Friday, January 29, 2010

ಒಂದು ಭಯಾನಕ ರಾತ್ರಿ

ಕಳೆದ ಡಿಸೆಂಬರ್ ತಿಂಗಳಿನ ೨೫, ೨೬, ೨೭ನೆ ತಾರೀಕು ಕಚೇರಿಗೆ ರಜಾ ಇದ್ದ ಪ್ರಯುಕ್ತ, ನನ್ನ ಗೆಳೆಯ ಇಂದ್ರ ಹಾಗು ಅವನ ಸಹೋದ್ಯೋಗಿಗಳ ಒಂದು ಪ್ರವಾಸಕ್ಕೆ ಪ್ಲಾನ್ ಹಾಕಿಕೊಂಡರು. ಅದರಲ್ಲಿ ೬-ಗಂಡಸರು, ೬-ಹೆಂಗಸರು, ೪-ಚಿಕ್ಕ ಮಕ್ಕಳು ಇದ್ದರು. ಪ್ರವಾಸಕ್ಕೆ ೧೪ ಆಸನಗಳುಳ್ಳ ಟೆಂಪೊ ಟ್ರಾವೆಲ್ಲೆರ್ (ಟಿ.ಟಿ) ಬುಕ್ ಮಾಡಲು ಇಂದ್ರ ನನ್ನ ಸಹಾಯ ಕೇಳಿದ.
ನಾನು ನನಗೆ ಪರಿಚಯವಿದ್ದ ಬಸವನ ಸಹಾಯ ಕೇಳಿದೆ. ನಮ್ಮ ಬಸವ, ಅವನ ಮನೆ ಪಕ್ಕದಲ್ಲೆ ಇದ್ದ ಟ್ರಾವೆಲ್ ಎಜೆನ್ಸಿಯಲ್ಲಿ ಒಂದು ಟಿ.ಟಿ ಯನ್ನು ಬುಕ್ ಮಾಡಿದ. ಆ ಟ್ರಾವೆಲ್ ಎಜೆನ್ಸಿಯವನು ಟಿ.ಟಿ ಹೊಂದಿರುವ ಮಾಲೀಕನ ಮೊಬೈಲ್ಗೆ ಕರೆ ಮಾಡಿ ೨೪ನೆ ತಾರೀಕು ರಾತ್ರಿ ೮ ಘಂಟೆಗೆ ಸರಿಯಾಗಿ ವಿಜಯನಗರದಲ್ಲಿ ಮೊದಲು ಪಿಕ್-ಅಪ್ ಮಾಡುವಂತೆ ಹೇಳಿದೆವು.

ಡಿಸೆಂಬರ್ ೨೪, ರಾತ್ರಿ ೭:೩೦ಕ್ಕೆ ವಿಜಯನಗರದ ಬಸ್ ಸ್ಟಾಪ್ ಹತ್ತಿರ ಪ್ರಸಾದ್ ಬಂದು ಕಾಯುತ್ತಾ ನಿಂತ. ರಾತ್ರಿ ೮ ಘಂಟೆಗೆ ಬರಬೇಕಾಗಿದ್ದ ಟಿ.ಟಿ, ೯ ಘಂಟೆಯಾದರು ಬರಲೇ ಇಲ್ಲ. ಇಂದ್ರನಿಗೆ ಈ ವಿಷಯ ತಿಳಿಸಿದ. ಇಂದ್ರ ಟಿ.ಟಿ ಮಾಲೀಕನಿಗೆ ಫೊನ್ ಮಾಡಿದ.
ಇಂದ್ರ: "ಸರ್, ಎಂಟು ಘಂಟೆಗೆ ಬರಲು ಹೇಳಿದ್ದ ಟಿ.ಟಿ. ಒಂಬತ್ತು ಘಂಟೆಯಾದರು ಇನ್ನೂ ಬಂದಿಲ್ಲ. ಇನ್ನೂ ಎಸ್ಟೊತ್ತಿಗೆ ಬರುತ್ತೆ ?"
ಟಿ.ಟಿ ಮಾಲೀಕ: "ಕಾರಣಾಂತರಗಳಿಂದ ಟಿ.ಟಿ ಕಳಿಸಲು ಆಗುವುದಿಲ್ಲ. ನೀವು ಬೇರೆ ಟಿ.ಟಿ ಯನ್ನು ನೊಡಿಕೊಳ್ಳಿ ಸರ್. ಕ್ಷಮಿಸಿ"
ಇಂದ್ರ: "ಮುಂಚೇನೆ ಹೇಳಿದ್ದರೆ, ನಾವು ಬೇರೇ ಕಡೆ ನೊಡ್ಕೊಳ್ತಾ ಇದ್ವಿ. ನೀವು ಈಗ ಹೇಳಿದರೆ ಹೇಗೆ ?"
ಟಿ.ಟಿ ಮಾಲೀಕ "ಕ್ಷಮಿಸಿ ಸರ್" ಎಂದು ಹೇಳಿ ಫೊನ್ ಕಟ್ ಮಾಡಿದ.

