Tuesday, March 3, 2009

ಅಳುವುದೋ, ನಗುವುದೋ ನೀವೇ ಹೇಳಿ ?

ಮೈಸೂರಿನಲ್ಲಿದ್ದಾಗ, ನಾನು ನನ್ನ ಸ್ನೇಹಿತ ಸಂಗಮೇಶ್ ಸೇರಿ ಈಜಲು, ಹತ್ತಿರ ಇರುವ ಒಂದು ಈಜುಕೊಳಕ್ಕೆ ಹೋದೆವು.
ನಾನು ಆ ಈಜುಕೊಳಕ್ಕೆ ಹೋಗಿದ್ದು ಅದೇ ಮೊದಲ ಸಲ.
ಆಗ ಈಜುಕೊಳದ ಪ್ರೆವೇಶಕ್ಕೆ ಒಬ್ಬರಿಗೆ ೧೫ ರುಪಾಯಿ ಇತ್ತು. ನಮ್ಮಿಬ್ಬರ ಹಣವನ್ನು ಪಾವತಿಸಿ ಒಳ ನಡೆದೆವು.
ನಾನೂ ಒಳನಡಿದ ಒಡನೆಯೇ ಆತುರದಲ್ಲಿ ೪ ಅಡಿ ನೀರಿರುವಲ್ಲಿ ಧುಮುಕಿದೆ..
ಎಷ್ಟು ಪ್ರಯತ್ನಿಸಿದರು ತಳ ಸಿಗುತ್ತಿಲ್ಲ, ನೀರಲ್ಲಿ ಮುಳುಗ ತೊಡಗಿದೆ. ನನ್ನ ಸ್ನೇಹಿತ ನನ್ನನ್ನು ನೋಡಿ ಕಕ್ಕಾಬಿಕ್ಕಿಯಾದ...
ತಕ್ಷಣ ಕಾವಲುಗಾರನನ್ನು ಕರೆದ.
ಆ ಕಾವಲುಗಾರ ನನ್ನ ಪರಿಸ್ಥಿತಿಯನ್ನು ನೋಡಿ, ಒಂದು ಉದ್ದವಾದ ಕೋಲನ್ನು ತಂದು, ಅದನ್ನು ನನ್ನ ಕೈಯಿಗೆ ಸಿಗುವ ಹಾಗೆ ಹಿಡಿದ. ನಾನು ಅದನ್ನು ಹಿಡಿದುಕೊಂಡು ಈಜುಕೊಳದ ದಡ ಸೇರಿದೆ.
ಅದು ಸಾವಿನ ದವಡೆಯನ್ನು ತಟ್ಟಿ ಹೊರಬಂದಾಂತಿತ್ತು.
ನಂತರ ಆ ಕಾವಲುಗಾರ ನನ್ನನ್ನು ಕೇಳಿದ,
"ಈಜು ಬರುವುದಿಲ್ಲವೆ ?"
ನಾನಂದೆ "ಬರುವುದಿಲ್ಲ".
ಹಾಗಾದರೆ ಯಾವ ಧೈರ್ಯದ ಮೇಲೆ ಧುಮುಕಿದಿರಿ ?
ನಾನಂದೆ "ಅದಿರಲಿ, ನನಗೆ ೪ ಅಡಿಯಲ್ಲಿಯೇ ತಳ ಸಿಗಲಿಲ್ಲವಲ್ಲ ?"
ಅವನಂದ, "ನೀವು ಧುಮುಕಿದ್ದು ೪ ಅಡಿಯಲ್ಲಿ ಅಲ್ಲ, ೧೪ ಅಡಿಯಲ್ಲಿ"
ನಾನು "ಏನು ೧೪ ಅಡಿಯೇ...? ಹಾಗಾದರೆ ಅಲ್ಲಿ ೪ ಬರೆದಿದೆಯಲ್ಲ ?"
ಆಗ ಅವನು "ಅಯ್ಯೋ ಸ್ವಾಮಿ, ಅಲ್ಲಿ ೧ (ಒಂದು) ಅಳಿಸಿಹೋಗಿದೆ."
Share/Save/Bookmark

10 comments:

  1. ಶಿವ ಪ್ರಕಾಶ್...

