Monday, June 22, 2009

ಬಿಲಿಯನ್

ಮೊನ್ನೆ ಹೀಗೆ ಯಾವುದೋ ಪುಸ್ತಕ ಓದುತ್ತ ಇದ್ದೆ. ಅದ್ರಲ್ಲಿ ಬಿಲಿಯನ್ ಹಾಗು ಮಿಲಿಯನ್ ಎನ್ನುವ ಪದಗಳನ್ನು ನೋಡಿದೆ.
೧ ಬಿಲಿಯನ್ ಅಂದ್ರೆ ಎಷ್ಟು. ?
ನನಗೆ ಒಂದು ಮಿಲಿಯನ್ ಅಂದ್ರೆ ೧೦ ಲಕ್ಷ ಅಂತ ಗೊತ್ತಿತ್ತು.
೧ ಮಿಲಿಯನ್ = ೧,೦೦೦,೦೦೦
ಸರಿ, ಒಂದು ಮಿಲಿಯನ್ ಗೆ ಒಂದರ ಮುಂದೆ ೬ ಸೊನ್ನೆ ಇದೆ.

ಹಾಗೆ, ೧ ಬಿಲಿಯನ್ ಗೆ ಎಷ್ಟು ಸೊನ್ನೆ ಇರಬಹುದು ಎಂದು ಆಲೋಚಿಸುತ್ತ ಇರುವಾಗ ನನ್ನ ರೂಮಿನಲ್ಲಿ ನನ್ನ ಗೆಳೆಯ ನಟ ಬಂದ.
ನಾನು ತಕ್ಷಣ ಅವನನ್ನು ಇದೆ ಪ್ರೆಶ್ನೆ ಕೇಳಿದೆ.. "ಲೋ ನಟ, ೧ ಬಿಲಿಯನ್'ನಲ್ಲಿ ಒಂದರ ಮುಂದೆ ಎಷ್ಟು ಸೊನ್ನೆ ಇರ್ತವೆ... ?"
ಅವನು: "ಎಸ್ಟೋ ಇರ್ಬೇಕು ಕಣೋ, ಜ್ಞಾಪಕ ಇಲ್ಲ. ಶಬ್ದಕೋಶ ನೋಡು"

ನನ್ನ ಹತ್ತಿರ ಇದ್ದ "English to Kannada" ಶಬ್ದಕೋಶ ತೆರೆದೆ.
ಅದನ್ನು ನೋಡಿದಾಗ ನನಗೆ ಆಶ್ಚರ್ಯವಾಯಿತು.
ಆ ಶಬ್ದಕೋಶದಲ್ಲಿ ೧ ಬಿಲಿಯನ್ = ೧, ೦೦೦,೦೦೦,೦೦೦,೦೦೦ ಎಂದಿತ್ತು.
ಹಾಗಾದರೆ ಒಂದು ಬಿಲಿಯನ್ ಗೆ ಒಂದರ ಮುಂದೆ ೧೨ ಸೊನ್ನೆಯೇ...?
ನನಗೆಗೋ ಸಂಶಯ ಬಂತು.
ಬೇರೆ ಇಂಗ್ಲಿಷ್ ಶಬ್ದಕೋಶ ತೆಗೆದು ನೋಡಿದೆ. ಅದ್ರಲ್ಲಿ ಹೀಗಿತ್ತು...
Billion: 1. [Brit] The number that is represented as a one followed by 12 zeros; in the United Kingdom the usage followed in the United States is frequently seen
2. The number that is represented as a one followed by 9 zeros.
ಆಗ ಗೊತ್ತಾಯ್ತ UK ನಲ್ಲಿ ಒಂದರ ಮುಂದೆ ೧೨ ಸೊನ್ನೆ. ಅದೇ ಬೇರೆ ದೇಶದಲ್ಲಿ ಒಂದರ ಮುಂದೆ ೯ ಸೊನ್ನೆ.
ನಮ್ಮ ನಟ ಕೂಡ ಅದನ್ನು ನೋಡಿದ.
ತಕ್ಷಣ ನಟ ಹೇಳಿದ : " ಲೋ, ಎಂತ ಅನಾಹುತ ಆಗಿಬಿಡ್ತಾ ಇತ್ತೋ..."
ನಾನು ಆಶ್ಚರ್ಯದಿಂದ " ಯಾಕೋ ? " ಅಂದೆ.
ಆಗ ಅವನು: "ನಿನ್ನ ಶಬ್ದಕೋಶ ನೋಡಿ, ಒಂದು ವೇಳೆ ನಾನು ಯಾರಿಗಾದರು ಒಂದು ಬಿಲಿಯನ್ ಬ್ಯಾಂಕ್ ಚೆಕ್(Bank Check) ಕೊಡುವಾಗ ಒಂಬತ್ತರ ಬದಲು ಹನ್ನೆರೆಡು ಸೊನ್ನೆ ಹಾಕಿದ್ರೆ ಏನು ಕಥೆ ?.
ಯಪ್ಪಾ, ಮುಂದಿನ ಸಾರಿ ನೋಡಿ ಸಹಿ ಹಾಕಬೇಕು...".