ನಮ್ಮ ಇಂದ್ರ ಟ್ರಾವೆಲ್ ಎಜೆನ್ಸಿಯವನಿಗೆ ಫೊನ್ ಮಾಡಿದ. ಟ್ರಾವೆಲ್ ಎಜೆನ್ಸಿಯವನು "ಈಗಲೇ ಆ ಟಿ.ಟಿ. ಮಾಲೀಕನಿಗೆ ಫೊನ್ ಮಾಡಿ ಕೇಳುತ್ತೇನೆ ಸರ್" ಎಂದ.
ಕೊನೆಗೆ ಆ ಟ್ರಾವೆಲ್ ಎಜೆನ್ಸಿಯವನು ಫೊನ್ ಮಾಡಿ "ಸರ್, ಆ ಮಾಲೀಕ ಏನೇನೊ ಕಾರಣಗಳನ್ನು ಹೇಳುತ್ತಿದ್ದಾನೆ. ನಾನು ಬೇರೇ ಎಲ್ಲಾ ಕಡೆ ವಿಚಾರಿಸಿದೆ. ಕ್ರಿಸ್ಮಸ್ ಹಬ್ಬ ಹಾಗು ಮೂರು ದಿನಗಳ ರಜೆ ಇರುವುದರಿಂದ ಎಲ್ಲೂ ಟಿ.ಟಿ ಸಿಗುತ್ತಿಲ್ಲ. ಎಲ್ಲಾ ಟಿ.ಟಿ ಗಳು ಬುಕ್ ಆಗಿ ಹೋಗಿವೆ" ಎಂದ.
"ನಾವು ಈಗ ಏನು ಮಾಡಬೇಕು ಹೇಳಿ? ಇದೆ ಕಾರಣಕ್ಕಾಗಿ ನಾವು ನಿಮಗೆ ಒಂದು ವಾರದ ಮುಂಚೆಯೇ ತಿಳಿಸಿದ್ದೇವೆ. ನೀವು ಈಗ ಕೈಕೊಟ್ಟರೆ ನಾವು ಎನು ಮಾಡಬೇಕು. ಮುಂಚೇನೆ ಆಗುವುದಿಲ್ಲ ಎಂದು ಹೇಳಬೇಕಿತ್ತು" ಎಂದು ಇಂದ್ರ ಕೇಳಿದ.
ಅದಕ್ಕೆ ಆ ಟ್ರಾವೆಲ್ ಎಜೆನ್ಸಿಯವನು "ಸರ್. ನೀವು ನನ್ನನ್ನು ನಂಬಿದ ಹಾಗೆ, ನಾನು ಆ ಟಿ.ಟಿ ಮಾಲೀಕನನ್ನು ನಂಬಿದ್ದೆ. ಅವನು ಈಗ ಕೈಕೊಟ್ಟಿದ್ದಾನೆ. ನಾನು ಎನು ಮಾಡಲಿ ಹೇಳಿ ಸರ್?" ಎಂದು ಪ್ರಶ್ನೆ ಹಾಕಿದ ಹಾಗೆ "ನಿಮಗೆ ಬೇಕಾದರೆ ಒಂದು ಟಾಟಾ ಸುಮೊ ಹಾಗು ಒಂದು ಇಂಡಿಕಾ ರೆಡಿ ಮಾಡಿ ಕೊಡುತ್ತೇನೆ ಸರ್" ಎಂದ.
ಇತ್ತಾ ಪ್ರವಾಸಕ್ಕೆ ರೆಡಿಯಾಗಿ ಮನೆಯ ಮುಂದೆ ಕಾಯುತ್ತಾ ನಿಂತ ೧೩ ಜನ, ಒಬ್ಬರದ ನಂತರ ಒಬ್ಬರು ಕರೆ ಮಾಡಿ "ಎನಾಯ್ತೊ ? ಇಸ್ಟೊತ್ತಾದರು ಇನ್ನು ಗಾಡಿ ಬಂದಿಲ್ವಲ್ಲೊ" ಎನ್ನುವ ಪ್ರಶ್ನೆಗಳು ಸುರಿಮಳೆ.
ಅದರಲ್ಲೂ ಸ್ನೇಹಾ ಎನ್ನುವ ಹುಡುಗಿ "ಇಂದ್ರ, ಎಲ್ಲಾರ ಹತ್ತಿರ ಟ್ರಿಪ್ ಹೋಗ್ತಾ ಇದೀವಿ ಅಂತಾ ಹೇಳಿ ಸಿಕ್ಕಾಪಟ್ಟೆ ಸ್ಕೊಪ್ ಬೇರೆ ತಗೊಂಡಿದೀವಿ. ಹೇಗಾದರು ಮಾಡಿ ಟ್ರಿಪ್ ಕ್ಯಾನ್ಸಲ್ ಆಗದಂತೆ ನೋಡ್ಕೊಳೋ..." ಎನ್ನುವ ಡೈಲಾಗ್ ಬೇರೆ.
ನಮ್ಮ ಇಂದ್ರನಿಗೆ ತೆಲೆ ಬಿಸಿಯಾಯಿತು.

