Tuesday, April 7, 2009

ಮೊದಲಸಲ....



ಎರಡು ವರ್ಷಗಳ ಹಿಂದೆ ನಾನು ಮೊದಲ ಬಾರಿಗೆ ಹೊಸ ಪ್ರಾಜೆಕ್ಟಿನ ವಿಷಯವಾಗಿ ಇಟಲಿ ದೇಶದ ಗ್ರಾಹಕನ ಜೊತೆ ಟೆಕ್ಸ್ಟ್ ಚಾಟ್ (text chat) ಮಾಡಬೇಕಾಯಿತು. ಆ ವ್ಯಕ್ತಿಯ ಹೆಸರು "ಲೂಕಾ" ಅಂತ. ಸರಿ, ಟೆಕ್ಸ್ಟ್ ಚಾಟ್ ಮಾಡಲು ಶುರು ಮಾಡಿದೆ.
ನನ್ನ ಕಡೆಯಿಂದ "ಹಲೋ ಸರ್" ಅಂತ ಕಳಿಸಿದೆ.
ಅ ಕಡೆಯಿಂದ "ನಾನು ಸರ್ ಅಲ್ಲ" ಎನ್ನುವ ಉತ್ತರ ಬಂತು.
(ಒಹ್!!! ಅವರು ಹೆಂಗಸೋ, ಗಂಡಸೋ ತಿಳಿಯದೆ ಸರ್ ಅಂದುಬಿಟ್ಟೆ. ಅವರು ಹೆಂಗಸು ಇರಬೇಕು ಎಂದುಕೊಳ್ಳುತ್ತ, ಕ್ಷಮೆ ಯಾಚಿಸಲು ಮತ್ತೊಂದು ಸಂದೇಶ ಕಳಿಸಿದೆ.)
ನಾನು ಆಗ "ಸಾರೀ ಮೇಡಂ" ಅಂದೇ..
ಆಗ ಆ ಕಡೆಯಿಂದ "ನಾನು ಮೇಡಂ ಅಲ್ಲ"
(ನನಗ್ಯಾಕೋ ಕಸಿವಿಸಿಯಾಯಿತು, ಇದೇನಪ್ಪ, ಅತ್ತ ಸರ್ ಅಲ್ಲ, ಇತ್ತ ಮೇಡಂ ಅಲ್ಲ... ತೆಲೆಕೆಡಿಸಿಕೊಳ್ಳುತ್ತ ಕೂತೆ..,
ಸ್ವಲ್ಪ ಸಮಯದ ಬಳಿಕ, ಆ ಕಡೆಯಿಂದ ಇನ್ನೊದು ಸಂದೇಶ ಬಂತು..)
ಆ ಕಡೆಯಿಂದ: "ನಾನು ಸಾರ್ ಅಲ್ಲ, ಮೇಡಂ ಅಲ್ಲ, ನನ್ನ ಹೆಸರು ಲೂಕಾ ಅಂತ (ನಾನು ಗಂಡಸೇ), ನನ್ನ ಹೆಸರಿಡಿದೆ ಕರಿ. ನಾನು ನಿನ್ನ ಸ್ನೇಹಿತನಿದ್ದಂತೆ.."
ನನಗೆ ಆ ಮಾತನ್ನು ಕೇಳಿ ಸ್ವಲ್ಪ ನಗು ಬಂತು ಹಾಗೆ, ಆವರ ಅತ್ಮಿಯತೆಗೆ ತುಂಬಾ ಸಂತೋಷವು ಆಯ್ತು.
ಎರಡು ವರ್ಷಗಳಿಂದ ಅದೇ ಗ್ರಾಹಕನ ಜೊತೆ ಕೆಲಸ ಮಾಡ್ತಾ ಇದೀನಿ. ತುಂಬಾ ಒಳ್ಳೆ ಮನುಷ್ಯ. ಎಂದಿಗೂ ಆ ವ್ಯಕ್ತಿ ನನ್ನನ್ನು ಚಿಕ್ಕವನಂತೆ ಕಂಡಿಲ್ಲ,
ನನ್ನನ್ನು ಸ್ನೇಹಿತನಿಗಿಂತ ಹೆಚ್ಚಾಗಿ ಆತ್ಮಿಯತೆಯಿಂದ ಕಾಣುತ್ತಾನೆ.
ಇಂತ ಒಳ್ಳೆ ಗ್ರಾಹಕ,
ಕ್ಷಮಿಸಿ,
ಸ್ನೇಹಿತನನ್ನು ಪಡೆದ ನಾನು ಧನ್ಯ....
ಚಿರಕಾಲ ಇರಲಿ ಈ ಬಂಧ...

Share/Save/Bookmark

9 comments:

  1. ಶಿವಪ್ರಕಾಶ್...

    ನಿಜ ವಿದೇಶಿಯರು ಹೆಸರಿನಿಂದ ಕರೆಯಿಸಿಕೊಳ್ಳಲು ಇಷ್ಟಪಡುತ್ತಾರೆ...