ನಾನು ಬಿದ್ದು ಬಿದ್ದು ನಕ್ಕೆ...
Share/Save/Bookmark

18 comments:

  1. ಶಿವು,
    ಬರೀ ಸೊನ್ನೆಗಳನ್ನು ಹಾಕಿದರೆ ಏನೂ ನಷ್ಟವಿಲ್ಲ!

    ReplyDelete
  2. Natta one billion check barithananta... yochane mado vishaya ne???

    ReplyDelete
  3. ಶಿವಪ್ರಕಾಶ್ ಅವರೇ,
    ನಿಮ್ಮ ಫ್ರೆಂಡ್ ಅಷ್ಟು ರಿಚ್ಚಾ (ಶ್ರೀಮಂತರ) ? ಹಾಗಾದರೆ ಅವರ ಹತ್ರ, ನನಗೆ ಚೆಕ್ ಲೀಫ್ (check leaf) ಮೇಲೆ ಒಂದು ಆಟೋಗ್ರಾಫ್ ಕೊಡ್ಸಿ ಪ್ಲೀಸ್!!!

    ReplyDelete
  4. ಶಿವಪ್ರಕಾಶ್,

    ನನಗೆ ಸೊನ್ನೆಗಳೆಂದರೆ ಕುತೂಹಲ....ಬಿಲಿಯನ್ ಗೊತ್ತಾಯ್ತು..ಆದ್ರೆ ಟ್ರಿಲಿಯನ್‌ಗೆ ಎಷ್ಟು ಸೊನ್ನೆ ಅಂತ ಹೇಳಲಿಕ್ಕೆ ಸಾಧ್ಯವಾ....
    ?

    ReplyDelete
  5. ರೀ ಶಿವು,
    ನಿಮ್ ಫ್ರೆಂಡ್ ನಟಾವ್ರಿಗೆ ಕೆಳುಬಿಟ್ಟು ನಂಗೊಂದು ಐಡಿಯಾ ಕೊಡಿಸ್ರಿ ಹೇಗೆ "billionaire" ಹಾಗೋದು ಅಂತ..
    ಪ್ಲೀಸ್....

    ReplyDelete
  6. nimma freind ashtu shrimanthara? good maraire :)
    alla UK nalli yaake 12 sonne hakkothare?

    ReplyDelete
  7. SHIVU OLLE HAASYAGAARA ANSUTTE ALVA NIM SNEHITA NATA

    ReplyDelete
  8. ನಿಮ್ಮ ಅನುಭವಗಳು ಓದೋಕೆ ಮಜಾ ಇರ್ತವೆ ಕಣ್ರೀ
    -ಧರಿತ್ರಿ

    ReplyDelete
  9. sunaath ಅವರೇ,
    ಹೌದು ರೀ, ಬರೀ ಸೊನ್ನೆಗಳನ್ನು ಹಾಕಿದರೆ ಏನೂ ನಷ್ಟವಿಲ್ಲ
    ಆದರೆ ಸೊನ್ನೆಗಳ ಮುಂದೆ ಯಾವುದಾದರೂ ಸಂಖೆ ಇದ್ದಾರೆ, ಆವಾಗ ತೊಂದರೆ. ಅಸ್ಟೆ. ಹ್ಹ ಹ್ಹಾ.
    ಧನ್ಯವಾದಗಳು.
    ==============

    Anonymous ಅವರೇ,
    ಕಾಲ ಹೀಗೆ ಇರೋಲ್ಲ ಅಲ್ವಾ ?
    ನಾವೆಲ್ಲಾ ಬಿಲಿಯನರಿಸ್ ಆಗಬಹುದು.ಅಲ್ಲವೇ ? :P
    ಧನ್ಯವಾದಗಳು.
    ==============