ವಿಷಯ ನನಗೂ ಗೊತ್ತಾಯಿತು. ನಾನು ಕೂಡ ಟ್ರಾವೆಲ್ ಎಜೆನ್ಸಿಯವನಿಗೆ ಫೊನ್ ಮಾಡಿ ದಬಾಯಿಸಿದೆ. ಆದರೆ ಯಾವುದೇ ಉಪಯೋಗವಾಗಲಿಲ್ಲ. ಈ ಹೊತ್ತಿಗಾಗಲೆ ರಾತ್ರಿ ೧೦:೩೦ ಆಗಿತ್ತು. ಆ ಹೊತ್ತಿನಲ್ಲಿ ಮತ್ತೊಂದು ಟಿ.ಟಿ ಹುಡುಕಲು ಇಂದ್ರ ತನಗೆ ಗೊತ್ತಿದ್ದ ಸ್ನೇಹಿತರಿಗೆ ಫೊನ್ ಮಾಡಿದ. ಯಾವ ಉಪಯೋಗವಾಗಲಿಲ್ಲ.
ಇತ್ತ ನಾನು, ಬಸವ ಇಬ್ಬರು ಸೇರಿ ಟಿ.ಟಿ. ಗಾಗಿ ಗೊತ್ತಿದ್ದವರಿಗೆಲ್ಲ ಫೊನ್ ಮಾಡಿದೆವು. ಎಲ್ಲೂ ಟಿ.ಟಿ. ಸಿಗದಾಯಿತು.
ಕೊನೆಗೆ ಬೇರೆ ದಾರಿಯಿಲ್ಲದೆ, ಒಬ್ಬ ಟ್ರವೆಲ್ ಎಜೆನ್ಟಿಗೆ ಕರೆ ಮಾಡಿ ಎರೆಡು ಟಾಟಾ ಸುಮೊ ಕಳಿಸುವಂತೆ ಹೇಳಿದೆವು.
"ಆಯ್ತು ಸರ್" ಈಗಲೇ ಕಳಿಸಿಕೊಡುತ್ತೆನೆ ಎಂದ. ಇನೈದು ನಿಮಿಷದಲ್ಲಿ ನಿಮಗೆ ಡ್ರೈವರುಗಳ ಫೊನ್ ನಂಬರುಗಳನ್ನು ಕೊಡುತ್ತೆನೆ ಎಂದು ಹೇಳಿ ಫೊನ್ ಇಟ್ಟ.
ಐದು ನಿಮಿಷ ಅಲ್ಲ, ಅರ್ಧ ಘಂಟೆಯಾದರು ಆ ವ್ಯಕ್ತಿಯಿಂದ ಯಾವುದೇ ಫೊನ್ ಕರೆ ಬರಲೇ ಇಲ್ಲ. ನಾವು ಕರೆ ಮಾಡಿದರೆ "ನೀವು ತಲುಪಲು ಪ್ರಯತ್ನಿಸುತ್ತಿರುವ ಗ್ರಾಹಕ ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ.....". ಇತ್ತ ಇಂದ್ರನಿಗೆ ಪ್ರವಾಸಕ್ಕೆ ಕಾದುನಿಂತವರಿಂದ ಕರೆಗಳ ಮೇಲೆ ಕರೆಗಳು.
ಅಂತು ನಲವತ್ತು ನಿಮಿಷದ ಬಳಿಕ ಆ ವ್ಯಕ್ತಿಯ ಕರೆ ಬಂತು. ಡ್ರೈವರುಗಳ ಫೊನ್ ನಂಬರುಗಳನ್ನು ಕೊಟ್ಟ. "ಅವರಿಗೆ ಫೊನ್ ಮಾಡಿ, ಎಲ್ಲಿಗೆ ಬರಬೇಕು ಅಂತ ಹೇಳಿ ಸರ್" ಎಂದು ಹೇಳಿದ. ಆಗಲೇ ಸಮಯ ೧೧:೪೫ ಆಗಿತ್ತು.
ಡ್ರೈವರುಗಳಿಗೆ ಫೊನ್ ಮಾಡಿ ಎಲ್ಲೆಲ್ಲಿಗೆ ಬರಬೇಕು ಎಂದು ತಿಳಿಸಿದೆವು.
