Thursday, April 23, 2009

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ..

ಮೊನ್ನೆ ನನ್ನ ಗೆಳೆಯ ಗಣೇಶ್, ನನಗೊಂದು ಲಿಂಕ್ ಕಳಿಸಿ, ಆ ಹಾಡು ಕೇಳು ಅಂದ..
ನಾನು ಸರಿ ಅಂತ ಕೇಳಿದೆ..
ನೀವು ಆ ಹಾಡನ್ನು ಕೇಳಿರಬಹುದು,
ಆದರೆ ನಾನು ಕೇಳಿದ್ದು ಇದೆ ಮೊದಲ ಸಾರಿ... ನನಗಂತೂ ತುಂಬ ಇಷ್ಟ ಆಯ್ತು.. ಕೇಳಿರದವರು ಕೇಳಿ ಆನಂದಿಸಿ...

Get this widget | Track details | eSnips Social DNA

ಗಾಯನ: ಬಿ.ಆರ್.ಛಾಯ
ಸಂಗೀತ: ಸಿ. ಅಶ್ವಥ್
ರಚನೆ: ಚನ್ನವೀರ ಕಣವಿ

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು ||
ಅದಕೇ ಹಿಮ್ಮೇಳವನೆ ಸೂಸಿಪಹ ಸುಳಿಗಾಳಿ
ತೆಂಗು ಗರಿಗಳ ನಡುವೆ ನುಸುಳುತಿತ್ತು ||ಪ||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||

ಇಳೆವೆಣ್ಣು ಮೈದೊಳೆದು ಮಕರಂದದರಿಶಣದಿ
ಹೂ ಮುಡಿದು ಮದುಮಗಳ ಹೋಲುತಿತ್ತು ||೨||
ಮೂಡಣದಿ ನೇಸರನ ನಗೆ ಮೊಗದಾ ಶ್ರೀಕಾಂತಿ
ಬಿಳಿಯಾ ಮೋಡದ ಹಿಂದೆ ಹೊಳೆಯುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||

ಹುಲ್ಲೆಸಳು ಹೂಪಕಳೆ ಮುತ್ತು ಹನಿಗಳ ಮಿಂಚು ||೨||
ಸೊಡರಿನಲಿ ಆರತಿಯ ಬೆಳಗುತಿತ್ತು
ಕೊರಲುಕ್ಕಿ ಹಾಡುತಿಹ ಚಿಕ್ಕಪಕ್ಕಿಯ ಬಳಗ ||೨||
ಶುಭಮಸ್ತು ಶುಭಮಸ್ತು ಎನ್ನುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||

ತಳಿರ ತೋರಣದಲ್ಲಿ ಬಳ್ಳಿ ಮಾಡಗಳಲ್ಲಿ
ದುಂಬಿಗಳ ಓಂಕಾರ ಹೊಮ್ಮುತಿತ್ತು ||೨||
ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ
ಚಿಟ್ಟೆ ರಿಂಗಣ ಗುಣಿತ ಹಾಕುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||

ಉಷೆಯ ನುಙ್ಗದಪಿನಲಿ ಹರ್ಷಬಾಷ್ಪಗಳಂತೆ
ಮರದ ಹನಿ ತಟಪಟನೆ ಉದುರುತಿತ್ತು ||೨||
ಸೃಷ್ಠಿಲೀಲೆಯೊಳಿಂತು ತಲ್ಲೀನವಾದ ಮನ
ಮುಂಬಾಳ ಸವಿಗನಸ ನೆನೆಯುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಆ.. ಆ….. ಆ… ಆ…..ಆ.. ಆ….. ಆ….

ಇದರ ವೀಡಿಯೊ ನೋಡಲು ಇಲ್ಲಿ ಕ್ಲಿಕ್ಕ್ಕಿಸಿ

ಕೃಪೆ :
http://www.kannadalyrics.com
http://www.esnips.com
http://www.videogirmit.com
Share/Save/Bookmark

17 comments:

  1. ಹಾಡು ತುಂಬಾ ಚೆನ್ನಾಗಿದೆ. ಎಂ.ಡಿ.ಪಲ್ಲವಿಯವರು ಹಾಡಿದ್ದನ್ನ ಕೇಳಿದ್ದೆ. ಛಾಯ ಅವರದ್ದೂ ಕೇಳಿ ನೋಡುತ್ತೇನೆ.
    ಹಾಡನ್ನು post ಮಾಡಿದ್ದಕ್ಕೆ ಧನ್ಯವಾದಗಳು :-)

    ReplyDelete
  2. ಶಿವಪ್ರಕಾಶ್
    ನೀವು ಕಳಿಸಿದ ಹಾಡಿನ ವಿಡಿಯೋ ನೋಡಿದೆ, ಕೇಳಿದೆ, ಚೆನ್ನಾಗಿದೆ. Thanks

    ReplyDelete
  3. ಹಹಹ...ನಾನೂ ಕೇಳಿದ್ದೀನಿ..ತುಂಬಾ ಚೆನ್ನಾಗಿದೆ. ಛಾಯಾ ಧ್ವನಿಯಲ್ಲಿ ಕೇಳಕ್ಕೆ ಖುಷಿಯಾಗುತ್ತೆ.
    -ಧರಿತ್ರಿ

    ReplyDelete
  4. ee haadu tumba chennagide, nanna istada haadu kooda...inta olleya haadannu kottidakke dhanyavadagalu

    ReplyDelete
  5. ತುಂಬಾ ಸುಂದರವಾದ ಹಾಡು. ಬೀ. ಆರ್. ಛಾಯಾ ತುಂಬಾ ಚೆನ್ನಾಗಿ ಹಾಡಿದ್ದಾರೆ. ಇಷ್ಟವಾಯಿತು.