    SSK ಅವರೇ,
    ನನ್ನ ಗೆಳೆಯ ಸದ್ಯಕ್ಕೆ ಅಸ್ಟೊಂದು ಶ್ರೀಮಂತನಲ್ಲ, ಮುಂದೆ ಆದಾಗ ಎಚ್ಚರದಿಂದಿರಬೇಕು ಅಲ್ಲವೇ ?
    ಹ್ಹಾ ಹ್ಹಾ ಹ್ಹಾ...
    ಧನ್ಯವಾದಗಳು.
    ==============

    shivu ಅವರೇ,
    trillion: 1) [Brit] The number that is represented as a one followed by 18 zeros.
    2) The number that is represented as a one followed by 12 zeros.
    ಟ್ರಿಲಿಯನ್‌ಗೆ, UK ನಲ್ಲಿ, ಒಂದರ ಮುಂದೆ ೧೮ ಸೊನ್ನೆ.
    ಅದೇ ಬೇರೆ ದೇಶಗಳಲ್ಲಿ ಒಂದರ ಮುಂದೆ ೧೨ ಸೊನ್ನೆ..
    ಯಾಕೋ ಬ್ರಿಟಿಷರಿಗೆ ಸೊನ್ನೆ ಅಂದ್ರೆ ತುಂಬಾ ಇಷ್ಟ ಅನ್ಸುತ್ತೆ. ಜಾಸ್ತಿ ಜಾಸ್ತಿ ಹಾಕ್ತಾರೆ.
    ಧನ್ಯವಾದಗಳು.
    ==============

    ರಮೇಶ್,
    ಅಯ್ಯೋ, ನಟ ಇನ್ನು ಬಿಲಿಯನೈರ್ ಆಗಿಲ್ಲ. ಮುಂದೆ ಆದಾಗ ತಪ್ಪದೆ ಅವರ ಹತ್ತಿರ ಉಪಾಯವೆನೆಂದು ಕೇಳಿ ತಿಳಿಸುತ್ತೇನೆ.
    ಧನ್ಯವಾದಗಳು.
    ==============

    ಬಾಲು ಅವರೇ,
    ನನ್ನ ಗೆಳೆಯ ಸದ್ಯಕ್ಕೆ ಅಸ್ಟೊಂದು ಶ್ರೀಮಂತನಲ್ಲ, ಮುಂದೆ ಆದಾಗ ಎಚ್ಚರದಿಂದಿರಬೇಕು ಅಲ್ಲವೇ ?
    ಹೌದು ರೀ, UK ನಲ್ಲಿ ೧೨ ಸೊನ್ನೆ ಹಾಕ್ತಾರೆ. ನಾನು ಅದನ್ನು ಕೇಳಿ ದಂಗಾಗಿ ಹೋದೆ.
    ಅಲ್ಲ ಸ್ವಾಮಿ, ಸೊನ್ನೆ ಗಳಿಗೆ ಅವರಲ್ಲಿ ಬೆಲೆನೇ ಇಲ್ಲ ಅನ್ಸುತ್ತೆ.
    ಧನ್ಯವಾದಗಳು.
    ==============

    PRARTHANA ಅವರೇ,
    ಹೌದು ರೀ. ನಮ್ಮ ನಟ ಸೈಲೆಂಟ್ ಆಗಿ ಜೋಕ್ ಕ್ರಾಕ್ ಮಾಡ್ತಾನೆ.
    ಧನ್ಯವಾದಗಳು.
    ==============

    ಧರಿತ್ರಿ ಅವರೇ,
    ನನ್ನ ಅನುಭವಗಳನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು...

    ReplyDelete
  10. ri shivu , devara dayadinda natta billionaire aagli, aadaga check baritharo ilwa annodu yochane maado vishaya

    ReplyDelete
  11. Anonymous ಅವರೇ,
    ನಿಮ್ಮ ಆಶಿರ್ವಾದದಿಂದ ನಮ್ಮ ನಟ ಬಿಲಿಯನರ್ ಆಗಲಿ, ಚೆಕ್ ಬರಿತನೋ ಇಲ್ವೋ, ಆದ್ರೆ ನಿಮಗೆ ಪಾರ್ಟಿ ಕೊಡ್ತಾನೆ ಬಿಡ್ರಿ...
    ಧನ್ಯವಾದಗಳು

    ReplyDelete
  12. Lo shvu nan maryade thagitha idiya blog nalli...