ವಿಚಿತ್ರ ಎಂದರೆ ಆ ಟಾಟಾ ಸುಮೊಗಳು ಬರುತ್ತಿದ್ದುದು ಕನಕಪುರದಿಂದ. ಒಂದು ಘಂಟೆಗೆ ನೀವು ತಿಳಿಸಿದ ಸ್ತಳದಲ್ಲಿ ಇರುತ್ತೆವೆ ಸರ್ ಎಂದರು.
ಕೊನೆಗೆ ಬೆಳಗಿನ ಜಾವ ೧:೩೦ಕ್ಕೆ ಗಾಡಿಗಳು ಬಂದವು.
ಅಂತು ನಮ್ಮ ಇಂದ್ರ ಟಾಟಾ ಸುಮೊ ಹತ್ತಿದ. ಅವನ ನಂತರ "ರೆಚಲ್" ಎನ್ನುವ ಹುಡುಗಿಯನ್ನು ಪಿಕ್-ಅಪ್ ಮಾಡಬೇಕಿತ್ತು. ಅವಳಿಗೆ ಕರೆ ಮಾಡಿದ. ಅವಳು ಕರೆ ಸ್ವೀಕರಿಸಲಿಲ್ಲ. ಇಂದ್ರ ಹಾಗು ಎಲ್ಲರೂ ಸೇರಿ ಎಸ್ಟು ಬಾರಿ ಕರೆ ಮಾಡಿದರು ಅವಳು ಕರೆಯನ್ನು ಸ್ವೀಕರಿಸಲಿಲ್ಲ. ಅವಳು ವಾಸವಿದ್ದ ಏರಿಯಾದ ಹೆಸರು ಗೊತ್ತಿತ್ತು ಆದರೆ ಮನೆ ಯಾವುದೆಂದು ಗೊತ್ತಿರಲಿಲ್ಲ. ಆ ಏರಿಯಾದಲ್ಲಿ ಒಂದೆರೆಡು ರೌಂಡ್ ಹೊಡೆದ. ಆ ಹೊತ್ತಿನಲ್ಲಿ ಧೈರ್ಯ ಮಾಡಿ, ಕೆಲವು ಮನೆಗಳ ಕದವನ್ನು ತಟ್ಟಿ ಕೇಳಿದ. ಪ್ರಯತ್ನಗಳು ಪಲಿಸಲಿಲ್ಲ. ಕೊನೆಗೆ ಬೇರೆ ದಾರಿಯಿಲ್ಲದೆ ಅವಳನ್ನು ಬಿಟ್ಟು ಅವಳ ಮುಂದಿನ ಪಿಕ್-ಅಪ್ ಗಳನ್ನು ಮಾಡಿದರು.
ಬೆಳಿಗ್ಗೆ ೩:೩೦ ಎಲ್ಲರನ್ನು (ರೆಚಲ್ ಬಿಟ್ಟು) ಪಿಕ್-ಅಪ್ ಮಾಡಿಕೊಂಡು ಬೆಂಗಳೂರು ಬಿಡಬೇಕೆನ್ನುವಾಗ ಒಂದು ಅಂತಾರಾಷ್ಟ್ರೀಯ ಕರೆ ಬಂತು. ಇದ್ಯಾರಪ್ಪ ಇಸ್ಟೊತ್ತಿನಲ್ಲಿ ಅಂತಾರಾಷ್ಟ್ರೀಯ ಕರೆ ಎಂದು ಫೊನ್ ಎತ್ತಿದ.
"ಇಂದ್ರ ಅವರೇ, ನಾನು ಥಾಮಸ್ ಅಂತ. ರೆಚಲ್ ಅವರ ಪತಿ. ನಾನು ಫಿನ್ಲ್ಯಾಂಡ್ನಲ್ಲಿ ಇದೀನಿ. ಅವಳು ಫೊನ್ ಸ್ವೀಕರಿಸುತ್ತಿಲ್ಲ. ನಿಮ್ಮೆಲ್ಲರ ಜೊತೆ ಟ್ರಿಪ್ ಹೋಗ್ತಿನಿ ಎಂದು ಹೇಳಿದ್ದಳು. ಅವಳಿಗೆ ಸ್ವಲ್ಪ ಫೊನ್ ಕೊಡುತ್ತೀರಾ ಪ್ಲಿಸ್..?" ಎಂದ.
