Monday, April 13, 2009
ದೇವರಲ್ಲಿ ಪ್ರಾರ್ಥಿಸುತ್ತೇನೆ
ನಮ್ಮ ಕಂಪನಿ ತರ ಇನ್ನೆರೆಡು ಕಂಪನಿಗಳು ಒಂದೇ ಕ್ಲಾಯೆಂಟ್ ಕಂಪೆನಿಗೆ ಕೆಲಸ ಮಾಡುತ್ತೆ. ಆ ಇನ್ನೆರೆಡು ಕಂಪನಿಗಳು ಇಟಲಿಯಲ್ಲಿವೆ. ಒಂದು ರೋಮ್, ಇನ್ನೊಂದು ಲಕುಲಾ ನಗರದಲ್ಲಿವೆ.
ನನಗೆ ಇ ಎರಡು ಕಂಪನಿಯಲ್ಲಿ ಕೆಲಸ ಮಾಡುವ ೧೫ ಜನ ಸ್ನೇಹಿತರಿದ್ದಾರೆ.
ಲಕುಲಾ ನಗರದಲ್ಲಿರುವ ಕಂಪೆನಿಯಿಂದ ೫, ರೋಮ್ ನಲ್ಲಿರುವ ಕಂಪೆನಿಯಿಂದ ೧೦ ಜನ ಸೇರಿ ಒಂದೇ ಪ್ರಾಜೆಕ್ಟನಲ್ಲಿ ಕೆಲಸ ಮಾಡುತ್ತೇವೆ. ನಾವು ಒಬ್ಬರಿಗೊಬ್ಬರು ತುಂಬಾ ಆತ್ಮಿಯರಾಗಿದ್ದೇವೆ.
ಮೊನ್ನೆ ಏಪ್ರಿಲ್ ಆರನೇ ತಾರೀಕು ಸಂಭಾವಿಸಿದ ಭೂಕಂಪದಲ್ಲಿ ಲಕುಲಾ ನಗರ ನೆಲಕಚ್ಚಿದೆ. ಅಲ್ಲಿ ಬಹಳಷ್ಟು ಮನೆಗಳು ನೆಲಕ್ಕುರುಳಿವೆ. ಸುಮಾರು ೨೦೦ಕ್ಕು ಹೆಚ್ಚು ಪ್ರಾಣಹಾನಿ ಸಂಭವಿಸಿದೆ. ನಮ್ಮ ೫ ಜನ ಹಾಗು ಅವರ ಕುಟುಂಬಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಂದಿನಿದ ಲಕುಲಾ ನಗರದಿಂದ ಯಾರು online ಬಂದಿರಲಿಲ್ಲ. ಇಂದು ಸಾಯಂಕಾಲ ಅವರಲ್ಲಿ ಒಬ್ಬ online ಬಂದಿದ್ದ. ನನ್ನ ಜೊತೆ ಸಂಭಾಷಣೆ ನಡೆಸಿದ. ಅವನು ನಡೆದ ಘಟನೆ ವಿವರಿಸಿದ್ದು ಹೀಗೆ :
"ಹಾಯ್ ಶಿವ,
ಇಲ್ಲಿ ಭೂಕಂಪ ಸಂಭವಿಸಿ ತುಂಬಾ ಹಾನಿಯಾಗಿದೆ. ಇದು ಸಾಮನ್ಯ ಭುಕಂಪವಲ್ಲ. ನಮ್ಮ ಎಲ್ಲರ ಮನೆಗಳು ನೆಲಕ್ಕುರುಳಿವೆ. ನಮ್ಮ ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾವು ಎಲ್ಲವನ್ನು ಕೆಳೆದುಕೊಂಡಿದ್ದೇವೆ. ನಾವು ಈಗ ನಮ್ಮ ಕಾರಿನಲ್ಲಿ ಜೀವನ ನಡೆಸುತ್ತಿದ್ದೇವೆ. ನಮ್ಮ ಕಂಪನಿ ನಡೆಸುತ್ತಿದ್ದ ವ್ಯಕ್ತಿಯ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಆ ವ್ಯಕ್ತಿ ಬಹಳಷ್ಟು ಕಳೆದುಕೊಂಡಿದ್ದಾನೆ. ನಮ್ಮ ಆಫೀಸ್ ಕಟ್ಟಡ ಕೂಡ ಬಿದ್ದು ಹೋಗಿದೆ. ಇನ್ನು ಆ ವ್ಯಕ್ತಿ ಕಂಪನಿ ನಡೆಸುವುದು ಸಂಶಯವಾಗಿದೆ. ಈ ಘಟನೆಯಿಂದ ನಾನು ತುಂಬಾ ನೊಂದಿದ್ದೇನೆ.
