Saturday, April 4, 2009

ಚಿತ್ರದುರ್ಗ ಪ್ರವಾಸ

ಚಿತ್ರದುರ್ಗದಲ್ಲಿರುವ ನನ್ನ ಸ್ನೇಹಿತರಾದ ಹನುಮಂತ (ಪ್ರೀತಿಯಿಂದ ಹನು) ಹಾಗು ಮಂಜು (ಕಡುವ) ಸುಜ್ಲಾನ್ (suzlon) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಬಹಳದಿನದ ಕರೆಗೆ ಓಗೊಟ್ಟು ನಾಲ್ಕು ಸ್ನೇಹಿತರು ಸೇರಿ ಪ್ರವಾಸ ಬೆಳಿಸಿದೆವು.
ನಾನು ಪ್ರವಾಸದಲ್ಲಿ ಮಾಡಿದ ಮಜಾ ಹಾಗು ಅನುಭವಿಸಿದ ಸಂತೋಷ ಮಾತಿನಲ್ಲಿ ಹೇಳುವುದು ಸ್ವಲ್ಪ ಕಷ್ಟದ ಕೆಲಸ, ಹಾಗಾಗಿ ಚಿತ್ರಗಳು ಒಳಗೂಡಿದ ಈ ಲೇಖನ.

ದೇವಸ್ತಾನಕ್ಕೆ ಮೊದಲ ಬೇಟಿ.


ವಿದ್ಯುತ್ ಉತ್ಪಾದನೆಯ ಗಾಳಿಯಂತ್ರಗಳು (ವಿಂಡ್ ಪವರ್ - wind power)


೮೩ ಮೀಟರ್ ಎತ್ತರವಿರುವ ಗಾಳಿಯಂತ್ರ.
ಗಾಳಿಯಂತ್ರವನ್ನು ಹತ್ತಿರದಿಂದ ನೋಡಿದಾಗ, ಅದನ್ನು ಏರುವ ಮನಸಾಯಿತು. ಗೆಳೆಯನನ್ನು ಕೇಳಿದೆ. ಸರಿ ಹತ್ತೋಣ ಅಂದ. ಹತ್ತಲು ತನ್ನ ಸಹೋದ್ಯೋಗಿಯ ಗ್ಲೌಸ್ (hand glouse) ಹಾಗು ಬೂಟ್ (shoes) ಕೊಟ್ಟ. ನನ್ನ ಜೊತೆಗೆ ಅವರು ಕೂಡ ಹತ್ತಿದರು.


ಗಾಳಿಯಂತ್ರದ ಒಳನೋಟ. ಹತ್ತಲು ಇರುವ ಏಣಿ. ಆ ಏಣಿ ತುಂಬ ನೇರವಾಗಿರುತ್ತದೆ (very straight)


ಗಾಳಿಯಂತ್ರದ ಒಳಗಿನ ನೋಟ. ಗಾಳಿಯ ಚಲನೆಗೆ ತಿರುಗಿಸಲು ಹಾಗು ವಿದ್ಯುತ್ ಸಂಗ್ರಹಿಸಿ ಸಾಗಿಸಲು ಬೇಕಾದ ಯಂತ್ರಗಳು.



ಗಾಳಿಯಂತ್ರದ ಮೇಲೇರಿದಾಗ ತೆಗೆದ ಚಿತ್ರಗಳು.

ಇನ್ನು ಕೋಟೆಯ ಕಡೆಗೆ......

ಕೋಟೆಯ ಹೊರಗಡೆ ಇರುವ ಕೊಳ.


ಮದ್ದು ಬೀಸುವ ಕಲ್ಲುಗಳು..


ಕೋಟೆಯ ಒಳಗೆ.


ಟಂಕಸಾಲೆ ಮತ್ತು ಪಾಳೇಗಾರರ ಕಚೇರಿ.


ಅಕ್ಕ ತಂಗಿ ಕೊಳ.


ಕಾಶಿವಿಶ್ವನಾಥ ದೇವಾಲಯ.


ನನ್ನ ಹಾಗು ನನ್ನ ಸ್ನೇಹಿತರ ಸಣ್ಣ ಪುಟ್ಟ ಸಾಹಸಗಳು... :D


ಇದು ಒನಕೆ ಓಬವ್ವನ ಮನೆಯಂತೆ, ಅದಕ್ಕೆ ಊಟ ಮಾಡೋ ಫೋಸ್ ಕೊಟ್ಟಿದ್ದು.


ಇದೆ ಕಿಂಡಿಯಲ್ಲಿ ನುಸುಳಿ ಬಂದ ಎದುರಾಳಿ ಸೈನಿಕರನ್ನು ಒನಕೆಯಿಂದ ಹೊಡೆದು ಸಾಯಿಸಿದ ಓಬವ್ವ. ಸದ್ಯಕ್ಕೆ ಆ ಸ್ಥಳದಲ್ಲಿ ಒನಕೆ ಇಲ್ಲದ ಕಾರಣ, ವಾಟರ್ ಬಾಟಲ್ನೆ ಒನಕೆ ಅಂತ ತಿಳ್ಕೊಳಿ :P



ಚಂದ್ರವಳ್ಳಿ ಕೆರೆ ಹಾಗು ಗುಹೆ.



