲಿ ಕೇಕ್ ಕತ್ತರಿಸಿ ಸಂತಸದಿ ಹೊಸ ವರ್ಷವನ್ನು ಬರಮಾಡಿಕೊಂಡನು.... ಇತ್ತ ಮೌನವಿಸಿದ ಮನೆಯಲ್ಲಿ ಜನ್ಮದಾತರಿಗೆ ಅನಾಥ ಪ್ರಜ್ಞ್ನೆ ಕಾಡುತಿದೆ
==

ಹೊಸ ವರ್ಷದ ಶುಭಾಗಮನಕ್ಕೆ ಪ್ರತಿ ವರ್ಷ ಅಪ್ಪ ಅಮ್ಮ ಮಗನಿಗೆ ಮೊದಲ ಕರೆ ಮಾಡುವಂತೆ, ಈ ವರ್ಷವೂ ಕರೆ ಮಾಡಿದ್ದಾರೆ. ಆದರೆ ಎರಡು ತಾಸುಗಳಾದರೂ ಎಂಗೇಜ್ ಸದ್ದೇ ಕಿವಿಗೆ ಅಪ್ಪಳಿಸುತ್ತಿದೆ....
ಕಾರಣ ಅವನೀಗ ಎಂಗೇಜ್......

==

ನಿಮ್ಮಿಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು..

ಪ್ರೀತಿಯಿಂದ,
ಶಿವಪ್ರಕಾಶ್
Share/Save/Bookmark

12 comments:

  1. sanna kategallu chennagi mudide nimma barahadalli .:)

    ReplyDelete
  2. ಶಿವು;ಸುಂದರ ಸಣ್ಣ ಕಥೆಗಳು.ಹೊಸ ವರ್ಷದ ಶುಭಾಶಯಗಳು.

    ReplyDelete
  3. ಮಸ್ತ ಕತೆಗಳು!
    ಹೊಸ ವರ್ಷದ ಶುಭಾಶಯಗಳು!

    ReplyDelete
  4. ನೀವೂ ಎಂಗೇಜೆನ್ರೀ :-) ? ಚಿಕ್ಕದಾದರೂ ಚೆನ್ನಾಗಿವೆ.

    ReplyDelete
  5. Happy New year Shivu....

    Hosa varshakke super lines....

    ReplyDelete
  6. ಸೂಪರ್ ಆಗಿವೆ ಸಣ್ಣಕತೆಗಳು...

    ReplyDelete
  7. ಈ ಕತೆಗಳು ನಿಂದೆ ಏನೋ ದೋಸ್ತ..? ನನಗ್ಯಾಕೋ ಡೌಟು..!!
    ಹ ಹ.. ಮಸ್ತ್..

    ReplyDelete
  8. ಕತೆಗಳು ಚೆನ್ನಾಗಿವೆ. ಹೊಸ ವರ್ಷದ ಶುಭಾಶಯಗಳು

    ReplyDelete