ಇಂದ್ರ "ಅವಳೀಗ ನಮ್ಮ ಜೊತೆ ಇಲ್ಲ. ಅವಳಿಗೆ ಎಸ್ಟು ಬಾರಿ ಫೊನ್ ಮಾಡಿದರು ಅವಳು ಕರೆಯನ್ನು ಸ್ವೀಕರಿಸಲಿಲ್ಲ.".
"ಅವಳು ಯಾಕೊ ಫೊನ್ ಕೂಡ ಎತ್ತುತ್ತಿಲ್ಲ. ನನಗೆ ಭಯವಾಗುತ್ತಿದೆ. ನಾನು ನಿಮಗೆ ವಿಳಾಸವನ್ನು ಹೇಳುತ್ತೇನೆ. ದಯವಿಟ್ಟು ಹೋಗುತ್ತೀರಾ..." ಎಂದು ಥಾಮಸ್ ಕೇಳಿಕೊಂಡ.
ಥಾಮಸ್ ಫೊನಿನಲ್ಲಿ ದಾರಿಯನ್ನು ಹೇಳುತ್ತಿದ್ದ. ಅವನು ಹೇಳಿದ ಹಾಗೆ ಹೋಗಿ, ರೆಚಲ್ ಮನೆ ಮುಂದೆ ಹೋಗಿ ನಿಂತು, ಡೊರ್ ಬೆಲ್ ರಿಂಗ್ ಮಾಡಿದರು. ಬಾಗಿಲು ತೆಗೆಯಲಿಲ್ಲ.
ಹೀಗೆ ಒಂದೈದು ನಿಮಿಷ ಕದವನ್ನು ತಟ್ಟಿದರು....ಡೊರ್ ಬೆಲ್ ರಿಂಗ್ ಮಾಡಿದರು......
ಅವಳು ಬಾಗಿಲು ತೆಗೆಯಲಿಲ್ಲ....
ಎಲ್ಲರ ಎದೆ ಬಡಿತಾ ಜೊರಾಗಿ ಹೊಡೆದುಕೊಳ್ಳುತ್ತಿತ್ತು...
ಪುನಹ.... ಕದವನ್ನು ತಟ್ಟಿದರು....ಡೊರ್ ಬೆಲ್ ರಿಂಗ್ ಮಾಡಿದರು......
ಕೊನೆಗೆ...
ಒಳಗಡೆ ಕುಂಬಕರ್ಣ ನಿದ್ದೆ ಮಾಡುತ್ತಿದ್ದ ರೆಚಲ್ ಗೆ ಎಚ್ಚರವಾಯಿತು.
ಅವಳು ಬಂದು ಬಾಗಿಲು ತೆಗೆದಾಗ ಎಲ್ಲರ ಪಿತ್ತ ನೆತ್ತಿಗೇರಿತ್ತು.
"ಯಾಕೆ ಫೊನ್ ಎತ್ತಲಿಲ್ಲ...?" ಎಂದು ಸಿಟ್ಟಿನಲ್ಲಿ ಕೇಳಬೇಕು ಎನ್ನುವಸ್ಟರಲ್ಲಿ ಅವಳೇ "ಸಾರಿ.... ಸಾರಿ.... ಸಾರಿ... ಚರ್ಚ್ ಗೆ ಹೋದಾಗ ಫೊನ್ ಸೈಲೆನ್ಟ್ ಮೊಡ್ ನಲ್ಲಿ ಇಟ್ಟಿದ್ದೆ. ಚರ್ಚ್ ನಿಂದ ಹೊರಬಂದ ನಂತರ ಅದನ್ನು ತೆಗೆಯೋದನ್ನು ಮರೆತುಬಿಟ್ಟೆ..." ಎಂದಳು...
ಥಾಮಸ್ ಹಾಗು ಎಲ್ಲರು ಸಮಾಧಾನದಿಂದ ನಿಟ್ಟಿಸುರು ಬಿಟ್ಟರು. ಪ್ಲಾನ್ ಪ್ರಕಾರ ಪ್ರಯಾಣ ಮುಂದುವರೆಸಿದರು.
ಅಂತು ಎಲ್ಲರು (ರೆಚಲ್ ನ್ನು ಸೇರಿಸಿ) ಬೆಂಗಳೂರು ಬಿಟ್ಟಾಗ ಬೆಳಿಗ್ಗೆ ೫:೩೦ ಆಗಿತ್ತು......