    ನನಗೂ ಒಬ್ಬ ಸ್ನೇಹಿತರಿದ್ದಾರೆ..
    ಹಾಲೆಂಡ ದೇಶದವರು...
    ನನಗಿಂತ ಹಿರಿಯರು..
    ವಯಸ್ಸಿನಲ್ಲಿ, ಜ್ಞಾನದಲ್ಲಿ..

    ಅದು ನಮ್ಮ ಸ್ನೇಹಕ್ಕೆ ಅಡ್ಡಿಯಾಗಿಲ್ಲ....

    ಆ ರೀತಿಯ ಬಾಂಧವ್ಯದ ಪ್ರಸ್ಥಾವನೆ ಬಂದಿದ್ದು ಅವರಿಂದಲೇ...

    ಚಂದದ ಬರಹ..
    ಅಭಿನಂದನೆಗಳು...

    ReplyDelete
  2. vayassina antaravilla snehadalli..chirkala irali ee sneha....

    ReplyDelete
  3. ನಿಮ್ಮ ಗ್ರಾಹಕ ಅಲ್ಲ ಸ್ನೇಹಿತನ ಸೌಜನ್ಯದ ವರ್ತನೆಗೆ ತಮಾಷೆಯ touch ಕೊಟ್ಟು ಚೆನ್ನಾಗಿ ಬರೆದಿದ್ದೀರಿ.

    ReplyDelete
  4. ನಿಜ, ವಿದೇಶಗಳಲ್ಲಿ ನಮ್ಮಲ್ಲಿದ್ದ ಹಾಗೆ ಹಣ ಅಂತಸ್ತಿನ ಹಮ್ಮು ಇರುವುದಿಲ್ಲ. ತುಂಬಾ ಸರಳವಾಗಿರುತ್ತಾರೆ.

    ReplyDelete
  5. ಚೆನ್ನಾಗಿದೆರೀ ನಿಮ್ಮ ಗ್ರಾಹಕನ ವರಸೆ. GUD. ಒಳ್ಳೆಯ ಗೆಳಯ ಸಿಕ್ಕಿದ್ನಲ್ಲಾ....
    -ಧರಿತ್ರಿ

    ReplyDelete
  6. ಶಿವಪ್ರಕಾಶ್,

    ಮೊದಲು ಓದುತ್ತಾ ತಕ್ಷಣ ನಗು ಬಂತು...[ನೀವು ಹೇಳುವ ಶೈಲಿಗೆ ನಗುಬಂತು] ನಂತರ ಆತ ನಿಜಕ್ಕೂ doun to earth ಅನ್ನಿಸಿತು...ಒಳ್ಳೆಯ ಗೆಳೆಯನನ್ನು ಶಾಶ್ವತವಾಗಿ ಉಳಿಸಿಕೊಳ್ಳಿ...

    ReplyDelete
  7. ಅಂತಸ್ತಿನ ಅಳತೆ ನಮ್ಮಲ್ಲಿ ಮಾತ್ರ ಜೋರು ಅಂತ ಕಾಣುತ್ತೆ.

    ReplyDelete
  8. ಪ್ರಕಾಶ್ ಅವರೇ,
    ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು...
    ==================
    ಮನಸು ಅವರೇ,
    ನಿಮ್ಮ ಆಶಿರ್ವಾದ ಹೀಗೆ ಇರಲಿ..
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು...
    ==================
    PARAANJAPE K.N. ಅವರೇ,
    ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು...
    ===================
    ಗುರುಮೂರ್ತಿ ಅವರೇ,
    ಹೌದು, ನೀವು ಹೇಳಿದ್ದು ನಿಜ..
    ತಾವು ದೊಡ್ಡವರು ಎಂದು ತೋರಿಸಿಕೊಳ್ಳುವುದಿಲ್ಲ.
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು...
    ===================
    ಧರಿತ್ರಿ ಅವರೇ,
    ನಿಮ್ಮ ಆಶಿರ್ವಾದ ಹೀಗೆ ಇರಲಿ..
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು...
    ===================
    ಶಿವು ಅವರೇ,
    ನೀವು ಲೇಖನ ಓದಿ ನಕ್ಕಿದ್ದಕ್ಕೆ ನಾನು ಧನ್ಯ..
    ಲೂಕ ನಿಜವಾಗಿಯೂ Down to earth.
    ನಿಮ್ಮ ಆಶಿರ್ವಾದ ಹೀಗೆ ಇರಲಿ..
    ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು...
    ===================
    sunaath ಅವರೇ,
    ಅಂತರಗಳನ್ನು ನಾವೇ ಹೆಚ್ಚಾಗಿ ನೋಡುವುದು ಅಂತ ನನಗೆ ತಿಳಿದಿದ್ದು ಲೂಕಾ ಜೊತೆ ಮಾತನಾಡಿದಾಗಲೇ..
    ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು...

    ReplyDelete
  9. hahahaha.....ee article modhalu odhidhe...comment aakiralilla.....chennagidhe shivu....

    ReplyDelete