    ಬೇಜಾವಬ್ದಾರಿತನದ ಪರಮಾವಧಿ ಇದು..

    ನೋಡಲಿಕ್ಕೆ ಸಣ್ಣ ಪ್ರಮಾದ..

    ಪ್ರಾಣ ಹಾನಿ ಸಂಭವ..!

    ಚೆನ್ನಾಗಿ ಬೈದು ಬರಬೇಕಿತ್ತು...

    ನೀವು ಪಾರಾಗಿ ಬಂದಿರಲ್ಲ...ಸಧ್ಯ...

    ReplyDelete
  2. ಸರಸ್ವತಿಪುರಂ ಸ್ವಿಮ್ಮಿಂಗ್ ಪೂಲ್ ಅದು.
    ಇಂಥವರಿಗೆ ಏನು ಹೇಳೋದೋ ಅರ್ಥ ಆಗಲ್ಲ...

    ನಂಗೆ ಕೂಡಾ ಏನು ಹೇಳಬೇಕೋ ಗೊತ್ತಗ್ತಾ ಇಲ್ಲಾ.

    ಕಟ್ಟೆ ಶಂಕ್ರ

    ReplyDelete
  3. ಶಿವಪ್ರಕಾಶ್,

    ಇಂಥ ಕಡೇ ಹೋಗುವಾಗಲೆಲ್ಲಾ ತುಂಬಾ ಹುಷಾರಿಗಿರಬೇಕು....ಹೊಸಬರು ಬರುತ್ತಾರಂತ ಅವರಿಗೆ ತಿಳಿಯೊಲ್ಲವೇ...ಸರ್ಕಾರಿ ಸ್ವಿಮಿಂಗ್ ಫೂಲ್ ಕತೆಗಳೇ ಹೀಗೆ....ನಿಮಗೇನು ಆಗಲಿಲ್ಲವಲ್ಲ....ಬಿಡಿ....

    ReplyDelete
  4. ಶಿವಪ್ರಕಾಶ್,
    ನಗು ಭಯ ಎರಡು ಆಗುತ್ತೆ.. ನೀವು ಬಿದ್ದಾಗ ೪ ಅಡಿಯ ತಳ ಸಿಗದಿದ್ದಾಗ ಅಳು... ೧೪ ರಲ್ಲಿ ೧ ಇಲ್ಲ ಅಳಿಸಿದೆ ಎಂದಾಗ ನಗು ಬಂತು.. ನೀರು ಇರೋಕಡೆ ಸ್ವಲ್ಪ ಹುಷಾರಾಗಿ ಇರಬೇಕು ..........ಇಲ್ಲಿ ಅವರ ಬೇಜವಾಬ್ದಾರಿತನ ಎದ್ದು ಕಾಣುತ್ತೆ..

    ನೀವು ಒಂದು ಗಂಡಾಂತರದಿಂದ ಪಾರಗಿದ್ದೀರಿ ದೇವರ ಕೃಪೆಯಿಂದ........