ನಾವು ಚಿಕ್ಕ ಮನೆ ಕಟ್ಟಲು ಕನಿಸ್ಟ ೨ ತಿಂಗಳಾದರೂ ಬೇಕು, ಅದು ನಮ್ಮ ಸರಕಾರ (Govt) ಸಹಾಯ ಮಾಡಿದಲ್ಲಿ.
ನಾವು ಕೆಲಸಕ್ಕೆ ಎಂದು ಮರುಳುತ್ತೆವೋ ಗೊತ್ತಿಲ್ಲ.
ಅದೇನೋ ಗೊತ್ತಿಲ್ಲ ಶಿವ, ಈ ದುಃಖದ ಸಂದರ್ಭದಲ್ಲಿ ನಿನ್ನ ಜೊತೆ ಮಾತನಾಡಿದಾಗ ನನಗೆ ವಿಶೇಷವಾದ ಆನಂದ ಆಗಿದೆ. ಧನ್ಯವಾದಗಳು ಶಿವ"
ನನಗೂ ತುಂಬಾ ದುಖವಾಯಿತು. ನಾನು ಸಾಂತ್ವನ ಹೇಳುವಸ್ಟು ದೊಡ್ಡವನಲ್ಲ. ಆದರೆ ಸಣ್ಣ ಸಮಾಧಾನದ ಮಾತುಗಳನ್ನಡಿದೆ. ಆದಸ್ಟು ಬೇಗ ಅವರು ಕೆಲಸಕ್ಕೆ ಮರುಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ಆದೇಕೋ ನನಗೂ ಕೂಡ ಈ ವಿಷಯವನ್ನು ನಿಮ್ಮಲ್ಲಿ ಹೇಳಿಕೊಳ್ಳುವ ಮನಸ್ಸಾಯಿತು. ಅದಕ್ಕೆ ಹೇಳಿಕೊಂಡಿದ್ದೇನೆ.
Subscribe to:
Post Comments (Atom)
ಶಿವಪ್ರಕಾಶ್ ಅವರೇ, ಎಷ್ಟು ಒಳ್ಳೆ ಮನಸು ನಿಮ್ಮದು. ನಿಮ್ಮೊಂದಿಗೆ ನಾನೂ ದೇವರಲ್ಲಿ ಪ್ರಾರ್ಥಿಸುತ್ತೇನೆ, ಎಲ್ಲಾರಿಗೂ ಒಳ್ಳೆಯದಾಗಲಿ ಎಂದು.
ReplyDeleteಶಿವಪ್ರಕಾಶ್,
ReplyDeleteವಿಚಾರವನ್ನು ಓದಿ ಮನಸ್ಸಿಗೆ ಧುಃಖವಾಯಿತು...ಇದನ್ನು ನೀವು ತುಂಬು ಮನಸ್ಸಿನಿಂದ ಇಲ್ಲಿ ನಮ್ಮೊಂದಿಗೆ ಹಂಚಿಕೊಂಡಿದ್ದೀರಿ...ನಿಮ್ಮ ಗೆಳೆಯರಿಗೆ ಒಳ್ಳೆಯದಾಗಲಿ....ಬೇಗ ಮೊದಲಿನ ಸ್ಥಿತಿಗೆ ಬರಲಿ...ಅಂತ ಆ ದೇವರಲ್ಲಿ ಪ್ರಾರ್ಥಿಸುತ್ತೇನೆ...
ಶಿವಪ್ರಕಾಶ್...
ReplyDeleteಭೂಕಂಪದಿಂದ ಆದ ಹಾನಿಯ ವಿಷಯ ಕೇಳಿ ದುಃಖವಾಯಿತು...
ಕಷ್ಟದಲ್ಲಿದ್ದಾ ಸಾಂತ್ವನದ ಮಾತುಗಳು ಅಮ್ರತದಂತೆ...
ನಿಮ್ಮ ಒಳ್ಳೆಯತನ ಇಷ್ಟವಾಯಿತು...