ಲೇಖನ ಬಹಳ ಉದ್ದವಾಗಿದ್ದರಿಂದ ಆ ರಾತ್ರಿ ನಡೆದ ಬಹಳಷ್ಟು ವಿಷಯಗಳನ್ನು ಬಿಟ್ಟಿದ್ದೇನೆ. ಬಹುಶಃ "One Night @ the Call Center" ಪುಸ್ತಕದ ತರಹ ಒಂದು ಪುಸ್ತಕ ಬರೆಯವಹುದು ಅಸ್ಟು ದೊಡ್ಡದಾಗಿತ್ತು ಆ ರಾತ್ರಿ...
Share/Save/Bookmark

30 comments:

  1. :-)
    Rachel ge enagatto anno suspense chennagide.. :-)

    ReplyDelete
  2. ಚೆನ್ನಾಗಿದೆ, ನಿಮ್ಮ "ಒ೦ದು ರಾತ್ರೆಯ ಕಥೆ"

    ReplyDelete
  3. chennagide ....curious aagithu...thank u

    ReplyDelete
  4. chennagide. kuthoohaladinda oduvanthe madithu.

    ReplyDelete
  5. ಕುತೂಹಲದಾಯಕ ಶೈಲಿಯ ಬರಹ ಹಿಡಿಸಿತು..
    ಅ೦ತೂ ತಡವಾಗಿಯಾದರೂ ಪ್ರಯಾಣ ಮು೦ದುವರೆಯಿತಲ್ಲ..

    ReplyDelete
  6. ಶಿವಪ್ರಸಾದ್ ,
    ಆಹಹಾ ಸೊಗಸಾಗಿದೆ ನಿಮ್ಮ ಪ್ರಾವಾಸ ಮುಂಚಿನ ಕಥನ...... ಹಾಗಿದ್ದರೆ ಪ್ರವಾಸ ಕಥನ ಹೇಗಿರಬಹುದೋ.... ನಿರೂಪಣೆ ಚೆನ್ನಾಗಿದೆ..... ಕೊನೆಗೆ ಎಲ್ಲರೂ ವಾಪಸ್ ಬಂದಿರಿ ತಾನೇ ...ಒಟ್ಟಿಗೆ.....