    ReplyDelete
  5. ಪ್ರಕಾಶ್ ಹೆಗ್ಡೆ ಅವರೇ,
    ನನಗೆ ಅ ಸಮಯದಲ್ಲಿ ಏನು ಮಾಡಬೇಕೋ ಗೊತ್ತಾಗಲಿಲ್ಲ,
    ಆ ಘಟನಯಿಂದ ನಾನೊಂದು ಪಾಠ ಕಲಿತೆ "Look before you leap" :)
    ಆ ಘಟನೆ ನಡೆದಾಗ ಭಯ ಆದದ್ದು ನಿಜ, ಆದರೆ ಅದನ್ನು ನೆನಸಿಕೊಂಡಾಗಲೆಲ್ಲ ಬಂದಿದ್ದು ಮಾತ್ರ ನಗು..
    =========================
    ಶಂಕರ ಪ್ರಸಾದ ಅವರೇ
    ಹೌದು. ನನಗು ಏನ್ ಮಾಡಬೇಕೋ ಅರ್ಥ ಆಗ್ಲಿಲ್ಲ.
    =========================
    ಶಿವು ಅವರೇ,
    ಹೋಗಲಿ ಬಿಡಿ.. ಒಂದು ಒಳ್ಳೆ ಪಾಠ ಕಲಿತ ಹಾಗೆ ಆಯ್ತು.
    =========================
    ಮನಸು ಅವರೇ,
    ಆ ದಿನ ನನಗನಿಸಿದ್ದು ಅದೇ..
    ಅಂದಿನಿಂದ ಯಾವ ಸ್ವಿಮ್ಮಿಂಗ್ ಫೂಲ್ಗೆ ಹೋದ್ರು ಹುಷಾರ್ ಆಗಿ ಇರ್ತಿನಿ :)

    ಎಲ್ಲರಿಗೂ ಧನ್ಯವಾದಗಳು

    ReplyDelete
  6. ಅಬ್ಬಾ! ಎಂತಹ ದುರಂತ ಆಗುವುದರಲ್ಲಿತ್ತು..!! ಸರಕಾರದ ಕೆಲಸ ದೇವರ ಕೆಲಸ ಎಂದು ಅಲ್ಲಿಗೆ ಬಂದವರ ಪ್ರಾಣವನ್ನು ರಕ್ಷಿಸುವ ಹೊಣೆಯನ್ನೂ ದೇವರಿಗೇ ಬಿಟ್ಟಿರಬೇಕು!! ಎಷ್ಟು ಶಾಂತವಾಗಿ ಆ ಕಾವಲುಗಾರ ೧ ಅಂಕೆ ಬಿಟ್ಟು ಹೋಗಿದೆ ಅನ್ನುತ್ತಾನಲ್ಲಾ?!!! ನೀವೂ ಆತನಿಗೆ ಒಂದು ರೂಪಾಯಿ ಮಾತ್ರ ಕೊಟ್ಟು ಮುಂದಿನ ಐದಂಕೆ ಬಿಟ್ಟು ಹೋಯಿತೆಂದಿದ್ದರೆ? ನಿರ್ಲಕ್ಷ್ಯತನದ ಪರಮಾವಧಿ!!!

    ReplyDelete
  7. ತೇಜಸ್ವಿನಿ ಹೆಗಡೆ ಅವರೇ,
    ಹೋಗಲಿ ಬಿಡಿ. ಇದೊಂದು ಒಳ್ಳೆ ಅನುಭವ ಆಯಿತು ನನಗೆ...

    ReplyDelete
  8. This comment has been removed by the author.

    ReplyDelete
  9. Edella nadadiddake nane sakshi, yake andre nane force madi karidukondu hogiddu. It was an horrible incident. Thank God lord Shiva, you saved my best friend

    ReplyDelete
  10. ಸಂಗು,
    ಅದೊಂದು ಒಳ್ಳೆ ಪಾಠ ಅಲ್ವಾ ನಮಗೆ ?
    ಅದೇನೋ ಅಂತಾರಲ್ಲ "ಪ್ರತ್ಯಕ್ಷವಾಗಿ ಕಂಡರೂ, ಪ್ರಮಾಣಿಸಿ ನೋಡು" ಹಾಗಾಯ್ತು.
    ನೀನಿಲ್ಲದೆ ನಾನೊಬ್ಬನೇ ಹೋಗಿದ್ದಾರೆ, ಅಂದು ನಾನು ಬದುಕಿರುತ್ತಿದ್ದೇನೋ ಇಲ್ಲವೊ?
    i have to say thanks to you...
    thank you sangu...

    ReplyDelete