ಪ್ರಾಣಿ ಸಂಗ್ರಹಾಲಯ..
Share/Save/Bookmark

12 comments:

  1. super!!!!!!ha ha ha olle trip madibandideeri.. photo's chenagide.......adakke takkanada vivarane kottideeri...

    ReplyDelete
  2. ಶಿವ

    ನೀನು ಹೂವು ತಗೆದುಕೊಳ್ಳುತ್ತಿರು ನಿನ್ನ ಮುಖದ ಭಾವನೆ ತುಂಬಾ ಚನ್ನಾಗಿದೆ.... ( I Like it)
    ಚಿತ್ರಗಳು ಚೆನ್ನಾಗಿ ಮೂಡಿಬಂದಿವೆ ....

    ReplyDelete
  3. tumbaa sogasaagide photogalu,hanchikondiddakke dhanyvaadagalu

    ReplyDelete
  4. ಶಿವಪ್ರಕಾಶ್.....

    ಪ್ರತಿ ಬಾರಿ ಊರಿಗೆ ಹೋಗುವಾಗ..
    ಗಾಳಿಯಂತ್ರಗಳನ್ನು ನೋಡಿ ..ಸೋಜಿಗ ಗೊಳ್ಳುತ್ತಿದ್ದೆ...
    ಒಮ್ಮೆ ಹೋಗಿ ನೋಡಿ ಬರಬೇಕಿಂದಿದ್ದೆ..
    ಇತಿಹಾಸ ಪ್ರಸಿದ್ಧ ಕೋಟೆಯನ್ನೂ ಸಹ...

    ನಿಮ್ಮ ಚಿತ್ರ ಲೇಖನ ನೋಡಿದ ಮೇಲೆ ..
    ಮತ್ತೆ ಆಸೆ ಗರಿಗೆದರಿದೆ...

    ಆಸೆ ಹುಟ್ಟಿಸಿ ಬಿಟ್ರಲ್ಲ...!

    ಸುಂದರ ಫೋಟೊಗಳು , ಲೇಖನಕ್ಕೆ ಧನ್ಯವಾದಗಳು...

    ಅಲ್ಲಿ ಟೂರಿಸ್ಟ್ ಗೈಡ್ ಸಿಗಬಹುದೆ...?

    ReplyDelete
  5. This comment has been removed by the author.

    ReplyDelete
  6. ಸಕ್ಕತ್ತಾಗಿದೆ ಕಣ್ರೀ...ನಿಮ್ಮ ಚಿತ್ರದುರ್ಗ ಪ್ರವಾಸದ ಫೋಟೋಗಳು...ನಾನು ಫೋಟೋಗ್ರಫಿ ಸಲುವಾಗಿ ನಾಲ್ಕು ಸಲ ಹೋಗಿದ್ದೇನೆ...ಅಲ್ಲಿ ತೆಗೆದ ಒಂದು ಚಿತ್ರವನ್ನು ರಾಯಲ್ ಫೋಟೋಗ್ರಫಿ ಡಿಸ್ಟಿಂಗ್ಷನ್‌ಗೆ ಕಳಿಸಲು ಸೇರಿಸಿದ್ದೆ....
    ನಿಮ್ಮ ಫೋಟೋಗಳಲ್ಲಿ ಕೈಮೇಲೆ ನಿಂತಿರುವ ಫೋಟೋ....ಮತ್ತು ಬಾಟಲಿ ಓಬಪ್ಪಗಳ ಫೋಟೋ ಚೆನ್ನಾಗಿದೆ...ನಗು ಬಂತು...

    ReplyDelete
  7. ಶಿವು,
    Photo collection ತುಂಬ ಚೆನ್ನಾಗಿದೆ.
    ಗಾಳಿಯಂತ್ರದ ಒಳಭಾಗವನ್ನು ನಾನು ನೋಡಿರಲಿಲ್ಲ.
    ಹೈದರನ ಸೈನಿಕರ ಫೋಟೋಗಳು ತುಂಬ ಸೊಗಸಾಗಿವೆ.

    ReplyDelete
  8. Tumbaa saahasagalannu maadiddira neevella ee trip nalli. Adakke idannu adventures trip ennabahude?
    Lekhana mattu vivaranegalu chennagive, tumbaa ishtavaayitu.!

