Saturday, April 18, 2009

ಮಳೇಲಿ ನೆನದದ್ದು ನೆನಪಿಡುವೆ...................


ಟೈಟಲ್ ನೋಡಿ ಒಳ್ಳೆ ಲವ್ ಸ್ಟೋರಿ ಇರಬೇಕು ಅನ್ಕೊಂಡ್ರಾ ?...
ಇದು ಲವ್ ಸ್ಟೋರಿನೆ ಆದ್ರೆ ಇಲ್ಲಿ ಹುಡುಗಿ ಇಲ್ಲ, ಇರೋದು ಮಳೆ......

ಮಳೆಗೂ ನನಗೂ ಎಲ್ಲಿಲ್ಲದ ಸಂಬಂಧ ಅನ್ಸುತ್ತೆ. ಮಳೇಲಿ ನೆನೆಯೋದು ಅಂದ್ರೆ ನನಗೆ ತುಂಬಾ ಇಷ್ಟ. ಆದ್ರೆ ಏನ್ ಮಾಡೋದು ಕೆಲವೊಂದು ಸಾರಿ ಇದೇ ಮಳೆಯಿಂದ ತೊಂದರೆ ಅನುಭವಿಸಿದ್ದು ಉಂಟು.

ಮೈಸೂರಿನಲ್ಲಿ ಓದ್ತಾ ಇದ್ದಾಗ...........
ನಾನು ರಾತ್ರಿಯ ಊಟಕ್ಕೆ ಸುಮಾರು ಕಿಲೋಮೀಟರು ದೂರದಲ್ಲಿದ್ದ ಒಂದು ಮೆಸ್ (mess) ಗೆ ಹೋಗ್ತಾ ಇದ್ದೆ. ಅದೇನೋ ಬೇರೆ ಕಡೆ ಊಟ ನನಗೆ ಅಸ್ಟು ಇಷ್ಟ ಆಗ್ತಾ ಇರ್ಲಿಲ್ಲ, ಹಾಗಾಗಿ ಅಲ್ಲೇ ಹೋಗಿ ಊಟ ಮಾಡಿ ಬರ್ತಿದ್ದೆ.
ಹೋಗಿ ಬರಲು ಸೇರಿ ಕಿಲೋಮೀಟರು ದೂರ. ಅಸ್ಟು ದೂರ ನಡಿದು ಹೋಗ್ತಾ ಇರ್ಲಿಲ್ಲ, ಹಾಗೇನಾದ್ರೂ ನಡೆದು ಹೋಗಿ ತಿಂದು ಬರೋದ್ರಲ್ಲಿ ಮತ್ತೆ ಹೊಟ್ಟೆ ಹಸಿಯೋದು ಗ್ಯಾರಂಟೀ. ಹಾಗಾಗಿ ಬೈಕನಲ್ಲೇ ಹೋಗ್ತಾ ಇದ್ದೆ.
ಮೈಸೂರಿನಲ್ಲಿ ಮಳೆಗಾಲ ಬಂದ್ರೆ ಸಾಕು ಮಳೆರಾಯನದೇ ದರ್ಬಾರು. ರಾತ್ರಿ ಊಟದ ಸಮಯಕ್ಕೆ ಸರಿಯಾಗಿ ಮಳೆ ಬರ್ತಿತ್ತು. ಏನ್ ಮಾಡೋದು ?... ಹೊಟ್ಟೆ ಹಸಿವು, ಮೆಸ್ ಬಿಟ್ರೆ ಬೇರೆ ಹೋಟೆಲ್ ಇಷ್ಟ ಇಲ್ಲ.
