Tuesday, October 16, 2012

ಬದಲಾಗಿರುವುದಾದರು ಏನು...?

ನನ್ನವರಲ್ಲ
ಎಂದುಕೊಂಡವರು...
ನನ್ನವರಾಗುವುರು...!!!

ನನ್ನವರು
ಎಂದುಕೊಂಡವರು...
ನನ್ನವರಾಗದಿರುವುದು....!!!

ನಾ ಬದಲಾಗಿಲ್ಲ...
ಅಂದು ಹೇಗಿದ್ದೇನೋ..
ಇಂದು ಹಾಗೆಯೇ ಇರುವೆ...

ನೀವು...?
ನೀವೂ ಬದಲಾಗಿಲ್ಲ...
ಅಂದು ಹೇಗಿದ್ದಿರೋ ...
ಇಂದು ಹಾಗೆಯೇ ಇರುವಿರಿ...

ಪ್ರಪಂಚ ...?
ಅದು ಕೂಡ ಬದಲಾಗಿಲ್ಲ...
ಅಂದು ಹೇಗಿತ್ತೋ...
ಇಂದು ಹಾಗೆಯೇ ಇದೆ...

ಆದರೆ,
ಬದಲಾಗಿರುವುದಾದರು ಏನು...?
ಹೌದು... ಬದಲಾಗಿರುವುದು....
ದೃಷ್ಠಿ...!!!
ನೀವು ನನ್ನ ನೋಡುವ
ದೃಷ್ಠಿ...!!!


ಪ್ರೀತಿಯಿಂದ,
ಶಿವಪ್ರಕಾಶ್  

Share/Save/Bookmark

13 comments:

  1. "ನಿನ್ನ ದೃಷ್ಟಿಕೋನವನ್ನು ಬದಲಾಯಿಸಿಕೋ,ನೀನು ನೋಡುವ ಜಗತ್ತೇ ಬದಲಾಗುತ್ತದೆ " ಎನ್ನುವ ಮಾತುಗಳು ನೆನಪಾಯ್ತು..ಚೆನಾಗಿದೆ ಶಿವುಪ್ರಕಾಶ, ನೀವು ಅದನ್ನು ನಿರೂಪಿಸಿದ ರೀತಿ...ಬರಿತಾ ಇರಿ..
    "ಪ್ರಪಂಚ ...?
    ಅದು ಕೂಡ ಬದಲಾಗಿಲ್ಲ...
    ಅಂದು ಹೇಗಿತ್ತೋ...
    ಇಂದು ಹಾಗೆಯೇ ಇದೆ."

    ಈ ಸಾಲುಗಳು ಚೂರು ಹೊಸ ಅರ್ಥವನ್ನು ಕೊಟ್ಟಿತು..ಇಲ್ಲಿಯ ತನಕ ಜಗತ್ತು ಪ್ರತಿ ಕ್ಷಣವೂ ಬದಲಾಗುತ್ತಿದೆ, ನಮ್ಮನ್ನು ಓಡಿ ಹೋಗುತ್ತದೆ ಎನ್ನುವ ಅರ್ಥದಲ್ಲೇ ಇರುತ್ತಿದ್ದೆ,ಅದಕ್ಕೊಂದು ಹೊಸ ಅರ್ಥವನ್ನೂ ಕೊಟ್ಟೀರಿ..ಚೆನಾಗಿದೆ...ಬರಿತಾ ಇರಿ...
    ನಮಸ್ತೆ ..

    ReplyDelete
  2. ಶಿವಪ್ರಕಾಶ,
    ನಿಮ್ಮನ್ನು ನೋಡುವ ನನ್ನ ದೃಷ್ಟಿಯಲ್ಲಿ ಏನೇನೂ ಬದಲಾಗಿಲ್ಲ. ನಿಮ್ಮ ಬಗೆಗೆ ನನಗೆ ಇನ್ನೂ ಅದೇ ಪ್ರೀತಿಯೇ ಇದೆ!

    ReplyDelete
  3. ದೃಷ್ಟಿಕೋನಗಳು ಬದಲಾದಂತೆಲ್ಲ ಎಲ್ಲವು ಬದಲಾಯಿತೇನೋ ಎಂಬ ಭಾವ ಮೂಡುತ್ತದೆ.
    ಚಂದದ ಸಾಲುಗಳು ಶಿವಪ್ರಕಾಶ್... --

    ReplyDelete
  4. ಬದಲಾವಣೆ ಜಗದ ನಿಯಮ ಅಂತಾರೆ ಆದರೆ ನಾವು ನೋಡ ನೋಟ, ಚಿಂತಿಸೋ ರೀತಿ ಮಾತ್ರ ಬದಲಾಗುತ್ತೆ. ಕವನ ಚೆನ್ನಾಗಿದೆ ನಿನ್ನನ್ನು ಬದಲಾಗಿದ್ದೀಯ ಎಂದುಕೊಂಡಿಲ್ಲ ಕೆಲಸದ ಒತ್ತಡದಲ್ಲಿದ್ದೀಯ ಎಂದುಕೊಂಡಿದ್ದೇನೆ ಅಷ್ಟೇ ತಮ್ಮಯ್ಯಾ...:)

    ReplyDelete