ದೇವರು ನಿಮ್ಮ ಗೆಳೆಯರ ಕಷ್ಟವನ್ನು ಬೇಗ ಪರಿಹರಿಸಲಿ...
ನಾವೂ ಕೂಡ ಪ್ರಾರ್ಥಿಸುತ್ತೇವೆ...
ಶಿವಪ್ರಕಾಶ್,
ReplyDeleteಒಳ್ಳೆ ಕೆಲಸ ಮಾಡಿದಿರಿ ಯಾವಾಗಲು ಒಳ್ಳೆಯ ಹಾಗು ನಗುವಿನ ವಿಷಯದ ಜೋತೆಗೆ ಕಷ್ಟಗಳನ್ನು ಹಂಚಿಕೊಳ್ಳಬೇಕು..
ಈ ಭೊಕಂಪದ ಬಗ್ಗೆ ತಿಳಿದಿದ್ದೆ ನನ್ನ ಜೊತೆಯಲ್ಲಿ ಕೆಲಸಮಾಡುವವರ ತಂಗಿ ಹಾಗು ಅವರ ಸಂಸಾರ ಅಲ್ಲೇ ಇತ್ತಂತ್ತೆ ಈ ಭೊಕಂಪದಿಂದ ಹಾನಿಯುಂಟಾಗಿ ಈಗ ಅಣ್ಣನ ಮನೆಗೆ ಕುವೈತ್ಗೆ ಬಂದಿದ್ದಾರೆ..ಅವರು ಆ ಭಯಾನಕ ಧ್ರುಷ್ಯದಿಂದ ಇನ್ನು ಹೊರಬಂದಿಲ್ಲವಂತೆ... ಒಂದು ಮಗುವಿಗೆ ಸ್ವಲ್ಪ ಗಾಯವಾಗಿದೆ..
ದೇವರು ನೊಂದವರಿಗೆಲ್ಲ ಒಳ್ಳೆಯದನ್ನು ಮಾಡಲೆಂದು ಪ್ರಾರ್ಥಿಸುತ್ತೇನೆ....ಆದಷ್ಟು ಬೇಗ ಎಲ್ಲರು ತಮ್ಮ ನೋವಿಂದ ಚೇತರಿಸಿಕೊಳ್ಳಲಿ...
oh... nonda jeevagalige devaru olleyadu maadali... Olleyavarige olledaagali.. kettavaroo olleyvaraagali...
ReplyDeleteಶಿವಪ್ರಕಾಶ್ ಅವರೇ,
ReplyDeleteನಿಮ್ಮ ಸ್ನೇಹಿತರ ಕುಟುಂಬಕ್ಕೆ ಈ ಆಕಸ್ಮಿಕದಿಂದ ಹೊರಬರಲು ಹೊಸ ಉತ್ಸಾಹ ಬರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಪ್ರಕ್ರತಿಯ ಮುಂದೆ ನಾವೆಲ್ಲಾ ಸಣ್ಣವರಲ್ಲವೇ,
ನಿಮ್ಮ ಸಂತಾಪಕ್ಕೆ ನನ್ನದೂ ಒಂದು ಸಂತಾಪ ಸೇರಿಸುತ್ತಿದ್ದೇನೆ.
ReplyDeleteSSK, ಶಿವು, ಪ್ರಕಾಶ್, ಮನಸು, ರವಿಕಾಂತ ಗೋರೆ, ಗುರುಮೂರ್ತಿ ಹಾಗು ಉದಯ ಅವರೇ,
ReplyDeleteನಿಮ್ಮ ಹಾರ್ಯೈಕೆಯಿಂದ ಆದಸ್ಟು ಬೇಗ ಅವರ ಕಷ್ಟಗಳು ತೀರಲಿ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...
ಆಘಾತದಿಂದ ಹೊರಬರಲು ದೇವರು ಅವರಿಗೆ ಚೈತನ್ಯ ನೀಡಲಿ
ReplyDelete-ಧರಿತ್ರಿ
ಧರಿತ್ರಿ ಅವರೇ,
ReplyDeleteನಿಮ್ಮ ಹಾರ್ಯೈಕೆಯಿಂದ ಆದಸ್ಟು ಬೇಗ ಅವರ ಕಷ್ಟಗಳು ತೀರಲಿ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...