ಅದೇ ಮಳೆಯಲ್ಲೇ ಸ್ನಾನ ಮಾಡ್ತಾ ಹೋಗ್ತಾ ಇದ್ದೆ. ನೆನೆದ ಬಟ್ಟೆಯಲ್ಲಿ ಕೂತು ಊಟ ಮಾಡಿ, ಅದೇ ಮಳೆಯಲ್ಲಿ ಮರಳಿ ಸ್ನಾನ ಮಾಡುತ್ತ ಮರುಳುತ್ತಿದ್ದೆ. ಹೀಗೆ ಕಡಿಮೆ ಅಂದ್ರು ದಿನಕ್ಕೆ ಮೂರು ಸಾರಿ ಸ್ನಾನ. ಒಮ್ಮೊಮ್ಮೆ ಬೈಕ್ ಓಡಿಸುವಾಗ ದಾರಿನೇ ಕಾಣಿಸ್ತಾ ಇರ್ಲಿಲ್ಲ, ಕಣ್ಣು ತರೆಯೋದು ಕಷ್ಟ, ಅಸ್ಟು ಮಳೆ. ಆಗ ಹೆಲ್ಮೆಟ್ ಕಡ್ಡಾಯ ಇರ್ಲಿಲ್ಲ ಹಾಗಾಗಿ ತಲೆ ಮೇಲೆ ಬೇಳುವ ಒಂದೊಂದು ಹನಿ, ಸಣ್ಣ ಕಲ್ಲು ಬಿದ್ದ ಹಾಗೆ ಬಿಳ್ತಾ ಇತ್ತು. ಕೆಲೋವೊಂದು ಸಾರಿ ಮರದ ಸಣ್ಣ ಪುಟ್ಟ ವಯಸ್ಸಾದ ಕೊಂಬೆಗಳು ಸಹ ಬಿಳ್ತಾ ಇದ್ವು. ಪುಣ್ಯ ಚಿಕ್ಕ ಕೊಂಬೆಗಳು ಬಿಳ್ತಾ ಇದ್ವು, ದೊಡ್ದದೆನದ್ರು ಬಿದ್ದಿದ್ರೆ.... ?.........
ನೆನದ ಬಟ್ಟೆಗಳು ಎರೆಡೆರೆಡು ದಿನಗಳು ಕಳೆದರು ಒದ್ದೆಯಾಗಿಯೇ ಇರ್ತಾ ಇದ್ವು, ಹಿಡಿದ ಮಳೆ ಬಿಡ್ತಾನೆ ಇರ್ಲಿಲ್ಲ ಅಲ್ವಾ.....
ರೇನ್ ಕೊಟ್ ಹಾಕಬೇಕಿತ್ತು ಅಂತಿರಾ ?.. ಹಾಕಬಹುದಿತ್ತು, ಆದ್ರೆ ನನಗೆ ಹಾಕೋಕೆ ಇಷ್ಟ ಇಲ್ಲ, ಅದು ಅಲ್ದೆ ಮಳೇಲಿ ನೆನೆಯೋದು ಅಂದ್ರೆ ನನಗೆ ಇಷ್ಟ ಅಲ್ವಾ...
ಮಳೇಲಿ ನೆನದ ದಿನಗಳು ಸೂಪರ್ ರೀ ....