    ReplyDelete
  9. ಮನಸು ಅವರೇ,
    ನಮ್ಮ ಚಿತ್ರದುರ್ಗ ಪ್ರವಾಸವನ್ನು ಹಾಗೂ ಚಿತ್ರಗಳನ್ನು ಮೆಚ್ಚಿಕೊಂಡಿದ್ದಕ್ಕೆ, ತುಂಬು ಹೃದಯದ ಧನ್ಯವಾದಗಳು...
    ====================
    Basavaraja ಅವರೇ,
    ನನ್ನ ಮುಖದ ಭಾವನೆಯನ್ನು, ಹಾಗೂ ಎಲ್ಲ ಚಿತ್ರಗಳನ್ನು ಮೆಚ್ಚಿಕೊಂಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು
    ====================
    ಗುರುಮೂರ್ತಿ ಅವರೇ,
    ಚಿತ್ರಗಳನ್ನು ಮೆಚ್ಚಿಕೊಂಡಿದ್ದಕ್ಕೆ, ತುಂಬು ಹೃದಯದ ಧನ್ಯವಾದಗಳು...
    ====================
    ಪ್ರಕಾಶ್ ಅವರೇ,
    ನಿಮ್ಮ ಥರ ನನಗೂ ಅದು ಬಹಳ ದಿನದ ಆಸೆಯಾಗಿತ್ತು.
    ನನ್ನ ಸ್ನೇಹಿತನ ಸಹಾಯದಿಂದ ನನ್ನ ಆಸೆ ಇಡೆರಿತು.
    ಕೋಟೆಯನ್ನು ನೋಡಲು ನಿಮಗೆ ಗೈಡ್ ಸಿಗುತ್ತಾರೆ.
    ಆದರೆ ಗಾಳಿಯಂತ್ರವನ್ನು ನೋಡಲು ಗೈಡ್ ಸಿಗುವುದಿಲ್ಲ, ನೀವು ಹೊರಗಿಂದಲೇ ನೋಡಬೇಕು. ಒಳಗಡೆ ಬಿಡುವುದಿಲ್ಲ.
    ಯಾರಾದರು ಸ್ನೇಹಿತರಿದ್ದಾರೆ ಮಾತ್ರ ನಮಗೆ ಅವಕಾಶ...
    ನಮ್ಮ ಚಿತ್ರದುರ್ಗ ಪ್ರವಾಸವನ್ನು ಮೆಚ್ಚಿಕೊಂಡಿದ್ದಕ್ಕೆ, ತುಂಬು ಹೃದಯದ ಧನ್ಯವಾದಗಳು...
    ====================
    ಶಿವು ಅವರೇ,
    ನನಗೆ ಫೋಟೋಗ್ರಫಿ ಬಗ್ಗೆ ಅಸ್ಟೇನು ಕೊಟ್ಟಿಲ್ಲ, ಆದರೆ ಫೋಟೋಕ್ಕೆ ಫೋಸ್ ಕೊಡೋದು ಮಾತ್ರ ತುಂಬಾ ಚನ್ನಾಗಿ ಗೊತ್ತು :D
    ನಮ್ಮ ಹುಡುಗಾಟದ ಫೋಟೋಗಳನ್ನು ಮೆಚ್ಚಿಕೊಂಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು...
    ====================
    sunaath ಅವರೇ,
    ನಮ್ಮ ಚಿತ್ರದುರ್ಗ ಪ್ರವಾಸವನ್ನು ಹಾಗೂ ಚಿತ್ರಗಳನ್ನು ಮೆಚ್ಚಿಕೊಂಡಿದ್ದಕ್ಕೆ, ತುಂಬು ಹೃದಯದ ಧನ್ಯವಾದಗಳು...
    ====================
    SSK ಅವರೇ...
    ನಮ್ಮ ಸಾಹಸಗಳನ್ನು ಮೆಚ್ಚಿ, ನಮ್ಮ ಚಿತ್ರದುರ್ಗ ಪ್ರವಾಸಕ್ಕೆ, adventures trip ಅಂದಿದ್ದಕ್ಕೆ ತುಂಬಾ ಧನ್ಯವಾದಗಳು...
    ನಮಗೆ ಆವು ಸಾಹಸಗಳಲ್ಲ, ನಾವು ಯಾವಾಗಲು ಹಾಗೆ, ಸ್ವಲ್ಪ ಜೋಶ್ನಲ್ಲೇ ಇರ್ತಿವಿ...
    ನಮ್ಮ ಚಿತ್ರದುರ್ಗ ಪ್ರವಾಸವನ್ನು ಹಾಗೂ ಚಿತ್ರಗಳನ್ನು ಮೆಚ್ಚಿಕೊಂಡಿದ್ದಕ್ಕೆ, ತುಂಬು ಹೃದಯದ ಧನ್ಯವಾದಗಳು...

    ReplyDelete
  10. its really very nice dude. I am very enthu to visit the wind power plant. Now, i have decided to visit the plance in my next visit itself.

    ReplyDelete
  11. Hi Nataraj,
    Yes. It was a beautiful trip.
    Thank you...

    ReplyDelete