    ReplyDelete
  13. Anonymous ನಟ,
    ನಾನೆಲ್ಲೋ ನಿನ್ನ ಮರ್ಯಾದೆ ತೆಗ್ದಿದಿನಿ ?
    ನೀನೀಗ ವಿಶ್ವ ಪ್ರಸಿದ್ದಿ ಆಗಿದಿಯ ಕಣೋ. ಅದಕ್ಕೆ ಹೆಮ್ಮೆ ಪಾಡು :P

    ReplyDelete
  14. aadu sari ne..
    innobba Anonymous yaru gotta... Namma Gani kano

    ReplyDelete
  15. Anonymous ನಟ,
    ಒಹ್.. ಗಣೇಶನ ಆ ಕಾಮೆಂಟ್ ಬರೆದಿದ್ದು...
    cool kano...

    ReplyDelete
  16. ಹಲೋ ಶಿವಪ್ರಕಾಶ್ ಸರ್ .. ತುಂಬಾ ಚನ್ನಾಗಿದೆ ನಿಮ್ಮ ಬಿಲಿಯನ್ ಸ್ಟೋರಿ .. ಚೆಕ್ ತಗೊಳ್ಳೊರ ಹತ್ರ ನೋಡಿ ತಗೊಳ್ಳಕ್ಕೆ ಹೇಳಿ .. ನಿಮ್ಮ ಫ್ರೆಂಡ್ ಸಂಖ್ಯೆ ಬರಿದೆ 1 ಬಿಲಿಯನ್ ಅಗೊವಸ್ಟು ಸೊನ್ನೆನೆ ಬರೆದ್ರೆ ಕಸ್ಟಾ ... :P

    ReplyDelete
  17. Ranjita ಅವರೇ,
    ನೀವು ಹೇಳಿದ ಹಾಗೆ ಅವನಿಗೆ ಎಚ್ಚರದಿಂದಿರಲು ಹೇಳುತ್ತೇನೆ. ;) :D
    ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

    ReplyDelete
  18. ಶಿವು,

    ನನಗೂ ಇದೇ ತರಹ ಗೊಂದಲ ಆಗಿತ್ತು. 70 ದಶಕದ ಒಂದು ಪುಸ್ತಕ ಓದುತ್ತಿರುವಾಗ ಅದರಲ್ಲಿ ಬಿಲಿಯನ್ ಎಂದರೆ 12 ಸೊನ್ನೆ ಎಂದು ಬರೆಯಲಾಗಿತ್ತು! ಆದರೆ ನಾನು ಈಗಿನ ಮಾಹಿತಿ ಹುಡುಕಿ ನೋಡಿದಾಗ 9 ಸೊನ್ನೆ ಎಂದಿತ್ತು.(ನಾ ನಿಘಂಟು ನೋಡಲಿಲ್ಲ). ಕೊನೆಗೆ 9 ಸೊನ್ನೆಗೆ ಕಾಂಪ್ರೊಮೈಸ್ ಆಗಿದ್ದೆ ;). ಈಗ ಅರ್ಥವಾಯ್ತು ನೋಡಿ. ಮುಂಚೆ ಜಾಸ್ತಿ ಬ್ರಿಟಿಷ ಪದ್ದತಿ ಬಳಸುತ್ತಿದ್ದುದರಿಂದ ಬಿಲಿಯನ್ ಅಂದ್ರೆ 12 ಸೊನ್ನೆ ಆಗಿತ್ತು. ಈಗ ಅಮೆರಿಕಾ ಪ್ರಭಾವ ಜಾಸ್ತ್ರಿ, ಅದಕ್ಕೇ 9 ಸೊನ್ನೆ :)

    ಒಟ್ಟಾಗಿ,
    ಹತ್ತು ಲಕ್ಷ=ಒಂದು ಮಿಲಿಯನ್
    ನೂರುಕೋಟಿ=ಒಂದು ಬಿಲಿಯನ್

    ನಮಗೆ ನಮ್ ಲಕ್ಷ ಕೋಟಿಗಳೇ ಆರಾಮ್ ಕಣ್ರೀ..

    ReplyDelete