ಇನ್ನು, ಬೆಂಗಳೂರಿನಲ್ಲಿ,..........
ಒಂದು ದಿನ ಬೆಳಿಗ್ಗೆ ಲೇಟ್ ಆಗಿ ಎದ್ದಿದ್ದೆ. ಹಾಗಾಗಿ, ಆಫೀಸಿಗೆ ತುರಾತುರಿಯಲ್ಲಿ ರೆಡಿ ಆಗಿ, ರೇನ್ ಕೊಟ್ ಮರೆತು ಬೈಕ್ ಹತ್ತಿ ಹೊರಟೆ. ಮನೆ ಬಿಡುವಾಗ ಮಳೆ ಬರ್ತಾ ಇರ್ಲಿಲ್ಲ, ಬಿಸಿಲು ಕೂಡ ಇತ್ತು. ಹಾಗಾಗಿ ರೇನ್ ಕೊಟ್ ನೆನಪು ಕೂಡ ಆಗ್ಲಿಲ್ಲ.
ಸರಿ, ಒಂದೆರೆಡು ಕಿಲೋಮೀಟರು ಚಲಿಸಿದ ಬಳಿಕ, ಇದ್ದಕ್ಕಿದ್ದ ಹಾಗೆ ಬಿಸಿಲು ಮರೆಯಾಗಿ ಮೋಡ ಮುಚ್ಚಿತು, ಹಾಗೆ ಮಳೆ ಕೂಡ ಜೋರಾಗಿ ಬೀಳ ಹತ್ತಿತು. ಬೈಕ್ ನಿಲ್ಲಿಸಲು ರಸ್ತೆ ಪಕ್ಕದಲ್ಲಿ ಒಂದು ಸೂರನ್ನು ಹುಡುಕಿದೆ, ಆದರೆ ಎಲ್ಲೆಲ್ಲು ರಸ್ತೆಯ ಪಕ್ಕದಲ್ಲಿ ಒಂದು ಸೂರು ಕಾಣಲಿಲ್ಲ. ವಿಧಿಯಿಲ್ಲದೆ ಮಳೆಯಲ್ಲೇ ನೆನೆದು ಆಫೀಸ್ ತಲುಪಿದೆ. ಆಫೀಸ್ ತಲುಪಿದಾಗ ನನ್ನ ಬಟ್ಟೆಯಲ್ಲಾ ಸಂಪೂರ್ಣವಾಗಿ ತೋಯ್ದು ಹೋಗಿತ್ತು.
ಆಫೀಸ್ ಹೊರಗಡೆ ನಿಂತು, ನೆನದ ಬಟ್ಟೆಯಲ್ಲಿ ಒಳಗಡೆ ಹೇಗೆ ಹೋಗಲಿ ?
ಅದಕ್ಕಿಂತ ಆಫೀಸಿಗೆ ರಜೆ ಹಾಕಿ ಅದೇ ಮಳೆಯಲ್ಲಿ ವಾಪಸ್ಸು ಮನೆಗೆ ಮರುಳಲಾ? ವಾಪಾಸ್ ಹೋದರೆ ಇಲ್ಲಿಯವರಗೆ ಬಂದಿದ್ದು ವ್ಯರ್ಥ ಆಗಿ ಬಿಡತ್ತೆ...
ಎಂತಾ ಮಾಡುವುದು ? ಆಫೀಸ್ ಹೊರಗಡೆ ಆಲೋಚಿಸುತ್ತ ನಿಂತೆ.
ಆಫೀಸಿಗೆ ಹತ್ತಿರದಲ್ಲಿದ್ದ ಒಂದು ಬಟ್ಟೆ ಅಂಗಡಿ ಕಾಣಿಸಿತು. ಬಟ್ಟೆ ಅಂಗಡಿಗೆ ಹೋದೆ, ಅಲ್ಲಿ ಹೊಸ ಬಟ್ಟೆಗಳನ್ನು ಕೊಂಡೆ.
ಪುಣ್ಯ ತಿಂಗಳ ಕೊನೆಯಾಗಿರದುದ್ದರಿಂದ ಕೈಯಲ್ಲಿ ಹಣ ಇತ್ತು. ಹೊಸ ಬಟ್ಟೆಗಳನ್ನು ಹಾಕಿಕೊಂಡು, ಒದ್ದೆಬಟ್ಟೆಗಳನ್ನು ಪ್ಲಾಸ್ಟಿಕ್ ಚೀಲಾದಲ್ಲಿ ಇಟ್ಟುಕೊಂಡು, ಆಫೀಸಿಗೆ ಬಂದೆ.
ಅಂತು ವದ್ದೆ ಬಟ್ಟೆಗಳು, ಮನೆ ಸೇರುವವರೆಗೂ ಪ್ಲಾಸ್ಟಿಕ್ ಚೀಲಾದಲ್ಲಿ ಸಮಾಧಿಯಾಗಿದ್ದವು. ಮನೆಗೆ ಹೋದ ಮೇಲೆಯೇ ಬಟ್ಟೆಗಳ ಆತ್ಮಕ್ಕೆ ಜೀವ ಬಂದಿದ್ದು.