    ಹಾಡಿನ ಬಗ್ಗೆ ಹೇಳಿದ್ದಕ್ಕೆ ಮತ್ತು ಅದರ ಸಾಹಿತ್ಯವನ್ನು ಇಲ್ಲಿ ನೀಡಿದ್ದಕ್ಕೆ ಧನ್ಯವಾದಗಳು.

    ReplyDelete
  6. ಜ್ಯೋತಿ, PARAANJAPE K.N. , ಧರಿತ್ರಿ, ಮನಸು , ಉಮೀ ಅವರೇ
    ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  7. ಸುಂದರವಾದ ಕವನಕ್ಕೆ ಸುಮಧುರವಾದ ಧ್ವನಿ.
    ಧನ್ಯವಾದಗಳು, ಶಿವಪ್ರಕಾಶ.

    ReplyDelete
  8. ಶಿವಪ್ರಕಾಶ್,

    ಭಾವ ಗೀತೆಯಲ್ಲಿ ಈ ಹಾಡು ನನಗಿಷ್ಟವಾದದ್ದು...ನಾನು ಆಗಾಗ ಕೇಳುತ್ತಿರುತ್ತೇನೆ....ಛಾಯಾ ಅಂತೂ ಅದ್ಬುತವಾಗಿ ಹಾಡಿದ್ದಾರೆ...ಮತ್ತೊಮ್ಮೆ ಕೇಳಿಸಿದ್ದಕ್ಕೆ ಧನ್ಯವಾದಗಳು...

    ReplyDelete
  9. sunaath ಹಾಗು shivu ಅವರೇ,
    ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  10. ಬಹಳ ಸುಂದರ ಕವಿತೆ ನೆನೆಪು ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು..

    ಈ ಹಾಡಿನ video ವನ್ನೂ ಒಮ್ಮೆ ನೋಡಿದ ನನಪು.. ಮಲೆನಾಡಿನ ಮಳೆಯ ಚಿತ್ರೀಕರಣ ಸುಂದರವಾಗಿ ಮಾಡಿದ್ದಾರೆ ಅದರಲ್ಲಿ..

    ReplyDelete
  11. Godavari ಅವರೇ,
    ಪ್ರತಿಕ್ರಿಯೆಗೆ ಧನ್ಯವಾದಗಳು..

    ReplyDelete
  12. ಸುಂದರ ಭಾವಗೀತೆ. ಹೆಚ್ಚು ಕಡಿಮೆ ಎಲ್ಲಾ ಭಾವಗೀತೆಗಳು ಮಧುರ ಹಾಗೂ ಮನಸ್ಸಿಗೆ ತಟ್ಟುವ ಹಾಗಿರುತ್ತವೆ. Lyrics ಕೊಟ್ಟಿದ್ದಕ್ಕೆ ಧನ್ಯವಾದಗಳು

    ReplyDelete
  13. Deepasmitha ಅವರೇ,
    ಪ್ರತಿಕ್ರಿಯೆಗೆ ಧನ್ಯವಾದಗಳು..

    ReplyDelete
  14. ನೈಸ್ ಸಾಂಗ್,,, ಯಾವಾಗಲೋ ಕೇಳಿದ್ದು... ಇನ್ನೊಮ್ಮೆ ನೆನಪಿಸಿದಕ್ಕೆ ಥ್ಯಾಂಕ್ಸ್
    ಗುರು

    ReplyDelete
  15. ಗುರು ಅವರೇ,
    ಪ್ರತಿಕ್ರಿಯೆಗೆ ಧನ್ಯವಾದಗಳು :)

    ReplyDelete
  16. ಶಿವುರವರೇ
    ತಡವಾಗಿ ಬರುತ್ತಿದ್ದೇನೆ...(ಜಲನಯನ...ಮೇಡಂ.....ಹಹಹಹ)
    ಕ್ಷಮೆಯಿರಲಿ, ನನ್ನ ಬ್ಲಾಗಿಗೆ ಬಂದಿದ್ದೀರೆಂದು ಅಂದುಕೊಂಡಿದ್ದೇನೆ..
    ಕಲ್ಪನೆಯ ಅಜ್ಜನಿಗೆ ಕಲ್ಪನೆಯ ಗಹನತೆಗೆ ಪರಾಕ್..
    ಚನ್ನಾಗಿದೆ ಬರಹ...
    ಅತ್ಯುತ್ತಮ ಛಾಯಾಗ್ರಾಹಕರಾದ ನೀವು ಬರಹದಲ್ಲೂ ಅರ್ಥ ಹುಡುಕಬೇಕು
    ಹೊರಗೆ ಬಂದು ನೋಡಿದಾಗಲೇ ಕೆಲವೊಮ್ಮೆ ಮಳೆ ಬಂದು ಹೋಗಿದೆಯೆಂದು ಗೊತ್ತಾಗೋದು...

    ReplyDelete
  17. ಜಲನಯನ ಅವರೇ,
    ನಿಮ್ಮ ಬ್ಲಾಗ್ ತುಂಬಾ ಚನ್ನಾಗಿದೆ...
    ನಿಮ್ಮ ಪ್ರೋತ್ಸಾಹಕ್ಕೆ ನಾನು ಚಿರ ಋಣಿ...
    ನನ್ನ ಬ್ಲಾಗ್ ಗೆ ಭೇಟಿ ಕೊಟ್ಟು, ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ನನ್ನ ಅನಂತ ಅನಂತ ಧನ್ಯವಾದಗಳು...

    ReplyDelete