    ReplyDelete
  7. Dhaaraavaahi tara poorti bareyodappa...:-)

    ReplyDelete
  8. ಹ ಹಾ,, ತುಂಬ ಚೆನ್ನಾಗಿ ಬರೆದಿದ್ದಿರ...ನಿರೂಪಣೆ ಚೆನ್ನಾಗಿ ಇದೆ..... ಕೊನೆಗೂ ನಿಮ್ಮ ಟ್ರಿಪ್ ಗೆ ಹೋದರಲ್ಲ ...
    Guru

    ReplyDelete
  9. ಹ್ಹ..ಹ್ಹ..ಹ್ಹಾ.....................................................................................................................................................................................

    ReplyDelete
  10. abhaaaa!!! chennagide.. bareyabahudittu poorNa katheyannu... ottalli ellaru ottige tripge horatiralla bidi.

    ReplyDelete
  11. ಶಿವಪ್ರಕಾಶ್ ಕುತೂಹಲ ಕೆರಳಿಸ್ತು ಆದ್ರೆ ರಾತ್ರಿ ವೇಳೆ ಟ್ರಾವೆಲಿಂಗ್ ಅಪಾಯದ್ದು ಅಲ್ವಾ?

    ReplyDelete
  12. tumba chennagide sir nimma nirupaneya shyli..

    ReplyDelete
  13. ನಿಜವಾಗಲೂ ಇದು ಭಯಾನಕವೇ ಸರಿ. ಮುಂದಿನ ಪ್ರಯಾಣ ಸುಖಕರವಾಗಿರುತ್ತದೆ ಎಂದು ಹಾರೈಸುತ್ತೇನೆ.

    ReplyDelete
  14. ಭಯ೦ಕರವಾಗಿಯೇ ಇದೆ... ಪುಸ್ತಕ ಬರೆಯಬಹುದೇನೋ.. ಪ್ರಯತ್ನಿಸಿ... :)

    ReplyDelete
  15. ಪತ್ತೇದಾರಿ ಕಥೆ ತರಾ ಇತ್ತು. ಚೆನ್ನಾಗಿದೆ.

    ReplyDelete
  16. though i knew this story it was good to read it... :) but u shud have given the original names too... ;) only indra's name u have mentioned... neways good one..

    ReplyDelete
  17. ಹಾಹ!!! ತುಂಬಾ ನೆ ಚೆನ್ನಾಗಿ ಇದೆ ಕಣೋ; ಈ ಕಥೆಯ ಎಲ್ಲ ಪಾತ್ರದಾರಿಗಳಿಗೆ ಕಳುಹಿಸಿದ್ದೇನೆ ಎಲ್ಲರಿಗು ತುಂಬಾ ಇಷ್ಟ ಆಯಿತು; ನಿನ್ನ ಸಮಯಕ್ಕೆ ತುಂಬಾ ಧನ್ಯವಾದಗಳು

    ಇಂದ್ರ

    ReplyDelete
  18. ಶಿವಪ್ರಕಾಶ್,

    ಇದು ನಿಜಕ್ಕೂ ಭಯಾನಕ ರಾತ್ರಿಯೇ....

    ReplyDelete
  19. ಶಿವೂ ಸರ್
    ಕಥನ ಚೆನ್ನಾಗಿದೆ
    ಒಂದು ಕಾದಂಬರಿ ಬರೆಯುವಂತಿದೆ

    ReplyDelete
  20. ಕಥೆ ಚೆನ್ನಾಗಿದೆ, ಸ್ವಲ್ಪ ನಗುವೂ, ತುಂಬಾ ಹೆದರಿಕೆಯೂ ಆಗುವಂತದ್ದು!

    ReplyDelete
  21. ತುಂಬಾ ಚೆನ್ನಾಗಿದೆ ನಿರೂಪಣೆ........ 'ಟ್ರಾವೇಲ್ಸ'ರವರ ಅದ್ವಾನ ಪ್ರಸಂಗ'

    ReplyDelete
  22. ಶಿಪ್ರ..ಏನಿದು ನಿಮ್ಮ ಕಥೆ (ರಿಚಲ್ ನ ಬಿಟ್ಟು)...ಪ್ರಯಾಸ ಆಯ್ತಲ್ಲ ನಿಮ್ಮ ಪ್ರವಾಸ...?? ಹೊರಟಿದ್ರಿ (ರಿಚಲ್ ಬಿಟ್ಟು)...ಪರದಾಡಿ ಕೊನೆಗೂ ಹೋಗಿಬಂದ್ರಾ (ರಿಚಲ್ ಸೇರಿ)...ಹಹಹಹ್