ಆಫೀಸಿನ ಒಳ ಹೋದಾಗ ನನ್ನ ಮನವೇಕೊ ದುನಿಯಾ ಚಿತ್ರದ " ಪಾಪಿ ದುನಿಯಾ" ಹಾಡಿನ ಸಾಲುಗಳನ್ನು ಹಾಡುತ್ತಿತ್ತು...
"ಮು೦ಜಾನೆವರೆಗೂ ಸೋನೆ ಸುರಿದ ದಿನಾ೦ಕ ಗುರುತಿಡುವೇ,
ಮಳೇಲಿ ನೆನದದ್ದು ನೆನಪಿಡುವೆ..................."

ಇನ್ನು ಬಹಳಷ್ಟು ಮಳೇಲಿ ನೆನದ ನೆನಪುಗಳು ಇದಾವೆ,
ನಿಮಗೆ ಈ ಲೇಖನ ಇಷ್ಟ ಆದರೆ, ಆ ನೆನಪುಗಳನ್ನು ಬರೀತೀನಿ.........
Share/Save/Bookmark

15 comments:

  1. ಶಿವಪ್ರಕಾಶ್ ಅವರೆ,
    ಈ ಸುಡುಸುಡು ಬಿಸಿಯಲ್ಲಿ ಮಳೆಯನ್ನು ಎದುರುನೋಡುತ್ತಿರುವ ಸಮಯದಲ್ಲಿ ಮಳೆಯನ್ನು ನೆನಪಿಸಿ ಮನವನ್ನು ಒದ್ದೆ ಮಾಡಿದ್ದೀರ. ಇದು ಈಗ ತುರ್ತಾಗಿ ಬೇಕಿತ್ತು.

    ReplyDelete
  2. ಶಿವಪ್ರಕಾಶ್....

    ಮಳೆಯಲ್ಲಿ ಒದ್ದೆಯಾಗುವ ಖುಷಿಯೇ ಬೇರೆ...

    ಆ ಅನುಭವ ಈ ಸುಡುಬಿಸಿಲಿನ ಬೇಗೆಯಲ್ಲಿ ನೆನಪು ಮಾಡಿ...

    ಮಳೆಗಾಗಿ ಹಂಬಲಿಸುವಂತೆ ಮಾಡಿ ಬಿಟ್ಟಿದ್ದೀರಿ...

    ಏಸಿ ಒಳಗೆ ಕುಳಿತರೂ ಆ ಅನುಭವ ಆಗುವದಿಲ್ಲ...

    ಚೆನ್ನಾಗಿದೆ......

    ReplyDelete
  3. ಶಿವಪ್ರಕಾಶ್ ಅವರೇ, ಮಳೆಯಲ್ಲಿ ನೆನೆಯುವುದೆಂದರೆ ಆಬಾಲವೃದ್ದರಾದಿಯಾಗಿ ಪ್ರತಿಯೊಬ್ಬರಿಗೂ ಸಾಮಾನ್ಯವಾಗಿ ಇಷ್ಟವಾಗುತ್ತದೆ. ಆದರೆ ನಿಮ್ಮ ಕಥೆಯೇ ಸ್ವಲ್ಪ ವಿಚಿತ್ರವಾಗಿದೆ ಮತ್ತು ಸಾಹಸಮಯವಾಗಿದೆ! ಮಳೆಯಲ್ಲೇ ಸ್ನಾನ, ಊಟ ಮತ್ತು ಮುಂದೊಂದು ದಿನ ಮಳೆಯಲ್ಲೇ ನಿದ್ದೆ....?! (ತಮಾಷೆ ಮಾಡಿದೆ ಅಷ್ಟೇ) ನಿಮ್ಮ ನೆನಪುಗಳು ನಮ್ಮ ಮನಸಿಗೆ ಮುದ ನೀಡಿದೆ. ಇಷ್ಟೊಂದು ಬಿರು ಬಿಸಿಲಿನಲ್ಲಿ ಮಳೆ ಹನಿಯ ನೆನಪಿನ ಸಿಂಚನ ಸಿಮ್ಪಡಿಸಿದ್ದಕ್ಕೆ ಧನ್ಯವಾದಗಳು.....!!

    ReplyDelete
  4. oh tumba chennagide bariri nenapiruva ella putagalannu teredi odalu naaviddeve...

    batte angadi ittu tagondri illa andidre vapas manekade hogtaidreno ha ha ha..olleya anubhava idu...

    namma bisilu neevu nodidare enu heluteero kaane.... namage besigeyalli 50 deg kelavomme 55 deg irutte tumba bisilu dage kooda...

    eno ee bari svlpa maLe nodidevu naavu...kushi kooda pattevu..

    ReplyDelete
  5. ಚಿಕ್ಕೊರಿದ್ದಾಗ ಮನೇಲಿ ಬಯ್ದರೂ ಮಳೇಲಿ ನೆನೀತಿದ್ವಿ, ದೊಡ್ಡೋರಾದ ಹಾಗೆ ಮಳೆ ಅಂದ್ರೆ ಶಪಿಸುತ್ತೀವೆ.. ಆದ್ರೆ ಇನ್ನೂ ನೀವು ಮಳೆಯಲ್ಲಿ ನೆನಯುವ ಖಯಾಲಿ ಇಟ್ಟುಕೊಂಡಿರುವುದು ಕೇಳಿ ಆಶ್ಚರ್ಯವಾಯಿತು... ಹೀಗೆ ನೆನಪಿನ ಪುಟಗಳನ್ನು ಬಿಡಿಸಿಡುತ್ತಿರಿ...

    ReplyDelete
  6. ಶಿವಪ್ರಕಾಶ್,

    ಮಳೆ ಮಳೆ ನೆನಪು...ಮೈಸೂರು ಮಳೆ ನೆನಪು...ಬೆಂಗಳೂರಿನ ಗೋಸುಂಬೆ ರೀತಿಯ ಮಳೆ ನೆನಪು....ಚೆನ್ನಾಗಿದೆ...ಅನುಭವವೂ ಚೆನ್ನಾಗಿದೆ..ನಮಗೆ ಓದಲು...ನಿಮಗೆ ಹೇಗೆ ಗೊತ್ತಿಲ್ಲ...

    ಮಳೆ ಆಟ...ಪಾಟ....ಕಾಟ...ಓಟ...ಜೂಟಾಟ..ಪರದಾಟ...ಎಲ್ಲವನ್ನು ಬರೆಯಿರಿ....ನಾನಂತೂ ಓದಲು ರೆಡಿ..

    ಧನ್ಯವಾದಗಳು....

    ReplyDelete
  7. ನೆನಪಿನ ಪುಟಗಳಲ್ಲಿ ಶಿವೂ,

    ನಿಮ್ಮ ನೆನಪಿನ ಪುಟಗಳನ್ನು ಬೇಗ ಬರೀರಿ, ಅದನ್ನ ಓದಿ ನಾವು ನಮ್ಮ ನೆನಪಿನ ಪುಟಗಳಿಗೆ ಹೋಗ್ತಿವಿ..
    ಅಂದಹಾಗೆ ನಿಮ್ಮ ಮಳೆಯ ಪುರಾಣ ತುಂಬಾ ಚನ್ನಾಗಿದೆ...

    ReplyDelete
  8. ಶಿವಪ್ರಕಾಶ ಸರ್,
    ಮಳೆಯ ಪುರಾಣ ಚೆನ್ನಾಗಿದೆ, ಮುಂದುವರಿಸಿ, ಓದುವ ಕುತೂಹಲ

    ReplyDelete
  9. ಮಲ್ಲಿಕಾರ್ಜುನ.ಡಿ.ಜಿ. ಅವರೇ,
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...
    ===================
    ಪ್ರಕಾಶ್ ಅವರೇ,
    ನಿನ್ನೆ ಬೆಂಗಳೂರಿನಲ್ಲಿ ಮಳೆ ಬಂದೆ ಬಿಟ್ಟಿತು.
    ಅಂತು ನಿನ್ನೆ ಕೂಡ ಮಳೆ ಬಂದಾಗ ನಾನು ನನ್ನ ಬೈಕ್ ಮೇಲಿದ್ದೆ, ಮತ್ತೆ ಮಳೇಲಿ ನೆನೆದುಬಿಟ್ಟೆ. :)
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...
    ===================
    SSK ಅವರೇ,
    ಮಳೆಯಲ್ಲಿ ನಿದ್ದೆ ಮಾಡಲು ಪ್ರಯತ್ನಿಸುತ್ತೇನೆ.. ಹ್ಹಾ ಹ್ಹಾ ಹ್ಹಾ..
    ಲೇಖನ ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ===================
    ಮನಸು ಅವರೇ,
    ನಿಮ್ಮ ಪ್ರೋತ್ಸಾಹಕ್ಕೆ ನಾನು ಚಿರ ಋಣಿ.. ತಪ್ಪದೆ ಎಲ್ಲ ನೆನಪಿನ ಪುಟಗಳನ್ನು ತೆರೆದಿಡುತ್ತೇನೆ.
    ಬಟ್ಟೆ ಅಂಗಡಿ ಇಲ್ಲದಿದ್ದಿದರೆ ಮರಳಿ ಮನೆಗೆ ಹೋಗಬೇಕಾಗಿತ್ತು :(
    ಅಲ್ಲಿ ೫೦-೫೫ ಡಿಗ್ರಿ ಅಂದ್ರೆ, ಅಬ್ಬಾ ಎಂತ ಬಿಸಿಲಿರಬಹುದು.... ?... ಮನೆ ಬಿಟ್ಟು ಹೊರಗಡೆ ಬರುವ ಆಲೋಚನೆನೆ ಬರೋಲ್ಲ...
    ಲೇಖನ ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ============
    Prabhuraj Moogi ಅವರೇ,
    ಲೇಖನ ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ============
    ಶಿವು ಅವರೇ,
    ನಿಮ್ಮ ಪ್ರೋತ್ಸಾಹಕ್ಕೆ ನಾನು ಚಿರ ಋಣಿ.. ತಪ್ಪದೆ ಎಲ್ಲ ನೆನಪಿನ ಪುಟಗಳನ್ನು ತೆರೆದಿಡುತ್ತೇನೆ.
    ಲೇಖನ ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ============
    ಜ್ಞಾನಮೂರ್ತಿ ಅವರೇ,
    ನಿಮ್ಮ ಪ್ರೋತ್ಸಾಹಕ್ಕೆ ನಾನು ಚಿರ ಋಣಿ.. ತಪ್ಪದೆ ಎಲ್ಲ ನೆನಪಿನ ಪುಟಗಳನ್ನು ತೆರೆದಿಡುತ್ತೇನೆ.
    ಲೇಖನ ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ============
    ಗುರುಮೂರ್ತಿ ಅವರೇ,
    ಲೇಖನ ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