    ReplyDelete
  23. :-)
    Twist in the tale
    Nice
    malathi S

    ReplyDelete
  24. ha ha ha ha nenu kathe change yelthi alva.....
    "One Night @ call center thra book baryio age edare adake "One Night on the streets of bangalore"

    ReplyDelete
  25. ರೀ ಶಿವೂ, ನಿಮ್ಮ ಕಥೆ ಕೇಳಿ ನಗು ತಡೆಯೋಕೆ ಆಗ್ತಾ ಇಲ್ಲ, ನಮ್ಮ ನೆಂಟರ ಮದುವೆಯಲ್ಲೂ ಇಂತದ್ದೆ ಘಟನೆ ನಡೆದಿತ್ತು.
    ಕುತೂಹಲ ಕೆರಳಿಸುವ ನಿರೂಪಣೆ.

    ReplyDelete
  26. ಸ್ವಲ್ಪ ಮಸಾಲೆ ಸೇರ್ಸಿ ಒಳ್ಳೇ ಸ್ಟೋರಿ ಮಾಡ್ಬೋದು ಇದನ್ನ. ಪ್ರಯತ್ನ ಮಾಡಿ. :)

    ReplyDelete
  27. @Shhhh, @PARAANJAPE K.N., @Subrahmanya Bhat, @Nisha, @ಮನಮುಕ್ತಾ, @Guru's world, @ಚುಕ್ಕಿಚಿತ್ತಾರ, @Snow white, @Sunaath, @ಸೀತಾರಾಮ. ಕೆ, @ಇಂದು, @Saviganasu, @Shivu, @Guru murthy, @Deepasmita, @VR Bhat, @GuruKulkarni, @Azad, @Malati, @Anonymous, @Praveen

    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು..

    ReplyDelete
  28. @Dinakar,
    ಅದು ತುಂಬ ಚನ್ನಾಗಿತ್ತು ಅಂತ ಹೇಳಿದ್ರು.. ಆರಂಭ ಕರಾಬ್ ಆಗಿದ್ರು, ಆಮೇಲೆ ಸಿನಿಮಾ ಸೂಪರ್ ಇತ್ತಂತೆ..
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ============

    @ರವಿಕಾಂತ್,
    ನಾನು ಬೇಜಾನ್ ಏಳಿತೀನಿ ಅಂತ ನೀವು ನನ್ನ ಬ್ಲಾಗ್ ಗೆ ಬರೋದು ಬಿಟ್ಬಿಡ್ತೀರಿ ಅನ್ನೋ ಭಯ.. :)
    ಪ್ರತಿಕ್ರಿಯೆಗೆ ಧನ್ಯವಾದಗಳು..
    ============

    @ಸುಗುಣ,
    ಬ್ಲಾಗ್ಗಳಲ್ಲಿ ಉದ್ದನೆಯ ಲೇಖನಗಳು ಚನ್ನಾ ಕಾಣೋಲ್ಲ ಅಂತ ಬಿಟ್ಟೆ ಅಕ್ಕ.
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ============

    @ಉಮೇಶ್,
    ಎರಡು ದಿನದ ಪ್ರವಾಸ ಇದ್ದಾಗ ಜಾಸ್ತಿ ರಾತ್ರಿ ವೇಳೆನೆ ಪ್ರಯಾಣ ಮಾಡೋದು ಸರ್.
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ============

    @ಸುಧೇಶ್,
    ನೋಡೋಣ ಸರ್.. ಪಬ್ಲಿಶರ್ ಸಿಕ್ಕರೆ ಟ್ರೈ ಮಾಡೋಣ.. ಹ್ಹ ಹ್ಹ ಹ್ಹ..
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ============

    @Leela,
    Sorry for not mentioning real names bcoz i forgot the names :(
    i thought of not to disturb indra again for everyone's names.
    Thank you for liking the article.

    @vikas,
    hmmm... ಹಾಗಂತೀರಾ..?
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    ============

    ReplyDelete