    ReplyDelete
  10. ಮಳೆಯ ಬಗ್ಗೆ ನಿಮ್ಮ ಬರಹ ತ೦ಪೆರೆವ ಮಳೆಯಷ್ಟೇ ಖುಶಿ ಕೊಟ್ಟಿತು.

    ReplyDelete
  11. PARAANJAPE K.N. ಅವರೇ,
    ಲೇಖನ ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

    ReplyDelete
  12. ಶಿವಪ್ರಕಾಶ್ ಅವರೆ...
    ಮಳೆಯ ನೆನಪಿನ ಬರಹ ಚೆನ್ನಾಗಿದೆ. ಮಳೆಯನ್ನು ಇಷ್ಟಪಡದವರು ಬಹುಷಃ ಯಾರೂ ಇರಲಿಕ್ಕಿಲ್ಲ ಅಲ್ಲವೇ, ಮಳೆಯೇ ಹಾಗೆ. ಬರಹ ಇಷ್ಟವಾಯಿತು.

    ReplyDelete
  13. ಶಾಂತಲಾ ಭಂಡಿ ಅವರೆ,
    ಲೇಖನ ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

    ReplyDelete
  14. ಮಳೆಯ ಮೋಡಿಗೆ ಒಳಗಾಗದವರು ಯಾರಿದ್ದಾರೆ ಹೇಳಿ ಪ್ರಕಾಶ್ ? ನಾನೂ ಮಳೆನಾಡಿನಲ್ಲೇ ಹುಟ್ಟಿ ಬೆಳದಿದ್ದರೂ ನನಗೆ ಮಳೆ ಎಂದೂ ಬೇಸರವನ್ನು ತಂದಿಲ್ಲ. (ಕ್ರಿಕೆಟ್ ಆಟಕ್ಕೆ ಅಡ್ಡಿ ಆದಾಗ ಶಪಿಸಿಕೊಂಡಿದ್ದೇನೆ :) ) ಮಳೆ ನನಗೊಂದು ಭರವಸೆಯ ಪ್ರತೀಕ... ನಿಮ್ಮ ಬರಹ ಚನ್ನಾಗಿದೆ. ಹೀಗೆ ನೆನಪಿನ ಪುಟಗಳು ತೆರೆಯುತ್ತಿರಲಿ.

    ಶರಶ್ಚಂದ್ರ ಕಲ್ಮನೆ

    ReplyDelete
  15. ಶರಶ್ಚಂದ್ರ ಕಲ್ಮನೆ ಅವರೇ,
    ಮಳೆ ಮತ್ತು ಕ್ರಿಕೆಟ್ ಬಗ್ಗೆ ಕೂಡ ನನ್ನದೊಂದು ನೆನಪಿನ ಪುಟ ಇದೆ..
    ಲೇಖನ ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

    ReplyDelete